Realme 12x 5G: ಖರೀದಿಸುವ ಮುಂಚೆ 50MP ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳ ವಿಶೇಷತೆಗಳನ್ನು ತಿಳಿಯಿರಿ!

Realme 12x 5G: ಖರೀದಿಸುವ ಮುಂಚೆ 50MP ಕ್ಯಾಮೆರಾದೊಂದಿಗೆ ಟಾಪ್ 5 ಫೀಚರ್‌ಗಳ ವಿಶೇಷತೆಗಳನ್ನು ತಿಳಿಯಿರಿ!

ಭಾರತದಲ್ಲಿ ರಿಯಲ್‌ಮಿಯಿಂದ ಅತಿ ನಿರೀಕ್ಷಿತವಾಗಿದ್ದ Realme 12x 5G ಸ್ಮಾರ್ಟ್ಫೋನ್ ಅನ್ನು ಕಂಪನಿ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಕೈಗೆಟಕುವ ಬೆಲೆಗೆ ಬೆಸ್ಟ್ ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಅಲ್ಲದೆ ಈ Realme 12x 5G ಸ್ಮಾರ್ಟ್ಫೋನ್ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಕೇವಲ 11,999 ರೂಗಳಿಗೆ ಖರೀದಿಸಬಹುದು. Realme 12x 5G ಸ್ಮಾರ್ಟ್ಫೋನ್ ಆರಂಭಿಕ 4GB RAM ಮತ್ತು 128GB ಸ್ಟೋರೇಜ್ ಕೇವಲ 11,999 ರೂಗಳಿಗೆ ಖರೀದಿಸಬಹುದು. ಈ ಮೂಲಕ Realme 12x 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದರ ಟಾಪ್ 5 ಫೀಚರ್‌ಗಳ ವಿಶೇಷತೆಗಳನ್ನು ಒಮ್ಮೆ ಪರಿಶೀಲಿಸಬಹುದು.

Realme 12x 5G ಡಿಸ್ಪ್ಲೇ ಮಾಹಿತಿ

Realme 12X 5G ಸ್ಮಾರ್ಟ್ಫೋನ್ ಇದರಲ್ಲಿ 6.72 ಇಂಚಿನ FHD+ ಡಿಸ್ಪ್ಲೇಯನ್ನು 120Hz ವರೆಗಿನ ರಿಫ್ರೆಶ್ ದರದೊಂದಿಗೆ ಹೊಂದಿದೆ. ಸ್ಮಾರ್ಟ್ಫೋನ್ ನಿಮಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡಲು 1080 x 2400 ಪಿಕ್ಸೆಲ್ FHD ರೆಸುಲ್ಯೂಷನ್ ಜೊತೆಗೆ ಸುಮಾರು 950 ನಿಟ್‌ಗಳ ಹೊಳಪಿನೊಂದಿಗೆ ಇದು ಪ್ರಕಾಶಮಾನವಾದ ಪರಿಸ್ಥಿತಿಗಳಲ್ಲಿಯೂ ಸಹ ಸ್ಪಷ್ಟ ಮತ್ತು ರೋಮಾಂಚಕ ದೃಶ್ಯಗಳನ್ನು ಒದಗಿಸುತ್ತದೆ. ಅಲ್ಲದೆ ಸ್ಮಾರ್ಟ್ಫೋನ್ ಡಿಸ್ಪ್ಲೇ ಬೆಝೆಲ್ ಅತಿ ಕಡಿಮೆಯಾಗಿದ್ದು 91.40% ಸ್ಕ್ರೀನ್ ಟು ಬಾಡಿಯನ್ನು ಹೊಂದಿದೆ.

Realme 12x 5G launched in India
Realme 12x 5G launched in India

Realme 12x 5G ಕ್ಯಾಮೆರಾ ಸೆನ್ಸರ್ ಹೇಗಿದೆ?

ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು 50MP ಮೆಗಾಪಿಕ್ಸೆಲ್ f/1.8 ಅಪರ್ಚರ್ ವೈಡ್ ಸೆನ್ಸರ್ ಹೊಂದಿದ್ದು ಮತ್ತೊಂದು 2MP ಮೆಗಾಪಿಕ್ಸೆಲ್ f/2.4 ಅಪರ್ಚರ್ ಡೆಪ್ತ್ ಸೆನ್ಸರ್ ಅನ್ನು ಹೊಂದಿದೆ. ಈ ಮೂಲಕ ಸ್ಮಾರ್ಟ್ಫೋನ್ AI ಕ್ಯಾಮೆರಾವನ್ನು ಸಪೋರ್ಟ್ ಮಾಡುವುದರೊಂದಿಗೆ ನಿಮಗೆ ಡಿಸೆಂಟ್ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಹೆಚ್ಚು ಸಹಕಾರಿಯಾಗಿದೆ. Realme 12X 5G ಡಿಸ್ಪ್ಲೇಯ ಮೇಲ್ಭಾಗದ ಪಂಚ್ ಹೋಲ್ ಒಳಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಮೆಗಾಪಿಕ್ಸೆಲ್ f/2.0 ಅಪರ್ಚರ್ ಹೊಂದಿದೆ.

ರಿಯಲ್‌ಮಿ 12x 5G ಹಾರ್ಡ್ವೇರ್ ಡೀಟೇಲ್ಸ್

ಇದರಲ್ಲಿನ ಎಲ್ಲಾ ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳಿಗಾಗಿ ಮಾಲಿ G57 GPU ನೊಂದಿಗೆ ಜೋಡಿಸಲಾದ MediaTek ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. Realme 12X 5G ಸ್ಮಾರ್ಟ್ಫೋನ್ ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ IP54 ಡಸ್ಟ್ & ವಾಟರ್ ರೆಸಿಸ್ಟೆನ್ಸ್, ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

Realme 12x 5G launched in India
Realme 12x 5G launched in India

ರಿಯಲ್‌ಮಿ 12x 5G ಬ್ಯಾಟರಿ ವಿಶೇಷತೆಗಳೇನು?

ಈ Realme 12x 5G ಫೋನ್ ಪವರ್ ನೀಡಲು 5000mAh ಬ್ಯಾಟರಿಯನ್ನು ಹೊಂದಿದ್ದು ಇದರ ವಿಸ್ತೃತ ಬಳಕೆ ಮತ್ತು ದೀರ್ಘ ಬ್ಯಾಟರಿ ಅವಧಿಯನ್ನು ಖಾತ್ರಿಗೊಳಿಸುತ್ತದೆ. 45W SUPERVOOC ಚಾರ್ಜರ್ ಜೊತೆಗೆ ಇದು ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಅನ್ನು ತಲುಪಬಹುದು. Realme 12x 5G ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. VCVT ಇಂಟೆಲಿಜೆಂಟ್ ಟ್ಯೂನಿಂಗ್ ಅಲ್ಗಾರಿದಮ್ ಮತ್ತು VFC ಟ್ರಿಕಲ್ ಚಾರ್ಜಿಂಗ್ ಅಲ್ಗಾರಿದಮ್‌ನಂತಹ ಸ್ಮಾರ್ಟ್ ಅಲ್ಗಾರಿದಮ್‌ಗಳು ಸಮರ್ಥ ಮತ್ತು ಸುರಕ್ಷಿತ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತವೆ.

Realme 12x 5G ಬೆಲೆ ಎಷ್ಟು ಮತ್ತು ಆಫರ್ಗಳೇನು?

ಸ್ಮಾರ್ಟ್‌ಫೋನ್‌ನ ಅಧಿಕೃತ ಮಾರಾಟವು ರಿಯಲ್‌ಮಿಯ ಅಧಿಕೃತ ಸೈಟ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಫ್ಲಿಪ್‌ಕಾರ್ಟ್ ಏಪ್ರಿಲ್ 2 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಸ್ಮಾರ್ಟ್ಫೋನ್ ಅನ್ನು ಆಸಕ್ತರು 5ನೇ ಏಪ್ರಿಲ್ 2024 ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗುವ ವಿಶೇಷ ಮಾರಾಟ ಕಾರ್ಯಕ್ರಮವನ್ನು ಸಹ ಹೊಂದಿಸಲಾಗಿದೆ. Realme 12x 5G ಸ್ಮಾರ್ಟ್ಫೋನ್ ಭಾರತದಲ್ಲಿ 4GB RAM ಮತ್ತು 128GB ಸ್ಟೋರೇಜ್ ಮಾದರಿಗೆ 11,999 ರೂಗಳಾಗಿವೆ.

Also Read: Secure Your Personal data: ಸ್ಮಾರ್ಟ್ಫೋನ್ ಬಳಸುವಾಗ ಈ 4 ವೀಷಯಗಳನ್ನು ನೆನಪಿಟ್ಟುಕೊಂಡ್ರೆ ಫುಲ್ ಸೇಫ್!

ಇದರ 6GB RAM ಮತ್ತು 128GB ಸ್ಟೋರೇಜ್ ಮಾದರಿಗೆ 13,499 ರೂಗಳು ಮತ್ತು ಕೊನೆಯದಾಗಿ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 14,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ SBI, HDFC, ಅಥವಾ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಖರೀದಿದಾರರು 4GB ಮತ್ತು 8GB ಮಾದರಿಗಳ ಮೇಲೆ ರೂ. 1,000 ರಿಯಾಯಿತಿ ಕ್ರಮವಾಗಿ 6GB ಮಾದರಿಯ ಮೇಲೆ 1,500 ಬ್ಯಾಂಕ್ ರಿಯಾಯಿತಿಯೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo