ಭಾರತದ ಎರಡನೇ ಸ್ಮಾರ್ಟ್ಫೋನ್ ಮಾರಾಟಗಾರನಾದ Realme ಕಂಪನಿ 2019 ರ ಅಂತ್ಯದಿಂದ ಹಲವಾರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಮತ್ತು ಹೊಸ ವರ್ಷಕ್ಕೆ ಅದರ ಶ್ರೇಣಿಯನ್ನು ಗಮನದಲ್ಲಿಟ್ಟುಕೊಂಡು ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ವರ್ಷದ ಮೊದಲ ಸ್ಮಾರ್ಟ್‌ಫೋನಾಗಿ Realme 5i ಅನ್ನು ಇಂದು ಬಿಡುಗಡೆ ಮಾಡಿದೆ. ಈ ಹಿಂದೆ ಪ್ರಾರಂಭಿಸಲಾದ Realme 5 ಸಾಧಾರಣ ಆವೃತ್ತಿಯಾಗಿತ್ತು ಆದರೆ ಈ ಫೋನ್ ಅದಕ್ಕಿಂತ ಅಂದ್ರೆ Realme 5s ಸಮಾಂತರವಾಗಿ ಅದೇ ಮಾದರಿಯ ಸ್ಪೆಸಿಫಿಕೇಷನ್ ಜೊತೆಗೆ ಬಿಡುಗಡೆಗೊಳಿಸಿದೆ. ಈ Realme 5i ಸ್ಮಾರ್ಟ್ಪೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಇದರ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾವನ್ನು ಹೊಂದಿದೆ. ಬಜೆಟ್ ಸ್ಮಾರ್ಟ್ಫೋನ್ಗಾಗಿ ಹೊಸ ಸ್ಮಾರ್ಟ್ಫೋನ್ ಭಾರಿ ದೊಡ್ಡ ಮಾತ್ರದ ಡಿಸ್ಪ್ಲೇಯನ್ನು ಸಣ್ಣದಾದ ವಾಟರ್ ಡ್ರಾಪ್ ನಾಚ್ನೊಂದಿಗೆ ಬರುತ್ತದೆ.
ಈ ಸ್ಮಾರ್ಟ್ಫೋನ್ 6.52 ಇಂಚಿನ HD+ (720 x 1600 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ವಾಟರ್‌ಡ್ರಾಪ್ ನಾಚ್ನೊಂದಿಗೆ ಒಳಗೊಂಡಿದೆ. ಇದು ಆಂಡ್ರಾಯ್ಡ್ 9.0 ಪೈ ಆಧಾರಿತ ColorOS 6.0.1 ಅನ್ನು ಬೆಂಬಲಿಸಲು ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 AIE SoC ಯೊಂದಿಗೆ ತುಂಬಿದೆ. ಈ ಮೊದಲು ಉಲ್ಲೇಖಿಸಲಾದ ಎರಡು ರೂಪಾಂತರಗಳಲ್ಲಿ ಇದೇ ಪ್ರೊಸೆಸರ್ ನೀಡಲಾಗಿದೆ. ಈ ಸ್ಮಾರ್ಟ್ಫೋನ್ 12MP ಪ್ರೈಮರಿ ಕ್ಯಾಮೆರಾ ಎರಡನೇಯದಾಗಿ 8MP ವೈಡ್ ಆಂಗಲ್ ಲೆನ್ಸ್ ಮತ್ತು 2MP + 2MP ಡೆಪ್ತ್ ಮತ್ತು ಮ್ಯಾಕ್ರೋ ಸೆನ್ಸರ್ ನೀಡಲಾಗಿದೆ. ಇದರ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8MP ಸೆನ್ಸರ್ ನೀಡಲಾಗಿದೆ. ಈ ಫೋನ್ 30 ದಿನಗಳ ಸ್ಟ್ಯಾಂಡ್‌ಬೈ ಬೆಂಬಲದೊಂದಿಗೆ 5000 mAh ಸಾಮರ್ಥ್ಯ ಹೊಂದಿರುವ ಬ್ಯಾಟರಿಯು ಫೋನ್‌ನ ಪ್ರಮುಖ ಅಂಶವಾಗಿದೆ. ಈ ಬ್ಯಾಟರಿ 10W ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಫೋನಲ್ಲಿ ಸ್ಟ್ಯಾಂಡೇರ್ಡ್ ಸ್ಲಾಟ್ ನೀಡಿದ್ದು ಎರಡು ನ್ಯಾನೋ ಸಿಮ್ ಮತ್ತು 256GB ವರೆಗಿನ SD ಕಾರ್ಡ್ ಹಾಕಬವುದು.
Realme 5i ಬಿಡುಗಡೆ ಸಮಾರಂಭದಲ್ಲಿ ಇದನ್ನು ಕೇವಲ ಒಂದೇ ಒಂದು ವೆರಿಯಂಟಲ್ಲಿ ಮಾತ್ರ ಬಿಡುಗಡೆಗೊಳಿಸಲಾಗಿದೆ. 4GB ಯ LPDDRX RAM ಮತ್ತು 64GB ಯ ಇಂಟರ್ನಲ್ ಸ್ಟೋರೇಜ್ ಕೇವಲ 8,999 ರೂಗಳಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಆಕ್ವಾ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಎಂಬ ಎರಡು ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿದೆ. ಇದು ಇದೇ 15ನೇ ಜನವರಿ 2020 ರಿಂದ ಮೊದಲ ಮಾರಾಟಕ್ಕೆ ಬರಲಿದೆ. ಮುಖ್ಯವಾಗಿ ಇದು realme.in । flipkart.in ಸೈಟ್ಗಳಲ್ಲಿ ಮಾರಾಟವಾಗಲಿದೆ. ಇದರ ಲಾಂಚ್ ಆಫರ್‌ಗಳು ಜಿಯೋ ಬಳಕೆದಾರರಿಗೆ 7550 ಮೌಲ್ಯದ ಪ್ರಯೋಜನಗಳನ್ನು ಮತ್ತು ಮೊಬಿಕ್ವಿಕ್ ಮೂಲಕ 10% ಸೂಪರ್‌ಕ್ಯಾಶ್ ಅನ್ನು ಒಳಗೊಂಡಿವೆ. ಗ್ರಾಹಕರು ವಿನಿಮಯ ಕೊಡುಗೆಗಳಿಗೆ ಅರ್ಹರಾಗಿದ್ದಾರೆ ಮತ್ತು ಕ್ಯಾಶಿಫೈ ಮೂಲಕ ಹೆಚ್ಚುವರಿ ವಿನಿಮಯ ರಿಯಾಯಿತಿಯನ್ನು ಪಡೆಯಬಹುದು.