108MP ಕ್ಯಾಮೆರಾದ Realme 8 ಮತ್ತು Realme 8 Pro ಇಂದಿನಿಂದ ಪ್ರೀ-ಆರ್ಡರ್ ಶುರು, ಬೆಲೆ ಮತ್ತು ಫೀಚರ್ ತಿಳಿಯಿರಿ
Realme 8 ಮತ್ತು Realme 8 Pro ಮಾರ್ಚ್ 15 ರಂದು ಮಧ್ಯಾಹ್ನ 12 ಗಂಟೆಗೆ ಫೋನ್‌ನ ಪ್ರೀ-ಆರ್ಡರ್ ಪ್ರಾರಂಭ
Realme 8 Pro ಸ್ಮಾರ್ಟ್‌ಫೋನ್ 108MP ಕ್ವಾಡ್ ಕ್ಯಾಮೆರಾ ಪ್ರೈಮೇರಿ Samsung ISOCELL HM2 ಸೆನ್ಸರ್ ಕ್ಯಾಮೆರಾವನ್ನು ಹೊಂದಿದೆ.
5000mAh ಬ್ಯಾಟರಿಯನ್ನು 30W ಫಾಸ್ಟ್ ಚಾರ್ಜರ್ ಸಹಾಯದಿಂದ ಚಾರ್ಜ್ ಮಾಡಬಹುದು.
Realme 8 ಸರಣಿಯ ಸ್ಮಾರ್ಟ್‌ಫೋನ್ ಮಾರ್ಚ್ 24 ರಂದು ಬಿಡುಗಡೆಯಾಗಲಿದೆ. ಈ ದಿನ Realme 8 ಮತ್ತು Realme 8 Pro ಅನ್ನು ಬಿಡುಗಡೆ ಮಾಡಲಾಗುವುದು. ಆದಾಗ್ಯೂ ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸುವ ಮೊದಲ ಮಾರಾಟದ ಅಡಿಯಲ್ಲಿ ಮುನ್ನವೆ ಕಾಯ್ದಿರಿಸಲು ಪಟ್ಟಿ ಮಾಡಲಾಗಿದೆ. ಬಳಕೆದಾರರು ಫೋನ್ ಖರೀದಿಸಲು ನೋಂದಾಯಿಸಿಕೊಂಡರೆ ನಂತರ Realme Buds Air Neo ಬ್ಲೂಟೂತ್ ಹೆಡ್‌ಸೆಟ್ ಅನ್ನು 50% ರಿಯಾಯಿತಿಯಲ್ಲಿ 1499 ರೂಗಳಿಗೆ ಖರೀದಿಸಲು ಅವಕಾಶವನ್ನು ಹೊಂದಿರುತ್ತಾರೆ. ಮಾರ್ಚ್ 15 ರಂದು ಮಧ್ಯಾಹ್ನ 12 ಗಂಟೆಗೆ ಫೋನ್‌ನ ಪ್ರೀ-ಆರ್ಡರ್ ಪ್ರಾರಂಭವಾಗಿದ್ದು ಇದು ಮಾರ್ಚ್ 22 ರವರೆಗೆ ಮುಂದುವರಿಯುತ್ತದೆ.
Realme 8 ಮತ್ತು Realme 8 Pro ನೋಂದಾಯಿಸುವುದೇಗೆ?
Realme 8 ಮತ್ತು 8 Pro ಖರೀದಿಸಲು 1080 ರೂ ಮೌಲ್ಯದ ಫ್ಲಿಪ್‌ಕಾರ್ಟ್ Flipkart Electronic Gift ವೋಚರ್ ಅನ್ನು ಖರೀದಿಸಬೇಕಾಗುತ್ತದೆ. ಇದರ ನಂತರ ಎರಡೂ ಸ್ಮಾರ್ಟ್‌ಫೋನ್‌ಗಳ ಮಾರಾಟದ ದಿನದಂದು ನೀವು ಮತ್ತೆ ಲಾಗ್ ಇನ್ ಮಾಡಿ ಖರಿದಿಸಬವುದು ಇದರ ಮತ್ತಷ್ಟು ಆಫರ್ ಅನ್ನು ಬಿಡುಗಡೆಯ ದಿನದಂದು ಹೇಳಲಾಗುವುದು. ಈ ಫೋನ್ಗಳ ಬಿಡುಗಡೆಯನ್ನು ಮಾರ್ಚ್ 24 ರಂದು ನಿಗದಿಪಡಿಸಿದ್ದು ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ನೀವು ಇದರ ಕೂಪನ್ ಪಡೆಯುತ್ತೀರಿ. ಫೋನ್ ಖರೀದಿಸಿದ 10 ದಿನಗಳಲ್ಲಿ Realme Buds Air Neo ಬ್ಲೂಟೂತ್ ಹೆಡ್‌ಸೆಟ್ ಅನ್ನು ಬೇಕಿದ್ದರೆ ಭಾರಿ ರಿಯಾಯಿತಿಯಲ್ಲಿ ಖರೀದಿಸಬಹುದು.
