Realme 14x 5G India Launch: ಜನಪ್ರಿಯ ರಿಯಲ್‌ಮಿ (Realme) ಸ್ಮಾರ್ಟ್ಫೋನ್ ಕಂಪನಿ ತನ್ನ ಮುಂಬರಲಿರುವ Realme 14x 5G ಅನ್ನು ಇದೆ 18ನೇ ಡಿಸೆಂಬರ್ 2024 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಅಲ್ಲದೆ ಕಂಪನಿ ಬೀಡುಗಡೆಗೂ ಮುಂಚಿತವಾಗಿ ಇದರ ಅನೇಕ ಫೀಚರ್ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಿದೆ. Realme 14x 5G ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ ಇದರಲ್ಲಿ 6000mAh ಬ್ಯಾಟರಿ ಬರೋಬ್ಬರಿ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ ಸುಮಾರು ₹15,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಸೋರಿಕೆಯ ಪ್ರಕಾರ Realme 14x 5G ಪ್ರಸ್ತುತ ಇದೆ 18ನೇ ಡಿಸೆಂಬರ್ 2024 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ. ಇದು 6.67 ಇಂಚಿನ HD+ IPS LCD ಡಿಸ್ಪ್ಲೇ ಹೊಂದಿದೆ ಎಂದು ವರದಿಯಾಗಿದೆ. ಅಲ್ಲದೆ ಫೋನ್ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಲಿದ್ದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಸೆನ್ಸರ್ ಅನ್ನು ನಿರೀಕ್ಷಿಸಲಾಗಿದೆ.
ಇದು 6GB RAM ಮತ್ತು 128GB ಸ್ಟೋರೇಜ್ ಮತ್ತು 6GB RAM ಮತ್ತು 256GB ಸ್ಟೋರೇಜ್ ಎಂಬ ಎರಡು ಕಾನ್ಫಿಗರೇಶನ್‌ಗಳಲ್ಲಿ ಬರುವುದಾಗಿ ನಿರೀಕ್ಷಿಸಲಾಗಿದೆ. Realme 14x 5G ಸ್ಮಾರ್ಟ್ಫೋನ್ ನಿಮಗೆ 6,000mAh ಬ್ಯಾಟರಿ 45W ಫಾಸ್ಟ್ ಚಾರ್ಜಿಂಗ್ ಜೊತೆಗೆ ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69-ರೇಟೆಡ್ ಬಿಲ್ಡ್ ಅನ್ನು ಹೊಂದಿರಲಿದೆ.
Also Read: mAadhaar App: ನಿಮ್ಮ ಫೋನಲ್ಲಿ ಈ ಆಧಾರ್ ಅಪ್ಲಿಕೇಶನ್ ಇದ್ದರೆ ಏನೇಲ್ಲ ಪ್ರಯೋಜನಗಳಿವೆ ನಿಮಗೊತ್ತಾ?
ಈ ಜನಪ್ರಿಯ ರಿಯಲ್‌ಮಿ (Realme) ಸ್ಮಾರ್ಟ್ಫೋನ್ ಕಂಪನಿಯ ಮುಂಬರಲಿರುವ Realme 14x 5G ಫೋನ್ ಈಗಾಗಲೇ ಟ್ವಿಟ್ಟರ್ ಖಾತೆಯಲ್ಲಿ ಇದರ ಮಾಹಿತಿಯನ್ನು ಪೋಸ್ಟ್ ಮಾಡಿದ್ದು ಸುಮಾರು 6GB RAM ಮತ್ತು 128GB ಸ್ಟೋರೇಜ್ ರೂಪಾಂತರ ಸುಮಾರು 12,999 ರೂಗಳಿಗೆ ನಿರೀಕ್ಷಿಸಬಹುದು.
ಇದರ ಕ್ರಮವಾಗಿ ಇದರ 6GB RAM ಮತ್ತು 256GB ಸ್ಟೋರೇಜ್ ರೂಪಾಂತರ ಸುಮಾರು 13,999 ರೂಗಳೊಂದಿಗೆ ನಿರೀಕ್ಷಿಸಬಹುದು. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಬ್ಲಾಕ್, ಗೋಲ್ಡ್ ಮತ್ತು ರೆಡ್ ಎಂಬ 3 ಆಕರ್ಷಕ ಬಣ್ಣಗಳಲ್ಲಿ ಖರೀದಿಸಲು ಲಭ್ಯವಾಗಲಿದೆ. ಇನ್ನೂ Realme 14x 5G ಸ್ಮಾರ್ಟ್ಫೋನ್ ಸಂಭದಿಸಿದ ಖಚಿತ ಮಾಹಿತಿಗಾಗಿ ಇದರ ಬಿಡುಗಡೆ ಮತ್ತು ಅಪ್ಡೇಟ್ಗಳಿಗಾಗಿ ಕಾಯಬೇಕಿದೆ.