ಹೊಸ ರಿಯಲ್ಮೀ ೩ ಪ್ರೊ (Realme 3 Pro) ಫೋನ್ ಅಂತಿಮವಾಗಿ ಇಂದು ಅಧಿಕೃತವಾಗಿ ಭಾರತದಲ್ಲಿ ಅನಾವರಣಗೊಳ್ಳಲಿದೆ. ಕಳೆದ ವರ್ಷ Realme 2 Pro ಯಂತೆ ಕಂಪನಿಯು ಇದರಲ್ಲಿ ಹೊಸದಾಗಿ ಬದಲಾಗುತ್ತಿರುವ ಸಾಧನವಾಗಲಿದೆ ಒಂದಾಗಿರುವುದಾಗಿ ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್ಫೋನ್ ಅತ್ಯಂತ ಜನಪ್ರಿಯ Xiaomi ಯ ಸಬ್ ಬ್ರಾಂಡ್ Redmi Note 7 Pro ಫೋನಿಗೆ ನೇರವಾಗಿ ಪ್ರತಿಸ್ಪರ್ಧಿಯಾಗಲಿದೆ. ಇದು ಪ್ರಸ್ತುತ ದೇಶದಲ್ಲಿ ಮಾರಾಟವಾಗುವ ಅತ್ಯಂತ ಪವರ್ಫುಲ್ ಬಜೆಟ್ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಆಗಿದೆ. ರಿಯಲ್ಮೀ ೩ ಪ್ರೊ (Realme 3 Pro) ಫೋನ್ 6.3 ಇಂಚಿನ ಫುಲ್ HD+ಡಿಸ್ಪ್ಲೇ ಮತ್ತು ಅನೇಕ ಆಕರ್ಷಣೀಯ ಫೀಚರ್ಗಳೊಂದಿಗೆ ಅಧಿಕೃತವಾಗಿ ಮಧ್ಯಾಹ್ನ 12:00 ಕ್ಕೆ ಅನಾವರಣಗೊಳ್ಳಲಿದೆ.
ಈ ಹೊಸ Realme 3 Pro ಸ್ಮಾರ್ಟ್ಫೋನ್ 4GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರ ಭಾರತದಲ್ಲಿ ಕೇವಲ 14,000 ರೂಪಾಯಿಗಳಲ್ಲಿ ಮತ್ತು 6GB ಯ RAM ಮತ್ತು 64GB ಸ್ಟೋರೇಜ್ ರೂಪಾಂತರ ಭಾರತದಲ್ಲಿ ಕೇವಲ 16,000 ಬರುವ ನಿರೀಕ್ಷೆಯಿದೆ. ಅಲ್ಲದೆ ಈ ಹೊಸ Realme 3 Pro ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ 48MP ಕ್ಯಾಮೆರಾದ Redmi Note 7 Pro ಸ್ಮಾರ್ಟ್ಫೋನಿನ ಬೆಲೆಯೊಂದಿಗೆ ಕಾಣಬವುದು. ಇದನ್ನು ಮೀರಿ ಹೋದರೆ Realme 3 Pro ಫೋನ್ ಕೊನೆಯ ಆವೃತ್ತಿ ಅಂದ್ರೆ 8GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರ ಹೆಚ್ಚು ಕಡಿಮೆ 18,000 ರೂಗಳಿಗೆ ಹತ್ತಿರವಾಗಬಹುದು. ಈ ಫೋನಿನ ಮೊದಲ ಮಾರಾಟದ ದಿನಾಂಕವನ್ನು ಇಂದು ಬಿಡುಗಡೆಯ ವೇಳೆ ಪ್ರಕಟಿಸಲಾಗುವುದು. ಇದು ಫ್ಲಿಪ್ಕಾರ್ಟ್ ಮೂಲಕ ಆನ್ಲೈನ್ನಲ್ಲಿ ಮಾರಾಟಗೊಳ್ಳಲಿದೆ.
ಈ ಫೋನ್ 6.3 ಇಂಚಿನ ಪೂರ್ಣ ಎಚ್ಡಿ + ರೆಸಲ್ಯೂಶನ್ ಡಿಸ್ಪ್ಲೇ ಹೊಂದಿರುತ್ತದೆ. ಡಿಸ್ಪ್ಲೇ ಸೈಜ್ ಹೊರತಾಗಿ 3960mAh ಸಾಮರ್ಥ್ಯದ ಬ್ಯಾಟರಿ ColorOS 6.0 ಸಾಫ್ಟ್ವೇರ್ ಮತ್ತು ಫಿಂಗರ್ಪ್ರಿಂಟ್ ಸೆನ್ಸರನ್ನು ಬಹಿರಂಗಪಡಿಸಲಾಯಿತು. ಇದರ ಮುಂಬರುವ ರಿಯಲ್ಮೆ ಸ್ಮಾರ್ಟ್ಫೋನ್ ಇತ್ತೀಚೆಗೆ ಗೀಕ್ಬೆನ್ಕ್ ಡೇಟಾಬೇಸ್ನಲ್ಲಿ ಕಾಣಿಸಿಕೊಂಡಿದೆ. ಇದು ಸ್ನಾಪ್ಡ್ರಾಗನ್ 710 ಚಿಪ್ಸೆಟ್ ಆಂಡ್ರಾಯ್ಡ್ ಪೈ ಅಸ್ತಿತ್ವವನ್ನು ದೃಢೀಕರಿಸಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಹೊಸ ಲೀಕ್ ಪ್ರಕಾರ ರಿಯಲ್ಮೀ ೩ ಪ್ರೊ ಒಟ್ಟು ಮೂರು ಮೆಮೊರಿಯ ಸಂರಚನೆಗಳಲ್ಲಿ ಲಭ್ಯವಿರುತ್ತದೆ.
ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಸುದ್ದಿಗಳಿಗಾಗಿ ಡಿಜಿಟ್ ಕನ್ನಡ Instagram ಮತ್ತು Telegram ಅಪ್ಲಿಕೇಷನ್ಗಳಲ್ಲೂ ಲಭ್ಯ.
ತಿಳಿಯಲೇಬೇಕಾದ ಮತ್ತೋಂದು ಸುದ್ದಿ: ಜಿಯೊ ಟಿವಿ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಾಲ್ಕು ಎಚ್ಡಿ ಮೂವೀ ಚಾನೆಲ್ ಪ್ರಾರಂಭಿಸಿದೆ.