ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಎಂದೇ ಹೆಸರಾಗಿರುವ ರಿಯಲ್‌ಮಿ (Realme) ಇಂದು ಭಾರತದ ಮಾರುಕಟ್ಟೆಗೆ ತನ್ನ ಲೇಟೆಸ್ಟ್ Realme 13 Series ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಈ ಸರಣಿಯಲ್ಲಿ Realme 13 5G ಮತ್ತು Realme 13 Plus 5G ಸ್ಮಾರ್ಟ್ಫೋನ್ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಎರಡು ಸ್ಮಾರ್ಟ್ಫೋನ್ಗಳು ಸರಿಸುಮಾರು ಒಂದೇ ಮಾದರಿಯ ಫೀಚರ್ಗಳನ್ನು ಸಪೋರ್ಟ್ ಮಾಡುತ್ತದೆ.
ಈ ಎರಡು ಸ್ಮಾರ್ಟ್ಫೋನ್ಗಳು 8GB RAM ಮತ್ತು 128GB ಸ್ಟೋರೇಜ್ ಆರಂಭಿಕವನ್ನು ಹೊಂದಿದ್ದು Realme 13 Series ಸ್ಮಾರ್ಟ್ಫೋನ್ಗಳು 6ನೇ ಸೆಪ್ಟೆಂಬರ್ 2024 ರಿಂದ ಮೊದಲ ಮಾರಾಟಕ್ಕೆ Flipkart ಮತ್ತು Realme.com ಮೂಲಕ ಲಭ್ಯವಾಗಲಿವೆ. ಈ ಎರಡು ಸ್ಮಾರ್ಟ್ಫೋನ್ಗಳನ್ನು ನೀವು ಖರೀದಿಸಲು ಯೋಚಿಸುತ್ತದರೆ ಒಮ್ಮೆ ಇವುಗಳ ಬೆಲೆಯೊಂದಿಗೆ ಟಾಪ್ ಹೈಲೈಟ್ ಫೀಚರ್ಗಳೇನು ತಿಳಿಯಿರಿ.
Also Read: ನೀವು Mobile Network ಇಲ್ಲದೆ ಸಿಕ್ಕಾಪಟ್ಟೆ ತಲೆನೋವಾಗುತ್ತಿದ್ಯಾ? ಹಾಗಾದ್ರೆ ಇದಕ್ಕೆ ಕಾರಣವೇನು ಮತ್ತು ಪರಿಹಾರವೇನು?
ಮೊದಲಿಗೆ ಈ ಸ್ಮಾರ್ಟ್ಫೋನ್ಗಳ ಆಫರ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮತನಡುವುದಾದರೆ ಮೊದಲಿಗೆ Realme 13 5G ಸ್ಮಾರ್ಟ್ಫೋನ್ ಎರಡು ರೂಪಾಂತರದಲ್ಲಿ ಲಭ್ಯವಿದ್ದು ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 17,999 ರೂಗಳಿಗೆ ಬಿಡುಗಡೆಗೊಳಿಸಿದರೆ ಇದರ ಕ್ರಮವಾಗಿ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 19,999 ರೂಗಳಿಗೆ ಬಿಡುಗಡೆಗೊಳಿಸಿದೆ. ಇದರೊಂದಿಗೆ Realme 13 Pro 5G ಸ್ಮಾರ್ಟ್ಫೋನ್ ಮೂರು ರೂಪಾಂತರದಲ್ಲಿ ಲಭ್ಯವಿದ್ದು ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 22,999 ರೂಗಳಿಗೆ ಬಂದ್ರೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 24,999 ರೂಗಳಿಗೆ ಬಿಡುಗಡೆಯಾದರೆ ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 26,999 ರೂಗಳಿಗೆ ಬಿಡುಗಡೆಯಾಗಿದೆ.
ಅಲ್ಲದೆ ಇದರೊಂದಿಗೆ ಇಂದು ಸಂಜೆ 6:00 ಗಂಟೆಯಿಂದ ಇದರ ಪ್ರಿ-ಬುಕಿಂಗ್ ಸಹ ಆರಂಭವಾಗಲಿದೆ. Realme 13 5G ಸ್ಮಾರ್ಟ್ಫೋನ್ ಮೇಲೆ 1000 ರೂಗಳ ಮತ್ತು Realme 13 Plus 5G ಮೇಲೆ 1500 ರೂಗಳ ಬ್ಯಾಂಕ್ ಆಫರ್ ಪಡೆಯಬಹುದು. ಇದರೊಂದಿಗೆ 2000 ರೂಗಳನ್ನು ನಿಮ್ಮ ಹಳೆಯ ಸ್ಮಾರ್ಟ್ಫೋನ್ ನೀಡಿ Exchange Bonus ಅಡಿಯಲ್ಲಿ ವಿನಿಮಯದಲ್ಲಿ ಪಡೆಯಬಹುದು.
ಸ್ಮಾರ್ಟ್ಫೋನ್ 6.72 ಇಂಚಿನ LCD ಡಿಸ್ಪ್ಲೇಯನ್ನು 120Hz ನ ರಿಫ್ರೆಶ್ ದರದೊಂದಿಗೆ ಹೊಂದಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಫ್ಲ್ಯಾಷ್‌ಲೈಟ್ ಅನ್ನು ಹೋಸ್ಟ್ ಮಾಡುತ್ತದೆ. ಕ್ಯಾಮೆರಾ ವ್ಯವಸ್ಥೆಯು 50-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮೊನೊ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಸ್ಮಾರ್ಟ್‌ಫೋನ್ ಡಿಸ್ಪ್ಲೇಯ ಉನ್ನತ ದರ್ಜೆಯಲ್ಲಿ 16MP ಮೆಗಾಪಿಕ್ಸೆಲ್ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿದೆ. ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಸ್ಮಾರ್ಟ್‌ಫೋನ್ MediaTek Dimensity 6300 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ಡ್ 14 ಅನ್ನು ಆಧರಿಸಿದ Realme UI ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್‌ಪ್ಲೇಯನ್ನು 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. Realme 13+ 5G ವಿನ್ಯಾಸವು ಅದರ ಮೂಲ ರೂಪಾಂತರದಂತೆಯೇ ಇದೆ. ಹಿಂಭಾಗದ ಪ್ಯಾನಲ್ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಕೆಳಭಾಗದಲ್ಲಿ ಮಾರ್ಬಲ್ ತರಹದ ವಿನ್ಯಾಸವನ್ನು ಹೊಂದಿದೆ. ಇದು 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮೊನೊ ಕ್ಯಾಮೆರಾವನ್ನು ಹೊಂದಿದೆ. 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾವನ್ನು ಪಂಚ್-ಹೋಲ್ ಡಿಸ್ಪ್ಲೇಯ ಉನ್ನತ ದರ್ಜೆಯ ಮೇಲೆ ಸ್ಥಾಪಿಸಲಾಗಿದೆ. ಸ್ಮಾರ್ಟ್‌ಫೋನ್ MediaTek Dimensity 7300 5G ಚಿಪ್‌ನಿಂದ ಚಾಲಿತವಾಗಿದೆ ಮತ್ತು ರಿಯಲ್ಮೆ ಯುಐ 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ. ಇದು 80W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.