Realme GT 5G ಮುಂದಿನ ವಾರ ಜಾಗತಿಕ ಮಾರುಕಟ್ಟೆಗೆ ಕಾಲಿಡಲಿದ್ದು ಈ ವಿಶೇಷ ಫೀಚರ್‌ಗಳೊಂದಿಗೆ ಬರುವ ನಿರೀಕ್ಷೆ

Realme GT 5G ಮುಂದಿನ ವಾರ ಜಾಗತಿಕ ಮಾರುಕಟ್ಟೆಗೆ ಕಾಲಿಡಲಿದ್ದು ಈ ವಿಶೇಷ ಫೀಚರ್‌ಗಳೊಂದಿಗೆ ಬರುವ ನಿರೀಕ್ಷೆ
HIGHLIGHTS

Realme GT 5G ಸ್ಮಾರ್ಟ್‌ಫೋನ್ 6.43 ಇಂಚಿನ OLED ಡಿಸ್ಪ್ಲೇಯೊಂದಿಗೆ ಬರಲಿದೆ.

ಕಂಪನಿಯು ಜೂನ್ 15 ರಂದು ಯುರೋಪಿನಲ್ಲಿ Realme GT 5G ಅನ್ನು ಬಿಡುಗಡೆ ಮಾಡಲಿದೆ

8GB RAM + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯ

ಈ ಸ್ಮಾರ್ಟ್ಫೋನ್ ಕಂಪನಿ ತನ್ನ ಹೊಸ ಪ್ರಮುಖ ಸ್ಮಾರ್ಟ್ಫೋನ್ Realme GT 5G ಅನ್ನು ಶೀಘ್ರದಲ್ಲೇ ಜಾಗತಿಕವಾಗಿ ಬಿಡುಗಡೆ ಮಾಡಲಿದೆ. ಈಗ ಕಂಪನಿಯು ಜೂನ್ 15 ರಂದು ಯುರೋಪಿನಲ್ಲಿ Realme GT 5G ಅನ್ನು ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 ಚಿಪ್‌ಸೆಟ್‌ನೊಂದಿಗೆ ತನ್ನ ಪ್ರಮುಖ ಫೋನ್ ಅನ್ನು ಈ ತಿಂಗಳ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ relame ತನ್ನ ಒಂದು ಟ್ವೀಟ್‌ನಲ್ಲಿ ದೃಢಪಡಿಸಿದೆ. ಇದು ಜಾಗತಿಕ ಉಡಾವಣೆಯಾಗಲಿದೆ. ಅದಕ್ಕಾಗಿಯೇ ಈ ಫೋನ್ ಯುರೋಪ್ ಹೊರತುಪಡಿಸಿ ಬೇರೆ ಯಾವ ದೇಶದಲ್ಲಿ ಬಿಡುಗಡೆಯಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.

Realme GT 5G ನಿರೀಕ್ಷಿತ ಬೆಲೆ

ಟೆಕ್ ಟಿಪ್‌ಸ್ಟರ್ ಸುಧಾಂಶು ಅಂಬೋರ್ ಪ್ರಕಾರ Realme GT 5G ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ಮತ್ತು 12GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಅವುಗಳ ಬೆಲೆ ಕ್ರಮವಾಗಿ 400 ಯುರೋ (ಸುಮಾರು 35,700 ರೂಗಳು) ಮತ್ತು 450 ಯುರೋ (ಸುಮಾರು 40,200 ರೂಗಳು) ಆಗಿರುತ್ತದೆ. ಈ ಸ್ಮಾರ್ಟ್ಫೋನ್ ಬ್ಲೂ ಗ್ಲಾಸ್ ಮತ್ತು ಹಳದಿ ವೆಗಾನ್ ಲೆದರ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಜೂನ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Realme GT 5G ನಿರೀಕ್ಷಿತ ವಿಶೇಷಣಗಳು

ಸದ್ಯದ ಸೋರಿಕೆಯ ಪ್ರಕಾರ ಈ Realme GT 5G ಸ್ಮಾರ್ಟ್‌ಫೋನ್ 6.43 ಇಂಚಿನ OLED ಡಿಸ್ಪ್ಲೇಯೊಂದಿಗೆ ಬರಲಿದೆ. ಇದರ ರಿಫ್ರೆಶ್ ದರ 120Hz ಮತ್ತು 20: 9 ಅಸ್ಪೆಟ್ ರೇಷು ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್ಫೋನ್ ಅಲ್ಲಿ ಪವರ್‌ಫುಲ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್ 12GB RAM ಮತ್ತು 256GB  ಇಂಟರ್ನಲ್ ಸ್ಟೋರೇಜ್ ನೀಡಲಾಗುವುದು. ಇದಲ್ಲದೆ 5000mAh ಬ್ಯಾಟರಿಯನ್ನು ಫೋನ್‌ನಲ್ಲಿ ಕಾಣಬಹುದು ಇದು 125W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅದೇ ಸಮಯದಲ್ಲಿ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 11 ಆಧಾರಿತ ರಿಯಲ್ ಮೀ ಯುಐ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಫೋನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು Realme GT 5G ಸ್ಮಾರ್ಟ್‌ಫೋನ್‌ನಲ್ಲಿ ನೀಡಬಹುದು. ಇದು ಮೊದಲ 64MP ಪ್ರೈಮರಿ ಸೆನ್ಸಾರ್ ಎರಡನೇ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ 2MP ಮ್ಯಾಕ್ರೋ ಲೆನ್ಸ್ ಹೊಂದಿರುತ್ತದೆ. 16MP ಸೆಲ್ಫಿ ಕ್ಯಾಮೆರಾವನ್ನು ಅದರ ಮುಂಭಾಗದಲ್ಲಿ ಕಾಣಬಹುದು. ಇದಲ್ಲದೆ ಮುಂಬರುವ ಸ್ಮಾರ್ಟ್ಫೋನ್ ಸಂಪರ್ಕಕ್ಕಾಗಿ ವೈ-ಫೈ ಜಿಪಿಎಸ್ ಬ್ಲೂಟೂತ್ ಮತ್ತು ಯುಎಸ್ಬಿ ಪೋರ್ಟ್ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗುವುದು.

ಇತ್ತೀಚೆಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆ

ಕಂಪನಿಯು ಇತ್ತೀಚೆಗೆ ಭಾರತದಲ್ಲಿ Realme C25s ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 9999 ರೂಗಳಾಗಿದೆ. ಈ ಫೋನಲ್ಲಿ 6.5 ಇಂಚಿನ HD+ ಡಿಸ್ಪ್ಲೇಯನ್ನು ನೀಡಲಾಗಿದೆ. ಇದರ ರೆಸಲ್ಯೂಶನ್ 720 x 1600 ಪಿಕ್ಸೆಲ್‌ಗಳು. ಇದರ ರಿಫ್ರೆಶ್ ದರ 60Hz ಮತ್ತು ಗರಿಷ್ಠ ಹೊಳಪು 570 ನಿಟ್ಸ್ ಫೋನ್ ಮೀಡಿಯಾ ಟೆಕ್ ಹೆಲಿಯೊ G85 ಪ್ರೊಸೆಸರ್ ಬೆಂಬಲದೊಂದಿಗೆ ಬರಲಿದೆ. 

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಇದರ ಪ್ರೈಮರಿ ಕ್ಯಾಮೆರಾ 13MP ಇದಲ್ಲದೆ 2MP ಡೆಪ್ತ್ ಸೆನ್ಸರ್ ಮತ್ತು 2MP ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. ಸೆಲ್ಫಿಗಾಗಿ 8MP ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧಾರಿತ ರಿಯಲ್ಮೆ ಯುಐ 2.0 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಪವರ್ ಬ್ಯಾಕಪ್‌ಗಾಗಿ 6000mAh ಬ್ಯಾಟರಿಯನ್ನು ಒದಗಿಸಲಾಗಿದೆ ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo