ಭಾರತದಲ್ಲಿ ಇಂದು ಚೀನಿ ಸ್ಮಾರ್ಟ್ಫೋನ್ ತಯಾರಕರಾದ ರಿಯಲ್ಮೆ ತನ್ನ ಹೊಸ Realme 6 ಮತ್ತು Realme 6 Pro ಸ್ಮಾರ್ಟ್ಫೋನ್ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಮೇಡ್ ಇನ್ ಇಂಡಿಯಾ ಯೋಜನೆಯಡಿ ಕಂಪನಿಯು ಈ ಸರಣಿಯನ್ನು ಪ್ರಾರಂಭಿಸಿದೆ. ಇದರೊಂದಿಗೆ ಕಂಪನಿಯು ಫಿಟ್‌ನೆಸ್ ಬ್ಯಾಂಡ್ ವಿಭಾಗಕ್ಕೆ ಪ್ರವೇಶಿಸಿ realme ಬ್ಯಾಂಡ್ ಅನ್ನು ಸಹ ಪ್ರಾರಂಭಿಸಿದೆ. ಮೊದಲಿಗೆ Realme 6 ಮತ್ತು Realme 6 Pro ಒಟ್ಟು ಮೂರು RAM ವೆರಿಯಂಟ್ ಮತ್ತು ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.
Realme 6 ಬೆಲೆ ಮತ್ತು ವೇರಿಯಂಟ್ ಒಟ್ಟು ಮೂರು RAM ಮತ್ತು ಎರಡು ಸ್ಟೋರೇಜಲ್ಲಿ ಬಿಡುಗಡೆಯಾಗಿದೆ.
>4GB/64GB-12,999 >6GB/128GB-14,999 >8GB/128GB-15,999
Realme 6 Pro ಬೆಲೆ ಮತ್ತು ವೇರಿಯಂಟ್ ಒಟ್ಟು ಎರಡು RAM ಮತ್ತು ಎರಡು ಸ್ಟೋರೇಜಲ್ಲಿ ಬಿಡುಗಡೆಯಾಗಿದೆ.
6GB/64GB-16,999, >6GB/128GB-17,999, >8GB/128GB-18,999
ಈ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. Realme 6 ಮಾರಾಟವು ಮಾರ್ಚ್ 11 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದ್ದು Realme 6 Pro ಮಾರ್ಚ್ 13 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟಕ್ಕೆ ಲಭ್ಯವಾಗಲಿದೆ. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ಹೊರತುಪಡಿಸಿ ಬಳಕೆದಾರರು ಅವುಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಖರೀದಿಸಬಹುದು.
Realme 6: ಸ್ಮಾರ್ಫೋನ್ 6.5 ಇಂಚಿನ FHD+ ಪಂಚ್-ಹೋಲ್ ಡಿಸ್ಪ್ಲೇಯನ್ನು ಹೊಂದಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ಲೇಪಿಸಲಾಗಿದೆ. ಇದರ ಬಾಡಿ 90.5% ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ G90T ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ನಲ್ಲಿ, ಬಳಕೆದಾರರು ಉತ್ತಮ ಗೇಮಿಂಗ್ ಅನುಭವವನ್ನು ಪಡೆಯುತ್ತಾರೆ. ಅಲ್ಲದೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 20x ಜೂಮ್ ಬೆಂಬಲದೊಂದಿಗೆ 64MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಅದೇ ಸಮಯದಲ್ಲಿ ಇದು ಫೋನ್‌ನಲ್ಲಿ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 2MP ಪೋರ್ಟ್ರೇಟ್ ಲೆನ್ಸ್ ಹೊಂದಿದೆ. ಇದು 16MP ಇನ್ ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಸ್ಲೋ ಮೋಷನ್, AI ಬ್ಯೂಟಿ ಮೋಡ್ ಮತ್ತು ಪೋರ್ಟ್ರೇಟ್ ಮೋಡ್ ಮುಂತಾದ ವೈಶಿಷ್ಟ್ಯಗಳು ಲಭ್ಯವಿದೆ. ಅಲ್ಲದೆ 30W ಫ್ಲ್ಯಾಷ್ ಬೆಂಬಲದೊಂದಿಗೆ ಫೋನ್ 4300mAh ಬ್ಯಾಟರಿಯನ್ನು ಹೊಂದಿದೆ.
Realme 6 Pro: ಈ ಸ್ಮಾರ್ಟ್ಫೋನ್ 6.6 ಇಂಚಿನ ಡ್ಯುಯಲ್ ಪಂಚ್-ಹೋಲ್ ಡಿಸ್ಪ್ಲೇ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನೊಂದಿಗೆ ಲೇಪಿತವಾಗಿದೆ. Snapdragon 720G ಚಿಪ್‌ಸೆಟ್‌ನಲ್ಲಿ ಪರಿಚಯಿಸಲಾದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಫೋನ್ ಡ್ಯುಯಲ್ ಇನ್ ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಫ್ರಂಟ್ 16MP ಪ್ರೈಮರಿ ಮತ್ತು 8MP ಸೆಕೆಂಡರಿ ಸೆನ್ಸಾರ್ ಹೊಂದಿದೆ. ಇದು ಕಡಿಮೆ ಬೆಳಕಿನಲ್ಲಿಯೂ ಸಹ ಉತ್ತಮ ಫೋಟೋಗ್ರಾಫಿ ಮಾಡಬಹುದು. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಫೋನ್‌ನಲ್ಲಿ ಲಭ್ಯವಿದೆ. ಇದು 20x ಜೂಮ್ ಬೆಂಬಲದೊಂದಿಗೆ 64MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇಸ್ರೋದ ನ್ಯಾವಿಕ್ ಉಪಗ್ರಹ ವ್ಯವಸ್ಥೆಯಲ್ಲಿ ಪರಿಚಯಿಸಲಾದ ವಿಶ್ವದ ಎರಡನೇ ಸ್ಮಾರ್ಟ್‌ಫೋನ್ ಇದಾಗಿದೆ. ಇದು 30W ಫ್ಲ್ಯಾಷ್ ಬೆಂಬಲದೊಂದಿಗೆ 4300mAh ಬ್ಯಾಟರಿಯನ್ನು ಸಹ ಬಳಸುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 10 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತವೆ.