Realme C61 ಸ್ಮಾರ್ಟ್ಫೋನ್ 32MP AI ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆ!

Updated on 28-Jun-2024
HIGHLIGHTS

ಭಾರತದಲ್ಲಿ ರಿಯಲ್‌ಮಿ (Realme) ಸದ್ದಿಲ್ಲದೇ ಮತ್ತೊಂದು ಹೊಸ ಬಜೆಟ್ 4G ಫೋನ್ ಬಿಡುಗಡೆಗೊಳಿಸಿದೆ.

Realme C61 ಬರೋಬ್ಬರಿ 32MP AI ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ

Realme C61 ಫೋನ್‌ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 7,699 ರೂಗಳಾಗಿವೆ.

ಭಾರತದಲ್ಲಿ ರಿಯಲ್‌ಮಿ (Realme) ಸದ್ದಿಲ್ಲದೇ ಬಿಡುಗಡೆಯಾದ Realme C61 ಸ್ಮಾರ್ಟ್ಫೋನ್ ಅಂತಿಮವಾಗಿ ತನ್ನ C ಸರಣಿಯ ಅಡಿಯಲ್ಲಿ ಮತ್ತೊಂದು ಹೊಸ 4G ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿದೆ. ಇದು ರಿಯಲ್ಮೆ ಕಂಪನಿಯ ಇತ್ತೀಚಿನ ಫೋನ್ ಆಗಿದ್ದು ಇದು ಬಾಳಿಕೆ ಬರುವ ಮತ್ತು ಬರೋಬ್ಬರಿ 32MP AI ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಹೊಸ Realme C61 ಸ್ಮಾರ್ಟ್‌ಫೋನ್ 128GB ಸ್ಟೋರೇಜ್ ಮತ್ತು 6GB RAM ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇತ್ತೀಚಿನ Realme C61 ಸ್ಮಾರ್ಟ್ಫೋನ್‌ನ ವಿಶೇಷತೆ ಏನು ಎಂದು ತಿಳಿಯಿರಿ.

Also Read: Unlimited 5G ಮತ್ತು ದಿನಕ್ಕೆ 2.5GB ಡೇಟಾ ನೀಡುವ ಏರ್ಟೆಲ್‌ನ 349 ರೂಗಳ ಯೋಜನೆಯ ಪ್ರಯೋಜನಗಳೇನು?

ಭಾರತದಲ್ಲಿ Realme C61 ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್

Realme C61 ಸ್ಮಾರ್ಟ್‌ಫೋನ್ ಸಫಾರಿ ಗ್ರೀನ್ ಮತ್ತು ಮಾರ್ಬಲ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಫೋನ್‌ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 7,699 ರೂಗಳಾದರೆ ಇದರ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 8,499 ರೂಗಳಾಗಿವೆ. ಕೊನೆಯದಾಗಿ ಇದರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 8,999 ರೂ.ಗಳಾಗಿದ್ದು ಹ್ಯಾಂಡ್‌ಸೆಟ್ ಅನ್ನು ಕಂಪನಿಯ ವೆಬ್‌ಸೈಟ್‌ನಿಂದ ರೂ 1000 ರಿಯಾಯಿತಿಯಲ್ಲಿ ಖರೀದಿಸಬಹುದು. ಐಸಿಐಸಿಐ, ಎಚ್‌ಡಿಎಫ್‌ಸಿ, ಆಕ್ಸಿಸ್, ಎಸ್‌ಬಿಐ ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳೊಂದಿಗೆ 900 ರೂಪಾಯಿಗಳ ರಿಯಾಯಿತಿಯಲ್ಲಿ ಪಡೆಯುವ ಅವಕಾಶವಿದೆ.

Realme C61 launched in India

ರಿಯಲ್‌ಮಿ C61 ಫೀಚರ್ ಮತ್ತು ವಿಶೇಷಣಗಳು

Realme C61 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 32MP AI ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನಲ್ಲಿ ಡೆಪ್ತ್ ಸೆನ್ಸರ್ ಕೂಡ ಇದೆ. ಸ್ಮಾರ್ಟ್ಫೋನ್ 5MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹ್ಯಾಂಡ್‌ಸೆಟ್ ಅನ್ನು ಪವರ್ ಮಾಡಲು 10W ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಒದಗಿಸಲಾಗಿದೆ. ಫೋನ್ 6.78 ಇಂಚಿನ LCD ಡಿಸ್ಪ್ಲೇ ಹೊಂದಿದ್ದು ಅದು HD+ ರೆಸಲ್ಯೂಶನ್ ನೀಡುತ್ತದೆ. ಸ್ಕ್ರೀನ್ 560 ನಿಟ್‌ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ.

Realme C61 launched in India

Realme C61 ಸ್ಮಾರ್ಟ್‌ಫೋನ್‌ಗೆ IP54 ರೇಟಿಂಗ್ ನೀಡಲಾಗಿದೆ ಅಂದರೆ ನೀರು ಮತ್ತು ಧೂಳು ನಿರೋಧಕ. UNISOC T612 ಪ್ರೊಸೆಸರ್ ಅನ್ನು ಸ್ಮಾರ್ಟ್ಫೋನ್ ಹೊಂದಿದೆ. ಫೋನ್ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಫೋನ್ 4GB RAM ವರೆಗೆ ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು. Realme ನ ಈ ಫೋನ್ ಅನ್ನು Android 14 OS ಆಧಾರಿತ Realme UI 14 ಕಸ್ಟಮ್ ಸ್ಕಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಹ್ಯಾಂಡ್ಸೆಟ್ 3.5mm ಹೆಡ್ಫೋನ್ ಜ್ಯಾಕ್ ಹೊಂದಿದೆ. ಸಂಪರ್ಕಕ್ಕಾಗಿ ಫೋನ್ Wi-Fi, ಬ್ಲೂಟೂತ್, GPS ಮತ್ತು 4G ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :