ಭಾರತದಲ್ಲಿ ಇಂದು ಒಪ್ಪೋವಿನ ಸಬ್ ಬ್ರಾಂಡ್ ಆಗಿರುವ ರಿಯಲ್ಮೀ ತನ್ನ ಇತ್ತೀಚಿನ ರಿಯಲ್ಮಿ ೩ (Realme 3) ಸ್ಮಾರ್ಟ್ಫೋನನ್ನು ಇಂದು ಮತ್ತೊಂದು ಫ್ಲಾಶ್ ಮಾರಾಟದಲ್ಲಿ ತರಲಿದೆ. ಇದು ರಿಯಾಲ್ಮಿಯವರ 3 ಸರಣಿಯ ಮೂರನೇ ಪುನರಾವರ್ತನೆಯ ಸ್ಮಾರ್ಟ್ಫೋನ್ ಭಾರತದಲ್ಲಿ ಕಳೆದ ತಿಂಗಳು ಕೇವಲ 8,999 ರೂಗಳ ಆರಂಭದ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದು ಒಟ್ಟಾರೆಯಾಗಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. 3GB ಯ RAM ಮತ್ತು ಮತ್ತು 32GB ಯ ಸ್ಟೋರೇಜ್ ಮತ್ತೋಂದು 4GB ಯ RAM ಮತ್ತು 64GB ಯ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಅದ್ದೂರಿಯ ಫೀಚರ್ಗಳೊಂದಿಗೆ ಈ ಸ್ಮಾರ್ಟ್ಫೋನ್ ಲಭ್ಯವಾಗುತ್ತದೆ.
ಇದು ಮೊದಲ ಬಾರಿಗೆ 12ನೇ ಮಾರ್ಚ್ ರಿಂದ ಫ್ಲ್ಯಾಷ್ ಮಾರಾಟದ ಮೂಲಕ ರಿಯಲ್ಮಿ ೩ (Realme 3) ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕ್ಲಾಸಿಕ್ ಬ್ಲಾಕ್, ಡೈನಮಿಕ್ ಬ್ಲಾಕ್ ಮತ್ತು ರೇಡಿಯಂಟ್ ಬ್ಲೂ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇಂದು ನೀವು ಈ ಸ್ಮಾರ್ಟ್ಫೋನನ್ನು ಫ್ಲಿಪ್ಕಾರ್ಟ್ ಮತ್ತು ರಿಯಾಲ್ಮಿಯ ಸ್ವಂತ ವೆಬ್ಸೈಟ್ ಮೂಲಕ ಇಂದು ಮಧ್ಯಾಹ್ನ 12:00 PM ನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದರ ಡೈನಾಮಿಕ್ ಬ್ಲಾಕ್ ಬಣ್ಣದ ಆಯ್ಕೆಯ ಫೋನ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಇದು ಏತನ್ಮಧ್ಯೆ ನೆನ್ನೆ ರಿಯಲ್ಮಿ ೩ ಪ್ರೊ (Realme 3 Pro) ಎಂಬ ಹೆಸರಿನ ಹೊಸ ಸ್ಮಾರ್ಟ್ಫೋನನ್ನು 25MP AI ಸೆಲ್ಫಿ ಕ್ಯಾಮೆರಾದೊಂದಿಗೆ ಬಿಡುಗಡೆಗೊಳಿಸಿದೆ. ಈಗ ಇಲ್ಲಿ ನಾವು ರಿಯಲ್ಮಿ ೩ (Realme 3) ಸ್ಮಾರ್ಟ್ಫೋನ್ ಬಗ್ಗೆ ಮಾತನಾಡಬೇಕೆಂದರೆ ಇದರ 3GB ಯ RAM ಮತ್ತು 32GB ಯ ಸ್ಟೋರೇಜ್ ಕೇವಲ 8,999 ರೂಗಳಲ್ಲಿ ಲಭ್ಯವಿದೆ. ಮತ್ತೋಂದೆಡೆ 4GB ಯ RAM ಮತ್ತು 64GB ಯ ಸ್ಟೋರೇಜ್ ರೂಪಾಂತರಕ್ಕಾಗಿ ಸ್ಮಾರ್ಟ್ಫೋನ್ ಕೇವಲ 10,999 ರೂಗಳಲ್ಲಿ ಲಭ್ಯವಿದೆ. ಇದನ್ನು ನೀವು ಇಂದು ಸ್ಮಾರ್ಟ್ಫೋನನ್ನು ಫ್ಲಿಪ್ಕಾರ್ಟ್ ಮತ್ತು ರಿಯಾಲ್ಮಿಯ ಸ್ವಂತ ವೆಬ್ಸೈಟ್ ಮೂಲಕ ಇಂದು ಮಧ್ಯಾಹ್ನ 12:00 PM ನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ನಿಮಗೆ ಹಲವಾರು ರೀತಿಯ ಆಫರ್ಗಳು ಸಹ ಲಭ್ಯವಿವೆ.
ಈ ರಿಯಲ್ಮಿ ೩ (Realme 3) ಅನ್ನು ಮೀಡಿಯಾ ಟೆಕ್ ಹೆಲಿಯೊ P70 ಚಿಪ್ಸೆಟ್ ಶಕ್ತಿಯನ್ನು ಹೊಂದಿದೆ ಮತ್ತು ದೊಡ್ಡ 4230mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 3D ಗ್ರೇಡಿಯಂಟ್ ಯುನಿಬಾಡಿ ವಿನ್ಯಾಸವನ್ನು ನೀಡುತ್ತದೆ. ಸ್ಮಾರ್ಟ್ಫೋನ್ 6.2 ಇಂಚಿನ HD+ ಡಿಸ್ಪ್ಲೇನೊಂದಿಗೆ 19: 9 ಆಕಾರ ಅನುಪಾತ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ ಪೈ ಆಧರಿಸಿ ColorOS 6.0 ಅನ್ನು ನಡೆಸುತ್ತದೆ.
ಇದರ ಕ್ಯಾಮರಾ ಇಲಾಖೆಯಲ್ಲಿ ಪ್ರೈಮರಿ ಕ್ಯಾಮೆರಾ 13MP ಮೆಗಾಪಿಕ್ಸೆಲ್ f/ 1.8 ಅಪರ್ಚರ್ ಮತ್ತು 2MP ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಜೊತೆಗೆ ಬರುತ್ತದೆ. ಇದರಲ್ಲಿ PDAF, ನೈಟ್ ಸ್ಕೇಪ್ ಮೋಡ್, ಹೈಬ್ರಿಡ್ HDR, ಕ್ರೋಮ ಬೂಸ್ಟ್, ಪೋರ್ಟ್ರೇಟ್ ಮೋಡ್ ಮತ್ತು ಫೇಸ್ ಗುರುತಿಸುವಿಕೆ ಫೀಚರ್ಗಳೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ವಿಡಿಯೋ ಕರೆ ಮತ್ತು ಸೆಲೀಸ್ಗಾಗಿ 13MP ಮೆಗಾಪಿಕ್ಸೆಲ್ f/ 2.0 ಫ್ರಂಟ್ ಸೆನ್ಸರ್ ನೀಡಲಾಗಿದೆ. ಇದರ ಕನೆಕ್ಟಿವಿಟಿಯಲ್ಲಿ 4G VoLTE, ಬ್ಲೂಟೂತ್ 4.2, ವೈ-ಫೈ 802.11b / g / n, ಜಿಪಿಎಸ್ / A-GPS, ಮೈಕ್ರೋ USB ಜೊತೆಗೆ OTG ಬೆಂಬಲದೊಂದಿಗೆ ಬರುತ್ತದೆ.