#realme is well-equipped to meet #realmeFans' demands. High or low-priced, we have enough stock of all variants of the upcoming #realme8series.
Pre-book in the current Infinity Sale & avail exciting offers! https://t.co/f19EO9zKx5
We always come prepared pic.twitter.com/G7XscEvxg6
— Madhav108MP (@MadhavSheth1) March 16, 2021
Realme 8 ಮತ್ತು Realme 8 Pro ಫೀಚರ್ಗಳು
ಈ ಫೋನ್ಗಳು ಕ್ವಾಡ್ ಕ್ಯಾಮೆರಾ ಸೆಟಪ್ ಎರಡೂ Realme ಸ್ಮಾರ್ಟ್‌ಫೋನ್‌ಗಳ ಹಿಂದಿನ ಪ್ಯಾನಲ್ ಅಲ್ಲಿ ಲಭ್ಯವಿರುತ್ತದೆ. ಇವುಗಳಲ್ಲಿ ಒಂದು Realme 8 ರೂಪಾಂತರವಾಗಿರುತ್ತದೆ. ಈ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ 64MP ಕ್ವಾಡ್ ಕ್ಯಾಮೆರಾ ಪ್ರೈಮೇರಿ ಕ್ಯಾಮರಾವನ್ನು ಹೊಂದಿದೆ. ಆದರೆ ಇದರ Realme 8 Pro ಸ್ಮಾರ್ಟ್‌ಫೋನ್ 108MP ಕ್ವಾಡ್ ಕ್ಯಾಮೆರಾ ಪ್ರೈಮೇರಿ Samsung ISOCELL HM2 ಸೆನ್ಸರ್ ಕ್ಯಾಮೆರಾವನ್ನು ಹೊಂದಿದೆ.
ನೀವು ಇವುಗಳ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ Realme 8 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಹೆಲಿಯೊ G95 ಚಿಪ್‌ಸೆಟ್‌ನೊಂದಿಗೆ ಪರಿಚಯಿಸಬಹುದು. ಈ ಫೋನ್ 6.4 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಪವರ್‌ಬ್ಯಾಪ್‌ಗಾಗಿ ಫೋನ್‌ನಲ್ಲಿ 5000mAh ಬ್ಯಾಟರಿಯನ್ನು ಒದಗಿಸಲಾಗುವುದು ಇದನ್ನು 30W ಫಾಸ್ಟ್ ಚಾರ್ಜರ್ ಸಹಾಯದಿಂದ ಚಾರ್ಜ್ ಮಾಡಬಹುದು. Realme 8 Pro ಫೋನ್‌ನ ಆವೃತ್ತಿಯು ಎರಡು ಶೇಖರಣಾ ಆಯ್ಕೆಗಳಲ್ಲಿ 6GB + RAM 128GB ಮತ್ತು 8GB RAM + 128GB ಆಂತರಿಕ ಸಂಗ್ರಹದಲ್ಲಿ ಬರಲಿದೆ. ಇವೇರಡು Realme UI 2.0 ಆಧಾರಿತ ಆಂಡ್ರಾಯ್ಡ್ 11 ಅನ್ನು ಫೋನ್‌ನಲ್ಲಿ ಬೆಂಬಲಿಸಲಾಗುತ್ತದೆ. Realme 8 Pro ಮಾದರಿಯಲ್ಲಿ ಸ್ಟಾರಿ ಮೋಡ್ ಅನ್ನು ಸಹ ಬೆಂಬಲಿಸಲಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile