ಭಾರತದಲ್ಲಿ ಹೆಚ್ಚಾಗಿ ಸ್ಮಾರ್ಟ್ಫೋನ್ ಮಾರಾಟ ಮಾಡುತ್ತಿರುವ ರಿಯಲ್‌ಮಿ ಬ್ರಾಂಡ್ ತನ್ನ ಹೊಚ್ಚ ಹೊಸ ಸ್ಮಾರ್ಟ್ಫೋನ್ Realme GT 5 ಸ್ಮಾರ್ಟ್ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಚೀನಾದಲ್ಲಿ ಬಿಡುಗಡೆಗೊಳಿಸಿದೆ. ಈ ಸರಣಿಯ ಸ್ಮಾರ್ಟ್ಫೋನ್ ಈಗಾಗಲೇ ಭಾರತದಲ್ಲಿ ಲಭ್ಯವಿದೆ. ಈ ಹೊಸ ಸ್ಮಾರ್ಟ್ಫೋನ್ ವಿಶೇಷತೆ ಅಂದ್ರೆ 240W ಫಾಸ್ಟ್ ಚಾರ್ಜಿಂಗ್ ಮತ್ತು 24GB RAM ಜೊತೆಗೆ Snapdragon 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. Realme GT 5 ವಿಶೇಷತೆಗಳು, ವಿನ್ಯಾಸ, ಬೆಲೆ ಮತ್ತು ಹೆಚ್ಚಿನವುಗಳನ್ನು ಮುಂದೆ ತಿಳಿಯೋಣ.
ಈ ಹೊಸ ಮ್ಸರ್ಟ್ಫೋನ್ ಹಿಂಭಾಗದಲ್ಲಿ ಮಿರಾಕಲ್ ಗ್ಲಾಸ್ ನೀಡಲು ರಿಯಲ್‌ಮಿ BYD (Build Your Dreams) ಎಲೆಕ್ಟ್ರಾನಿಕ್ಸ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಫೋನ್ ಹಿಂಭಾಗದಲ್ಲಿ ಡ್ಯುಯಲ್ ಟೋನ್ ಬಾಡಿಯೊಂದಿಗೆ ದೊಡ್ಡ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಈ ಮಾಡ್ಯೂಲ್ ಎಡಭಾಗದಲ್ಲಿರುವ ಕ್ಯಾಮೆರಾಗಳಿಗಾಗಿ 2 ದೊಡ್ಡ ರಿಂಗ್ ನೀಡಿದೆ. ಫೋನ್ ವಿವಿಧ ಬಣ್ಣಗಳನ್ನು ಮತ್ತು ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಅನ್ನು ಹೊಂದಿದೆ. ಅಲ್ಲದೆ ಬ್ಯಾಕ್ ಪ್ಯಾನಲ್ ಮೇಲೆ LED ಲೈಟ್ ಸ್ಟ್ರಿಪ್‌ಗಳನ್ನು ಒಳಗೊಂಡಿದೆ.
ಈ ಸ್ಮಾರ್ಟ್ಫೋನ್ ಫ್ಲೋಯಿಂಗ್ ಸಿಲ್ವರ್ ಇಲ್ಯೂಷನ್ ಮತ್ತು ಸ್ಟಾರಿ ಓಯಸಿಸ್ (ಗ್ರೀನ್) ಎಂಬ ಎರಡು ಬಣ್ಣ ರೂಪಾಂತರಗಳಲ್ಲಿ ಘೋಷಿಸಲಾಯಿತು. ಇದು ವಿವಿಧ ಸ್ಟೋರೇಜ್ ಸಂರಚನೆಗಳಲ್ಲಿ ಲಭ್ಯವಾಗಲಿದೆ. ಈ ಫೋನ್ 4ನೇ ಸೆಪ್ಟೆಂಬರ್ 2023 ರಿಂದ ಚೀನಾದಲ್ಲಿ ಸ್ಮಾರ್ಟ್ಫೋನ್ ಮಾರಾಟವಾಗಲಿದೆ.
12GB – 256GB > RMB 2999 (Rs.34,500)
16GB – 512GB > RMB 3299 (Rs.37,400)
24GB – 1024GB > RMB 3799 (Rs.43,600)
https://twitter.com/realmeglobal/status/1696130519933616147?ref_src=twsrc%5Etfw
ಈ ಚೀನಾದ Realme GT 5 ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ 6.74 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದ್ದು 1.5K ರೆಸಲ್ಯೂಶನ್ ಮತ್ತು ಹೆಚ್ಚಿನ 144Hz ರಿಫ್ರೆಶ್ ದರವನ್ನು ನೀಡುತ್ತದೆ. ಪ್ಯಾನಲ್ ಮಧ್ಯದಲ್ಲಿ ಜೋಡಿಸಲಾದ ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಸ್ಮಾರ್ಟ್ಫೋನ್ X7 ಡಿಸ್ಪ್ಲೇ ಚಿಪ್ ಅನ್ನು ಸಹ ಹೊಂದಿದೆ. ಇದರಲ್ಲಿ ಮತ್ತಷ್ಟು ಸುಧಾರಿತ ಅನುಭವಕ್ಕಾಗಿ PixelWords ಅಭಿವೃದ್ಧಿಪಡಿಸಿದೆ. ಇದರ ಸ್ಕ್ರೀನ್ 1400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಅನ್ನು 2160 PWM ಮಬ್ಬಾಗಿಸುವಿಕೆ 1.46mm ಕಿರಿದಾದ ಬೆಜೆಲ್‌ಗಳು ಮತ್ತು 93.7% ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ.
ಇದರ ಅಡಿಯಲ್ಲಿ Qualcomm Snapdragon 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಇದು 24GB ಯ LPDDR5 RAM ಮತ್ತು 1TB UFS 4.0 ಸ್ಟೋರೇಜ್ ಜೊತೆಗೆ ಜೋಡಿಯಾಗಿದೆ. ಗಮನಾರ್ಹವಾಗಿ ಹೊಸ ಸ್ಮಾರ್ಟ್‌ಫೋನ್ ವಿಭಿನ್ನ ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ವೇಗವನ್ನು ಒಳಗೊಂಡಿರುವ ಎರಡು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಧಾರಿತ Realme UI 4.0 ಕಸ್ಟಮ್ ಸ್ಕಿನ್ ಅನ್ನು ಬಾಕ್ಸ್‌ನಿಂದ ಹೊರಗಿದೆ.
Realme GT 5 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಪ್ರೈಮರಿ ಸೆನ್ಸರ್ 50MP ಮೆಗಾಪಿಕ್ಸೆಲ್ ಸೋನಿ IMX890 ಆಗಿದ್ದು ಅದು OIS ಮತ್ತು PDAF ಅನ್ನು ಬೆಂಬಲಿಸುತ್ತದೆ. ಇದನ್ನು 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ನೊಂದಿಗೆ ಜೋಡಿಸಲಾಗಿದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಸ್ಮಾರ್ಟ್ಫೋನ್ 4600mAh ಬ್ಯಾಟರಿಯೊಂದಿಗೆ ಪವರ್ಫುಲ್ 240W ಫಾಸ್ಟ್ ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ. ಇದು ಕೇವಲ 9 ನಿಮಿಷಗಳು ಮತ್ತು 30 ಸೆಕೆಂಡುಗಳ ಚಾರ್ಜಿಂಗ್‌ನಲ್ಲಿ ಪೂರ್ಣ ಚಾರ್ಜ್ ಅನ್ನು ಸಕ್ರಿಯಗೊಳಿಸುತ್ತದೆ. ಇದು 2 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆ. ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, NFC, ಹೈ-ರೆಸ್ ಆಡಿಯೋ, ಡಾಲ್ಬಿ ಅಟ್ಮಾಸ್, ವರ್ಲ್‌ವಿಂಡ್ ಮೆಮೊರಿ ಎಂಜಿನ್ 2.0 ಇದು ಹಿನ್ನೆಲೆಯಲ್ಲಿ 76 ಅಪ್ಲಿಕೇಶನ್‌ಗಳನ್ನು ರನ್ ಮಾಡಲು ನಿಮಗೆ ಅನುಮತಿಸುತ್ತದೆ.