ಚೀನಾದ ಸ್ಮಾರ್ಟ್‌ಫೋನ್ ತಯಾರಕ ರಿಯಲ್ಮೀ ತನ್ನದೇಯಾದ ಬಜೆಟ್ ಶ್ರೇಣಿಯಲ್ಲಿ ಹೊಸ Realme 3i ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಅನ್ನು ಎರಡು ಸ್ಟೋರೇಜ್ ಆಯ್ಕೆಗಳೊಂದಿಗೆ ಪ್ರಾರಂಭಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಕೆಲವು ವೈಶಿಷ್ಟ್ಯಗಳನ್ನು ಈಗಾಗಲೇ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ನ ವಿಶೇಷ ಲಕ್ಷಣವೆಂದರೆ ಇದು ಶಕ್ತಿಯುತ ಮೀಡಿಯಾಟೆಕ್ ಹೆಲಿಯೊ P60 ಪ್ರೊಸೆಸರ್ ಮತ್ತು 4230mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಇದು ಈಗಾಗಲೇ ಭಾರತದಲ್ಲಿ ಬಿಡುಗಡೆಯಾದ Realme 3 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳಾದ Realme 3 ಮತ್ತು Realme 3 Pro ಸ್ಮಾರ್ಟ್ಫೋನ್ ಮೂಲಕ ಬರುತ್ತದೆ.
ಏರ ಸ್ಮಾರ್ಟ್ಫೋನ್ ಡೈಮಂಡ್ ಬ್ಲ್ಯಾಕ್, ಡೈಮಂಡ್ ಬ್ಲೂ ಮತ್ತು ಡೈಮಂಡ್ ರೆಡ್ ಕಲರ್ ಆಪ್ಷನ್ ಎಂಬ ಮೂರು ಬಣ್ಣ ಆಯ್ಕೆಗಳೊಂದಿಗೆ ಈ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. Realme 3i ಜೊತೆಗೆ ಕಂಪನಿಯು ತನ್ನ ಮೊದಲ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು Realme X ಸ್ಮಾರ್ಟ್ಫೋನ್ ಮೂಲಕ ಪರಿಚಯಿಸಿದೆ. ರಿಯಲ್ಮೆ 3i ನ ವೈಶಿಷ್ಟ್ಯಗಳ ಬಗ್ಗೆ ಮಾತನಾಡಬೇಕೆಂದರೆ 6.22 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ವಾಟರ್ಡ್ರಾಪ್ ನಾಚ್ ವೈಶಿಷ್ಟ್ಯವನ್ನು ಈ ಫೋನ್‌ನ ಮುಂಭಾಗದ ಪ್ಯಾನಲಲ್ಲಿ ಒದಗಿಸಲಾಗಿದೆ. ಆದಾಗ್ಯೂ ಹಿಂಭಾಗದಲ್ಲಿ ಜೋಡಿಸಲಾದ ಫಿಂಗರ್ಪ್ರಿಂಟ್ ಸೆನ್ಸರ್ ಹಿಂಭಾಗದಲ್ಲಿ ನೀಡಲಾಗಿದೆ.
ಈ ಸ್ಮಾರ್ಟ್ಫೋನ್ 3GB + 32GB ಮತ್ತು 4GB + 64GB ಎಂಬ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ 3GB + 32GB ಬೆಲೆ ಕೇವಲ 7,999 ರೂಗಳಾಗಿವೆ. ಇದರ 4GB + 64GB ರೂಪಾಂತರದ ಬೆಲೆ ಕೇವಲ 9,999 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.ಇದರ ಮೊದಲ ಸೇಲ್ ಜುಲೈ 23 ರಂದು ರಿಯಲ್ಮೀ ಮತ್ತು ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜುಲೈ 23 ರಂದು ನಡೆಯಲಿದೆ.
Realme 3i ಫೋನಿನ ಕ್ಯಾಮೆರಾ ವೈಶಿಷ್ಟ್ಯಗಳ ಬಗ್ಗೆ ಮಾತನಾಡಬೇಕೆಂದರೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಅದರ ಹಿಂಭಾಗದಲ್ಲಿ ನೀಡಲಾಗಿದೆ. ಇದರ ಪ್ರೈಮರಿ ಹಿಂಬದಿಯ ಕ್ಯಾಮೆರಾಕ್ಕೆ 13MP ಮೆಗಾಪಿಕ್ಸೆಲ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಇದು 2MP ಮೆಗಾಪಿಕ್ಸೆಲ್‌ಗಳ ಸಕೆಂಡರಿ ಸೆನ್ಸರ್ ಹೊಂದಿದೆ. ಫೋನ್‌ನ ಮುಂಭಾಗದಲ್ಲಿರುವ 13MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು AI ಜೊತೆಗೆ ಅಳವಡಿಸಲಾಗಿದೆ. ಇದರ ಸೆಲ್ಫಿ ಕ್ಯಾಮೆರಾ AI ಸುಂದರೀಕರಣ ಮೋಡ್ ಅನ್ನು ಸಹ ಹೊಂದಿದೆ. ಫೋನ್‌ಗೆ ಶಕ್ತಿಯನ್ನು ನೀಡಲು ಈಗಾಗಲೇ ಹೇಳಿರುವಂತೆ 4230mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಪೈ ಆಧಾರಿತ ಕಲರ್ ಓಎಸ್ 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಪರ್ಕಕ್ಕಾಗಿ ಡ್ಯುಯಲ್ 4G ಸಿಮ್ ಕಾರ್ಡ್ ಅನ್ನು ಬೆಂಬಲಿಸಲಾಗಿದೆ.