ಭಾರತದ ಜನಪ್ರಿಯ ರಿಯಲ್‌ಮಿ (Realme) ತನ್ನ ಹೊಸ ಫೋನ್‌ಗಳೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತಲೇ ಬಂದಿದೆ. ಈ Realme 13 Pro Series ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಕಂಪನಿಯು ಮತ್ತೊಮ್ಮೆ ಸರಣಿಯನ್ನು ತರುತ್ತಿದ್ದು ಅದು ಬಳಕೆದಾರರ ಅನುಭವವನ್ನು ಬದಲಾಯಿಸಲಿದೆ. ಸ್ಮಾರ್ಟ್ ಫೋನ್ ಬಂದ ಆರಂಭದ ದಿನಗಳಲ್ಲಿ ಅವುಗಳ ತಂತ್ರಜ್ಞಾನ ಈಗಿನಂತೆ ಇರಲಿಲ್ಲ. ಮೊದಲು ಪೋಟ್ರೇಟ್ ಫೋಟೋಗಳು ಮತ್ತು ನಿಧಾನವಾದ ಕಾರ್ಯಕ್ಷಮತೆ, ದುರ್ಬಲ ಸ್ಕ್ರೀನ್ ಮತ್ತು ಕಡಿಮೆ ಬ್ಯಾಟರಿ ಬಾಳಿಕೆ ಸಾಮಾನ್ಯವಾಗಿದ್ದವು ಆದರೆ ಈಗ ಪೂರ್ತಿ ಗೇಮ್ ಬದಲಾಹಿಸಿದೆ. Realme 13 Pro Series ವಿಭಾಗದಲ್ಲಿ ಪ್ರಮುಖವಾಗಿ Realme 13 Pro ಮತ್ತು Realme 13 Pro+ ಅನ್ನು ನಿರೀಕ್ಷಿಸಲಾಗಿದೆ.
Also Read: ಬೆಲೆ ಏರಿಕೆಯಿಂದಾಗಿ BSNL 4G ಬಳಸಲು ಹರಿದು ಬಂದ ಜನಸಾಗರ! ಹತ್ತಿರದ ಟವರ್ ಈ ರೀತಿ ಪರಿಶೀಲಿಸಿಕೊಳ್ಳಿ!
ಕಳೆದ ಕೆಲವು ವರ್ಷಗಳಿಂದ ನಾವು ಸ್ಮಾರ್ಟ್‌ಫೋನ್ ಗುಣಮಟ್ಟದಲ್ಲಿ ಗಮನಾರ್ಹವಾದ ವಿಕಸನವನ್ನು ಮಾಡಿರುವ ರಿಯಲ್‌ಮಿ (Realme) ತಮ್ಮ ಪ್ರತಿ ಪೀಳಿಗೆಯ ಫೋನ್ ನಾವೀನ್ಯತೆ ಮತ್ತು ಬಳಕೆದಾರರ ಅನುಭವದ ಗಡಿಗಳನ್ನು ಹೆಚ್ಚಿಸುತ್ತಿದೆ. ಈ ಮೂಲಕ ಇಂದಿನ ಸ್ಮಾರ್ಟ್‌ಫೋನ್‌ಗಳು ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿ ಮತ್ತು ಬಾಳಿಕೆ ನೀಡುವ ಲೇಟೆಸ್ಟ್ ಫೀಚರ್ ಮತ್ತು ವಿಶೇಷಣಗಳೊಂದಿಗೆ ಬರುತ್ತವೆ. ರಿಯಲ್‌ಮಿ ಪ್ರಭಾವಶಾಲಿ ಒಳನೋಟಗಳನ್ನು ನೀಡುವುದಲ್ಲದೆ ಗ್ರಾಹಕರ ಅಗತ್ಯತೆಗಳು ಮತ್ತು ಬೇಡಿಕೆಗಳನ್ನು ಪೂರೈಸುವ ಗುಣಮಟ್ಟದ ಕ್ಯಾಮೆರಾ, ಡಿಸ್ಪ್ಲೇ, ಪ್ರೊಸೆಸರ್ ಮತ್ತು ಬ್ಯಾಟರಿಯ ಅಡಿಪಾಯದ ಮೇಲೆ ನಿರ್ಮಿಸಲಾದ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುವ ಗುರಿಯನ್ನು ರಿಯಲ್‌ಮಿ (Realme) ಹೊಂದಿದೆ.
ಈ ಮುಂಬರಲಿರುವ Realme 13 Pro ಮತ್ತು Realme 13 Pro+ ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ನೋಡುವುದಾದರೆ ಹೈಪರ್‌ಇಮೇಜ್+ ಫೋಟೋಗ್ರಫಿ ಆರ್ಕಿಟೆಕ್ಚರ್ ಅನ್ನು ಹೊಂದಿರುತ್ತದೆ ಎಂದು Realme ದೃಢಪಡಿಸಿದೆ. Realme 13 Pro+ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. OIS ಜೊತೆಗೆ 50MP Sony LYT 701 ಸೆನ್ಸರ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50MP Sony LYT 600 ಸೆನ್ಸರ್ ಅನ್ನು ಒಳಗೊಂಡಿರುತ್ತದೆ. ಈ ಎರಡೂ ಸ್ಮಾರ್ಟ್ಫೋನ್ TUV ರೈನ್‌ಲ್ಯಾಂಡ್ ಹೈ ರೆಸಲ್ಯೂಷನ್ ಕ್ಯಾಮೆರಾ ಪ್ರಮಾಣೀಕರಣದೊಂದಿಗೆ ಬರುತ್ತವೆ.
Realme 13 Pro+ ಮತ್ತು Realme 13 Pro ಗ್ಲಾಸ್ ಬ್ಯಾಕ್ ಪ್ಯಾನೆಲ್‌ಗಾಗಿ ಮೊನೆಟ್ ಗೋಲ್ಡ್ ಮತ್ತು ಮೊನೆಟ್ ಪರ್ಪಲ್ ಬಣ್ಣಗಳಲ್ಲಿ ಮತ್ತು ವೆಜಿಟೇರಿಯನ್ ಸ್ಕಿನ್ ಆಯ್ಕೆಗಾಗಿ ಎಮರಾಲ್ಡ್ ಗ್ರೀನ್ ಬಣ್ಣದ ರೂಪಾಂತರದಲ್ಲಿ ಲಭ್ಯವಿರುತ್ತದೆ. Realme 13 Pro ಅನ್ನು ಇತ್ತೀಚೆಗೆ Geekbench ಪಟ್ಟಿಯಲ್ಲಿ ಗುರುತಿಸಲಾಗಿದೆ. ಅದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ RMX3990 ನೊಂದಿಗೆ ಬರುತ್ತದೆ. ಅಲ್ಲದೆ Snapdragon 7s Gen 2 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಸೂಚಿಸಿದೆ. ಇದು ಗ್ರಾಫಿಕ್ಸ್-ತೀವ್ರವಾದ ಕಾರ್ಯಗಳನ್ನು ನಿರ್ವಹಿಸಲು ಅಡ್ರಿನೊ 710 GPU ಅನ್ನು ಹೊಂದಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಿಜಿಟ್ ಕನ್ನಡದ ಲೇಖನಗಳನ್ನು ನೋಡುತ್ತಿರಿ.