ಇಂದು ಅಂತಿಮವಾಗಿ ಭಾರತದಲ್ಲಿ Realme 3 ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಲಾಗಿದೆ. ಮತ್ತು ಅದರ ಹಿಂದಿನ ರಿಯಲ್ಮಿ ಫೋನ್ಗಳಿಗೆ ಹೋಲಿಸಿದರೆ ಈ ಸ್ಮಾರ್ಟ್ಫೋನ್ ಒಂದು ಅಪ್ಗ್ರೇಡ್ ಮುಂಭಾಗದ ಕ್ಯಾಮರಾ ಮತ್ತು ವಿನ್ಯಾಸ ಬರುತ್ತದೆ. ಅಲ್ಲದೆ ಫೋನ್ ಒಂದು 3D ಗ್ರೇಡಿಯಂಟ್ ಯುನಿಬಾಡಿ ವಿನ್ಯಾಸವನ್ನು ಹೊಂದಿದೆ. ಇದರ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮರಾ ಸೆಟಪ್ ಮತ್ತು ಫಿಂಗರ್ಪ್ರಿಂಟ್ ಸೆನ್ಸರ್ ಫೀಚರ್ಗಳೊಂದಿಗೆ ಈ ಫೋನ್ 2.1GHz ಆಕ್ಟಾ ಕೋರ್ ಹೆಲಿಯೊ P70 ಪ್ರೊಸೆಸರ್ ಮತ್ತು 4230mAh ಬ್ಯಾಟರಿಯೊಂದಿಗೆ ಆಂಡ್ರಾಯ್ಡ್ 9 ಪೈ ಆಧಾರಿತ ColorOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ Realme 3 ಸ್ಮಾರ್ಟ್ಫೋನ್ ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿರುವ Samsung ಮತ್ತು Xiaomi ಫೋನ್ಗಳಿಗೆ ಸ್ಪರ್ಧಿಸುತ್ತದೆ. ಈ ಫೋನ್ ಅನ್ನು ಭಾರತದಲ್ಲಿ ಎರಡು RAM ಮತ್ತು ಸ್ಟೋರೇಜ್ಗಳ ಆಯ್ಕೆಗಳಲ್ಲಿ ಅಂದ್ರೆ 3GB-32GB ಮತ್ತು 4GB-64GB ಯಂತೆ ಲಭ್ಯವಿರುತ್ತದೆ. ಇದರ ಬೆಲೆ ಬಗ್ಗೆ ಹೇಳಬೇಕೆಂದರೆ 3GB ಫೋನ್ 8999 ರೂಗಳಲ್ಲಿ ಲಭ್ಯವಾದರೆ 4GB ಫೋನ್ 10,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ಗಳು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ನಲ್ಲಿ ಮಾರ್ಚ 12 ರಂದು ಮಧ್ಯಾಹ್ನ 12:00ಕ್ಕೆ ಮಾರಟವಾಗಲಿದೆ.
Realme 3 ಫೋನ್ 6.2 ಇಂಚಿನ HD+ (720×1520 ಪಿಕ್ಸೆಲ್) ಡಿಸ್ಪ್ಲೇಯೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ 88.3% ಪ್ರತಿಶತ ಸ್ಕ್ರೀನ್-ಟು ಬಾಡಿ 450ppi ಡೆನ್ಸಿಟಿ ಮತ್ತು 19: 9 ಅಸ್ಪೆಟ್ ರೇಷು ಹೊಂದಿದೆ. ಇದರ ಕ್ಯಾಮೆರಾದ ಬಗ್ಗ್ರೆ ಹೇಳಬೇಕೆಂದರೆ ಈ ಸ್ಮಾಟ್ಫೋನ್ ಹಿಂಭಾಗದಲ್ಲಿ ಡುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದರಲ್ಲಿ ಒಂದು 13MP ಮೆಗಾಪಿಕ್ಸೆಲ್ ಸೆನ್ಸರ್ f/1.8 ಅಪೆರ್ಚರೊಂದಿಗೆ PDAF ಜೊತೆಗೆ ಬಂದ್ರೆ ಮತ್ತೊಂದು 2MP ಸೆನ್ಸರ್ ಡೆಪ್ತ್ ಸೆನ್ಸರ್ಗಾಗಿ ನೀಡಲಾಗಿದೆ. ಇದರಲ್ಲಿ ನೀವು 1080p@30fps ರೆಸುಲ್ಯೂಷನ್ HDR ಮೂಡಲ್ಲಿ ರೆಕಾರ್ಡ್ ಮಾಡಬವುದು.
ಅದೇ ರೀತಿ ಈ ಕ್ಯಾಮೆರಾದ ಸಾಲಲ್ಲಿ LED ಫ್ಲಾಶ್ ಸಹ ನೀಡಲಾಗಿದೆ. ಈ ಸ್ಮಾರ್ಟ್ಫೋನಿನ ಫ್ರಂಟ್ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಮೆಗಾಪಿಕ್ಸೆಲ್ ಸೆನ್ಸರ್ f/2.0 ರಿಂದ f1/3 ಅಪೆರ್ಚರೊಂದಿಗೆ ಬರುತ್ತದೆ. ಇದರಲ್ಲಿಯೂ ಸಹ ನೀವು 1080p@30fps ರೆಸುಲ್ಯೂಷನ್ HDR ಮೂಡಲ್ಲಿ ರೆಕಾರ್ಡ್ ಮಾಡಬವುದು. ಅಲ್ಲದೆ ಇದು ನಿಮಗೆ ಫೇಸ್ ಅನ್ಲಾಕ್ ಮಾಡುವ ಫೀಚರ್ ಸಹ ಒಳಗೊಂಡಿದೆ. ಇದರಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್ ಬಳಸಿ 256GB ವರೆಗೆ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ.