ಹೊಸ Redmi Note 8 VS Realme 5s ಸ್ಮಾರ್ಟ್ಫೋನಳಲ್ಲಿ ಯಾವುದು ಬೆಸ್ಟ್

ಹೊಸ Redmi Note 8 VS Realme 5s ಸ್ಮಾರ್ಟ್ಫೋನಳಲ್ಲಿ ಯಾವುದು ಬೆಸ್ಟ್

ಕಳೆದ ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿರುವ Realme ಮತ್ತು Xiaomi ಕಂಪನಿಯ ಹೊಚ್ಚ ಹೊಸ Realme 5s ಮತ್ತು Redmi Note 8 ಸ್ಮಾರ್ಟ್ಫೋನ್ಗಳನ್ನು ನೋಡಬವುದು. ಇವೇರಡು ಫೋನ್ಗಳ ಒಂದು ಕಾಮನ್ ಫೀಚರ್ ಅಂತಂದ್ರೆ ಇವೇರಡು ಫೋನ್ಗಳು Qualcomm Snapdragon 665 ಪ್ರೊಸೆಸರ್ ಜೊತೆಗೆ ಬರುತ್ತವೆ. ಇದರೊಂದಿಗೆ ಅನ್ನು ಹಲವು ಫೀಚರ್ಗಳನ್ನು ಸಹ ಒಳಗೊಂಡಿವೆ.

Build & Design

https://img.mensxp.com/media/content/2019/Nov/we-compared-realme-5s-with-redmi-note-8-to-find-out-which-ones-a-better-phone-under-rs-10-000-740x500-3-1574846284.jpg

ಇವೇರಡು ಫೋನ್ಗಳಲ್ಲಿ ಲೇಟೆಸ್ಟ್ ಫೋನ್‌ಗಳ ಮಾದರಿಯ ಬ್ಯಾಕ್ ಗ್ರೇಡಿಯಂಟ್ ಡಿಸೆಂಟ್ ಪ್ಯಾನಲ್ ನೀಡಲಾಗಿದೆ. ಇದರರ್ಥ ಇವುಗಳ ಮೇಲೆ  ಲೈಟ್ ಅಥವಾ ಸೂರ್ಯನ ಕಿರಣಗಳು ಬಿದ್ದಾಗಲೆಲ್ಲಾ ಶೈನಿಂಗ್ ಎಫೆಕ್ಟ್ ಸೃಷ್ಟಿಯಾಗುತ್ತದೆ. ಉತ್ತಮ ಮಟ್ಟದ ಪ್ಲಾಸ್ಟಿಕ್ ಮೆಟೀರಿಯಲ್ಗಳಿಂದ ತಯಾರಿಸಲ್ಪಟ್ಟ ಈ ಬ್ಯಾಕ್ ಪ್ಯಾನಲ್ ಗ್ಲೊಸಿ ಗ್ಲಾಸ್ ಫಿನಿಶಿಂಗ್ ಡಿಸೈನ್ ಹೊಂದಿದ್ದು ಕೆಲವೋಮ್ಮೆ ಕೈಯಿಂದ ಜಾರಬವುದು. ಈ ಕಾರಣದಿಂದಾಗಿ ಈ ಎರಡು ಕಂಪನಿಗಳು ನೀಡಿರುವ TPU ಸಿಲಿಕನ್ ಕವರ್ ಬಳಸುವುದು ಅನಿವಾರ್ಯವಾಗುತ್ತದೆ.

Display

Realme 5s – 6.5 ಇಂಚಿನ ಮಿನಿ ಡ್ರಾಪ್ ಫುಲ್ ಸ್ಕ್ರೀನ್ IPS LCD ಡಿಸ್ಪ್ಲೇ ಹೊಂದಿದ್ದು 89% ಸ್ಕ್ರೀನ್ ಟು ಬಾಡಿ ರೇಷು ನೀಡುತ್ತದೆ. ಇದರ ಡಿಸ್ಪ್ಲೇಯಲ್ಲಿ 1600x 720 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ 269ppi ಡಿನ್ಸಿಟಿಯನ್ನು ಹೊಂದಿದೆ. ಫೋನಿನ ಗ್ಲಾಸ್ ಪ್ರೊಟೆಕ್ಷನ್ಗಗಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ v3+ ನೀಡಲಾಗಿದೆ.

https://i.gadgets360cdn.com/large/realme5s_redminote8_main_1574257215869.jpg?output-quality=80&output-format=webp
 
Redmi Note 8 – ಇದರಲ್ಲಿ 6.3 Full High Definition+ ಡಾಟ್ ನಾಚ್ ಡಿಸ್ಪ್ಲೇ ಹೊಂದಿದ್ದು 84% ಸ್ಕ್ರೀನ್ ಟು ಬಾಡಿ ರೇಷು ನೀಡುತ್ತದೆ. ಇದರ ಡಿಸ್ಪ್ಲೇಯಲ್ಲಿ 1600x 720 ಪಿಕ್ಸೆಲ್ ರೆಸೊಲ್ಯೂಷನ್ ಜೊತೆಗೆ 403ppi ಡಿನ್ಸಿಟಿಯನ್ನು ಹೊಂದಿದೆ. 2.5D ಗ್ಲಾಸ್ ಬಾಡಿ ಜೊತೆಗೆ ಗ್ಲಾಸ್ ಪ್ರೊಟೆಕ್ಷನ್ಗಗಿ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ v5 ನೀಡಲಾಗಿದೆ. ಅಂತಂದ್ರೆ Realme 5s ಫೋನಿಗಿಂತ ಎರಡು ಪಟ್ಟು ಹೆಚ್ಚಾಗಿದೆ. 

Camera 

Realme 5s – 10x ಡಿಜಿಟಲ್ ಜೂಮ್ ಜೊತೆಗೆ ಕ್ವಾಡ್ ಕ್ಯಾಮೆರಾ 48MP + 8MP + 2MP + 2MP ಮೆಗಾಪಿಕ್ಸೆಲ್ ಸೆಟಪ್ 4-in-1 Pixel Binning ಹೊಂದಿದೆ. ಇದು Wide, Ultrawide, Portrait, Macro ಲೆನ್ಸ್ ಸೆನ್ಸೋರ್ಗಳನ್ನು ಒಳಗೊಂಡಿದ್ದು ಇದರ Portrait 6 ವಿವಿಧ ಬಗೆಯ ಮೂಡ್ಗಳನ್ನೂ ನೀಡುತ್ತದೆ. ಇದರಲ್ಲಿ ತೆಗೆದ ಇಮೇಜ್ಗಳು ಡಿಸೆಂಟ್ ಮತ್ತು ಕ್ಲಿಯರ್ ಆಗಿವೆ. ಇದರಲ್ಲಿ 1080 ಪಿಕ್ಸೆಲ್ HD ರೆಸೊಲ್ಯೂಷನಲ್ಲಿ @30fps ವಿಡಿಯೋ ಶೂಟ್ ಮಾಡಬವುದು. ಜೊತೆಗೆ 4K @ 30fps ಮತ್ತು 120fps ಮತ್ತು 240fps Slow Motion ವಿಡಿಯೋ ರೆಕಾರ್ಡ್ ಮಾಡಬವುದು. ಇದರ ಫ್ರಂಟಲ್ಲಿ 13MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ ಇದರ ಬ್ಯೂಟಿ ಫಿಲ್ಟರ್ ಮೂಡ್ ಸ್ವಲ್ಪ ಜಾಸ್ತಿಯಾಗಿದೆ ಎನ್ನಬವುದು.

https://img.mensxp.com/media/content/2019/Nov/we-compared-realme-5s-with-redmi-note-8-to-find-out-which-ones-a-better-phone-under-rs-10-000-740x500-6-1574846424.jpg

Redmi Note 8 – ಇದರಲ್ಲೂ ಸಹ ಅದೇ ಮಾದರಿಯ ಕ್ವಾಡ್ ಕ್ಯಾಮೆರಾ 48MP + 8MP + 2MP + 2MP ಮೆಗಾಪಿಕ್ಸೆಲ್ ಸೆಟಪ್ ಹೊಂದಿದೆ. ಇದು Wide, Ultrawide, Depth, Macro ಲೆನ್ಸ್ ಸೆನ್ಸೋರ್ಗಳನ್ನು ಒಳಗೊಂಡಿದ್ದು ಇದರಲ್ಲಿ ತೆಗೆದ ಇಮೇಜ್ಗಳು Realme 5s ಹೋಲಿಸಿದರೆ ಅದಕ್ಕಿಂತ ಹೆಚ್ಚಿನ ಡಿಸೆಂಟ್ ಮತ್ತು ಕ್ಲಿಯರ್ ಕ್ರಿಸ್ಪಿ ಶಾಟ್ಗಳನ್ನು ನೀಡುತ್ತದೆ. ಇದರಲ್ಲಿ 1080 ಪಿಕ್ಸೆಲ್ HD ರೆಸೊಲ್ಯೂಷನಲ್ಲಿ @30 ಮತ್ತು 60fps ವಿಡಿಯೋ ಶೂಟ್ ಮಾಡಬವುದು. ಜೊತೆಗೆ 4K @ 30fps ಮತ್ತು 120fps ಮತ್ತು 240fps Slow Motion ವಿಡಿಯೋ ರೆಕಾರ್ಡ್ ಮಾಡಬವುದು. ಇದರಲ್ಲು ಸಹ ಅದೇ  ಫ್ರಂಟಲ್ಲಿ 13MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

Performance + Storage

Realme 5s – ಫೋನ್ 11nm ಪ್ರೋಸೆಸ್ ಟೆಕ್ನಾಲಜಿಯೊಂದಿಗೆ 3ನೇ ಜನರೇಷನ್ AI ಎಂಜಿನ್ Qualcomm Snapdragon 665 2.0GHz ಕ್ಲಾಕ್ ಸ್ಪೀಡ್ ನೀಡುತ್ತಾ ColoerOS 6 ಜೊತೆಗೆ ಆಂಡ್ರಾಯ್ಡ್ 9.0 ಪೈ ಆಧಾರಿತ ನಡೆಯುತ್ತದೆ. ಇದು 4GB+64GB ಸ್ಟೋರೇಜ್ ಮತ್ತು 4+128GB ಸ್ಟೋರೇಜ್ ವೇರಿಯಂಟ್ಗಳಲ್ಲಿ ಲಭ್ಯವಿದೆ. ಅಲ್ಲದೆ ಎರಡು ಸಿಮ್ ಸ್ಲಾಟ್ ಜೊತೆಗೆ ಸುಮಾರು 256GB ವರೆಗೆ ವಿಸ್ತರಿಸಬವುದಾದ ಡೆಡಿಕೇಟೆಡ್ ಮೈಕ್ರೋ SD ಕಾರ್ಡ್ ಸ್ಲಾಟ್ ಸಹ ಹೊಂದಿದೆ.

https://www.igyaan.in/wp-content/uploads/2019/08/SD665.jpg

Redmi Note 8 – ಅದೇ ಮಾದರಿಯಲ್ಲಿ 11nm ಪ್ರೋಸೆಸ್ ಟೆಕ್ನಾಲಜಿಯೊಂದಿಗೆ ಅದೇ 3ನೇ ಜನರೇಷನ್ AI ಎಂಜಿನ್ Qualcomm Snapdragon 665 2.0GHz ಕ್ಲಾಕ್ ಸ್ಪೀಡ್ ಜೊತೆಗೆ ಆಂಡ್ರಾಯ್ಡ್ 9.0 ಪೈ ಆಧಾರಿತ ನಡೆಯುತ್ತದೆ. ಇದು ನೇರವಾಗಿ 6GB +64GB ಸ್ಟೋರೇಜ್ ಮತ್ತು 6+128GB ಸ್ಟೋರೇಜ್ ವೇರಿಯಂಟ್ ನೀಡುತ್ತಿದೆ. ಅಲ್ಲದೆ ಎರಡು ಸಿಮ್ ಸ್ಲಾಟ್ ಜೊತೆಗೆ ಸುಮಾರು 512GB ವರೆಗೆ ವಿಸ್ತರಿಸಬವುದಾದ ಡೆಡಿಕೇಟೆಡ್ ಮೈಕ್ರೋ SD ಕಾರ್ಡ್ ಸ್ಲಾಟ್ ಸಹ ಹೊಂದಿದೆ. ಇಲ್ಲಿ Redmi Note 8 ನಿಮಗೆ ಅದೇ ಬೆಲೆಯಲ್ಲಿ ಹೆಚ್ಚಿನ RAM ಮತ್ತು ಸ್ಟೋರೇಜ್ ಕ್ಯಾಪಾಸಿಟಿಯನ್ನು ನೀಡುತ್ತಿದೆ.

Battery & Ports

Realme 5s – ಫೋನ್ ಹೈ ಕ್ಯಾಪಾಸಿಟಿಯ ಲಿ ಪಾಲಿಮರ್ 5000mAh ಬ್ಯಾಟರಿಯನ್ನು ಒಳಗೊಂಡಿದೆ. ಅಲ್ಲದೆ ಇದು 10W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ ಆದರೆ ಇದನ್ನು ಖರೀದಿಸುವಾಗ ಬಾಕ್ಸ್ ಒಳಗೆ 5v 2A ಚಾರ್ಜಿಂಗ್ ಅಡಾಪ್ಟರ್ ಬರುತ್ತದೆ.

https://img.mensxp.com/media/content/2019/Nov/we-compared-realme-5s-with-redmi-note-8-to-find-out-which-ones-a-better-phone-under-rs-10-000-740x500-7-1574846479.jpg

Redmi Note 8 – ಫೋನ್ ಹೈ ಕ್ಯಾಪಾಸಿಟಿಯ ಲಿ ಪಾಲಿಮರ್ 4000mAh ಬ್ಯಾಟರಿಯನ್ನು ಒಳಗೊಂಡಿದೆ. ಅಲ್ಲದೆ ಇದು 18W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ ಅಲ್ಲದೆ ಈ ಫೋನನ್ನು ಖರೀದಿಸುವಾಗ ಬಾಕ್ಸ್ ಒಳಗೆ ಇದೇ 18W ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಬರುತ್ತದೆ. ಅಂದ್ರೆ ಇಲ್ಲಿ ಯಾವುದು ಬೆಸ್ಟ್ ಅಂಥ ಕಾಮೆಂಟ್ ಮಾಡಿ ತಿಳಿಸಿ. ಇವರಿವರ ಸೈಟ್ಗಳಲ್ಲಿ ಹೇಳ್ಕೊಂಡಿರೋ ಬ್ಯಾಟರಿ ಬಳಕೆಯ ಗಂಟೆಗಳು ಸತ್ಯ ಸುಳ್ಳು. ಇವೇರಡು ಫೋನ್ಗಳು ಒಮ್ಮೆಯ ಫುಲ್ ಚಾರ್ಜ್ ಅಲ್ಲಿ ಹೈ ಗ್ರಾಫಿಕ್ ಗೇಮಿಂಗ್, ಲೈವ್ ವಿಡಿಯೋ, HD ವಿಡಿಯೋ ಸ್ಟ್ರೆಮಿಂಗ್ ಬಳಸಿದರೆ ಸುಮಾರು 3-5 ಘಂಟೆ ಬರುತ್ತೇ. ಅದೇ ನಾರ್ಮಲ್ ಬಳಕೆ ಅಥವಾ ಚಾಟಿಂಗ್, ಕಾಲಿಂಗ್, ವಿಡಿಯೋ ವಾಚಿಂಗ್ ಅಥವಾ ಆಡಿಯೋ ಬಳಸಿದರೆ 5-6 ಗಂಟೆ ಬರುತ್ತದೆ. 

Price & Availability

Realme 5s – 4GB/64GB – 9,999 ಮತ್ತು 4GB/128GB – 10,999 ಮೊದಲ ಮಾರಾಟ 29ನೇ ನವೆಂಬರ್ 2019 ರಂದು ಮಧ್ಯಾಹ್ನ 12:00ಕ್ಕೆ ಲಭ್ಯವಾಗಲಿದೆ. Redmi Note 8 –  6GB + 64GB – 9,999 ಮತ್ತು 6GB + 128GB – 12,999.

https://img.mensxp.com/media/content/2019/Nov/we-compared-realme-5s-with-redmi-note-8-to-find-out-which-ones-a-better-phone-under-rs-10-000-1400x653-1574846253_1100x513.jpg

 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo