16MP + 5MP ಮತ್ತು 25MP ಫ್ರಂಟ್ ಕ್ಯಾಮೆರಾದ Realme 3 Pro ಇಂದು ಮಧ್ಯಾಹ್ನ ಮಾರಾಟವಾಗಲಿದೆ
ಇದರಲ್ಲಿ 16MP + 5MP ಬ್ಯಾಕ್ ಕ್ಯಾಮೆರಾ ಮತ್ತು 25MP ಸೆಲ್ಫ್ ಕ್ಯಾಮೆರಾಒಳಗೊಂಡಿದೆ
ರಿಯಲ್ಮೀಯ ಇತ್ತೀಚಿನ ಸ್ಮಾರ್ಟ್ಫೋನ್ ತಯಾರಕರು ಇಂದು ತಮ್ಮ ಅದ್ದೂರಿಯ ಸ್ಮಾರ್ಟ್ಫೋನನ್ನು ಫ್ಲಿಪ್ಕಾರ್ಟ್ ಮೂಲಕ ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ realme.com ನಲ್ಲಿ ಮಧ್ಯಾಹ್ನ ಫ್ಲ್ಯಾಶ್ ಸೆಲ್ ಅಂದ್ರೆ ಸರಿಯಾಗಿ 12:00pm ಮಧ್ಯಾಹ್ನದಿಂದ ಮಾರಾಟವಾಗಲಿದೆ. ನೀವು ಈ ಫೋನ್ ಅನ್ನು ಖರೀದಿಸಲು ಬಯಸಿದರೆ ಇಂದು ಉತ್ತಮ ಅವಕಾಶ ನಿಮ್ಮ ಮುಂದಿದೆ. ಈ ಸೇಲಲ್ಲಿ ತ್ವರಿತವಾಗಿ ಸೆಲ್ ಪ್ರಾರಂಭವಾಗುವ ಮೊದಲು ಈ ಫೋನನ್ನು ಖರೀದಿಸ ಬಯಸಿದರೆ ಈಗಾಗಲೇ ನಿಮ್ಮ ಶಿಪ್ಪಿಂಗ್ ವಿಳಾಸ ಮತ್ತು ಬಿಲ್ಲಿಂಗ್ ವಿವರಗಳಂತಹ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಇದು ನಿಮ್ಮನ್ನು ಶೀಘ್ರದಲ್ಲೇ ಚೆಕ್ಔಟ್ ಮಾಡಲು ಅನುಮತಿಸುತ್ತದೆ. ಈ Realme 3 Pro ಸ್ಮಾರ್ಟ್ಫೋನಿನ ಆರಂಭದ ರೂಪಾಂತರ 64GB/4GB ಯ ಬೆಲೆ 13,999 ರೂಗಳಾಗಿವೆ.
Realme 3 Pro ಬೆಲೆ ಮತ್ತು ಆಫರ್ಗಳು
ಈ ಫೋನ್ ಒಟ್ಟಾರೆಯಾಗಿ ಮೂರು ರೂಪಾಂತರಗಳಲ್ಲಿ ಬರುತ್ತದೆ. 4GB ಯ RAM ಮತ್ತು 64GB ಸ್ಟೋರೇಜ್ 13,999 ರೂಗಳು ಇದರ ಎರಡನೇ ರೂಪಾಂತರ 6GB ಯ RAM ಮತ್ತು 64GB ಸ್ಟೋರೇಜ್ 15,999 ರೂಗಳು ಮತ್ತು ಮೂರನೇ ರೂಪಾಂತರ 6GB ಯ RAM ಮತ್ತು 128GB ಸ್ಟೋರೇಜ್ 16,999 ರೂಗಳಲ್ಲಿ ಲಭ್ಯವಿದೆ. ಅಲ್ಲದೆ ಇದರ ಮೇಲೆ ಹೆಚ್ಚುವರಿಯ ಆಫರ್ಗಳು ಸಹ ನೀಡಲಾಗುತ್ತಿದೆ. ಗ್ರಾಹಕರು ಆಕ್ಸಿಸ್ ಬ್ಯಾಂಕ್ನೊಂದಿಗೆ ಬಿಲ್ ಮಾಡಿದ ಕ್ರೆಡಿಟ್ ಕಾರ್ಡ್ ಅನ್ನು ಪಾವತಿಸಿದರೆ ಅವರಿಗೆ ಹೆಚ್ಚುವರಿ 5% ರಿಯಾಯತಿ ನೀಡಲಾಗುವುದು. ಅಲ್ಲದೆ ಯಾವುದೇ ವೆಚ್ಚವಿಲ್ಲದೆ ಅಂದ್ರೆ ನೋ ಕಾಸ್ಟ್ ಈಎಂಐ EMI ಸೌಲಭ್ಯವು ಸಹ ಪಡೆಯಬವುದು.
4GB / 64GB 13,999 ಇಲ್ಲಿಂದ ಖರೀದಿಸಿ
6GB / 64GB 15,999 ಇಲ್ಲಿಂದ ಖರೀದಿಸಿ
6GB / 128GB 16,999 ಇಲ್ಲಿಂದ ಖರೀದಿಸಿ
Realme 3 Pro ಸ್ಪೆಸಿಫಿಕೇಷನ್
ಹೊಸ Realme 3 Pro ಸ್ಮಾರ್ಟ್ಫೋನ್ ಫೋನ್ ಬ್ಯಾಟರಿಯ ಬಗ್ಗೆ ಹೇಳಬೇಕೆಂದರೆ 4045mAh ಚಾಲಿತದೊಂದಿಗೆ ಬರುತ್ತದೆ. ಇದರಲ್ಲಿ ಬಲವಾದ ಬ್ಯಾಟರಿಯೊಂದಿಗೆ ಚಾಲಿತಗೊಳಿಸಬಹುದು. ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಮತ್ತು ಬಾಕ್ಸ್ ನಲ್ಲಿ VOOC 3.0 ಮತ್ತು 20W VOOC ಚಾರ್ಜರ್ ಬರುತ್ತದೆ. ಅದ್ದೂರಿಯ ಸಮಯವನ್ನು ಒಂದೇ ಚಾರ್ಜ್ ಅಲ್ಲಿ ಕಳೆಯಬವುದು. ಇದು ಸ್ನಾಪ್ಡ್ರಾಗನ್ 710 SoC ಸಂಸ್ಕಾರಕವನ್ನು 6GB RAM ನೊಂದಿಗೆ ನೀಡುತ್ತದೆ.
ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ನೊಂದಿಗೆ ಪ್ರಾರಂಭಿಸುತ್ತದೆ. ಇದರಲ್ಲಿ 16MP + 5MP ಬ್ಯಾಕ್ ಕ್ಯಾಮೆರಾ ಮತ್ತು 25MP ಸೆಲ್ಫ್ ಕ್ಯಾಮೆರಾಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 ಆಕ್ಟಾ ಕೋರ್ 2.2 GHz AIE ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್ಫೋನ್ಗೆ 6.3 ಇಂಚಿನ ಪೂರ್ಣ HD+ ಡಿಸ್ಪ್ಲೇ ಹೊಂದಿದೆ. ಇತರ ಪ್ರಮುಖ ವೈಶಿಷ್ಟ್ಯಗಳು ಜಿಪಿಎಸ್ ಸೂಪರ್ ಸ್ಲೋ ಮೋಷನ್ ವೀಡಿಯೋ ರೆಕಾರ್ಡಿಂಗ್ ಮತ್ತು ನೈಟ್ ಸ್ಕೇಪ್ ಅನ್ನು ಉತ್ತಮಗೊಳಿಸುತ್ತದೆ.
ಈ ಸ್ಮಾರ್ಟ್ಫೋನ್ ಫೋನ್ ಅತ್ಯಂತ ಶಕ್ತಿಶಾಲಿ ಫೀಚರ್ಗಳೆಂದರೆ ಅದರ ಕ್ಯಾಮರಾ. ಈಗಾಗಲೇ ಬಿಡುಗಡೆಯಲ್ಲಿ ತೋರಿರುವಂತೆ ಈ ಫೋನ್ಗೆ 25MP ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದರ ಆರಂಭಿಕ ರೂಪಾಂತರ 4GB ಯ RAM ಮತ್ತು 64GB ಸ್ಟೋರೇಜ್ ಕೇವಲ 13,999 ರೂಗಳ ಬೆಲೆಯ ವ್ಯಾಪ್ತಿಯಲ್ಲಿ ಪಡೆಯಬವುದು. ಮತ್ತು ಇದರ ಮತ್ತೊಂದು ಆವೃತ್ತಿ ಅಂದ್ರೆ 6GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರ ಕೇವಲ 16,999 ರೂಗಳಲ್ಲಿ ಪಡೆಯಬವುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile