Realme 12 Pro Series 5G: ರಿಯಲ್‌ಮಿ (Realme) ಸ್ಮಾರ್ಟ್ಫೋನ್ ಕಂಪನಿ ಈಗ 200MP ಪೆರಿಸ್ಕೋಪ್ ಕ್ಯಾಮೆರಾದೊಂದಿಗೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ Realme 12 Pro Series 5G ಅನ್ನು ಇದೆ ಜನವರಿ ತಿಂಗಳೊಳಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಕೆಲವೇ ದಿನಗಳಲ್ಲಿ ದೇಶೀಯ ಮಾರುಕಟ್ಟೆಗೆ ಬರಲಿವೆ. ಈ ಹಿನ್ನಲೆಯಲ್ಲಿ ಮುಂಬರಲಿರುವ ಈ 5G ಸ್ಮಾರ್ಟ್‌ಫೋನ್ ಬಗ್ಗೆ ಮಹತ್ವದ ಅಪ್ಡೇಟ್‌ಗಳು ಬೆಳಕಿಗೆ ಬಂದಿವೆ. ಈ Realme 12 Pro ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಕಂಪನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆಗೊಳಿಸಿದ್ದಾರೆ.
Also Read: Jio ಅನ್ಲಿಮಿಟೆಡ್ 5G ಡೇಟಾ ಮತ್ತು ಕರೆಗಳೊಂದಿಗೆ ಹೊಸ Roaming ಯೋಜನೆಗಳನ್ನು ಪರಿಚಯಿಸಿದೆ
ಈ ಮುಂಬರಲಿರುವ ಸ್ಮಾರ್ಟ್‌ಫೋನ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಪ್ರಸಿದ್ಧ ಐಷಾರಾಮಿ ವಾಚ್ ಬ್ರ್ಯಾಂಡ್ ರೋಲೆಕ್ಸ್‌ನೊಂದಿಗೆ ರಿಯಲ್‌ಮಿಯ ಬ್ರಾಂಡ್ ಸಹಯೋಗವಿದೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ. ಈ ಪೋಸ್ಟರ್‌ನಲ್ಲಿ ಸ್ಮಾರ್ಟ್ಫೋನ್ ಬ್ಯಾಕ್ ಬ್ಲೂ ಮ್ಯಾಟ್ ಟೆಸ್ಟ್ನರ್ ಲೆದರ್‌ನೊಂದಿಗೆ ಗೋಲ್ಡನ್ ಥೀಮ್‌ನಲ್ಲಿ ಈ Realme 12 Pro Series 5G ರೋಲೆಕ್ಸ್ ವಾಚ್ ಅನ್ನು ಒಳಗೊಂಡಿದೆ. ಅಲ್ಲದೆ ಪೋಸ್ಟರ್‌ನಲ್ಲಿರುವ ಈ ರೋಲೆಕ್ಸ್ ವಾಚ್ ಒಳಗೆ 28 ಎಂಬ ಅಂಕೆ ಇರುವುದರಿಂದ ಕೆಲವು ವರದಿಗಳ ಪ್ರಕಾರ 28ನೇ ಜನವರಿ 2024 ರಂದು ಬಿಡುಗಡೆಯಾಗುವ ನಿರೀಕ್ಷೆಗಳಿವೆ.
ಇದಲ್ಲದೆ Realme 12 Pro 5G ತನ್ನ ಭಾರತದ ವೆಬ್‌ಸೈಟ್‌ನಲ್ಲಿ ಈ ಫೋನ್ ಮಾಡೆಲ್ ಹ್ಯಾಂಡ್‌ಸೆಟ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ಹೇಳಿದೆ. ಇದು Redmi Note 13 Pro ಸರಣಿಯಲ್ಲಿರುವಂತೆ 200MP ಯೂನಿಟ್‌ಗಳಲ್ಲಿ ಬಿಯಾಂಡ್ 200M ಎಂಬ ಟ್ಯಾಗ್‌ಲೈನ್ ಹೊಂದಿದೆ. ಆದರೆ ಈ ಜನವರಿ ತಿಂಗಳೊಳಗೆ ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಇದನ್ನು ಹೊರೆತುಪಡಿಸಿ ಇದರ ಬಿಡುಗಡೆಯ ನಿಖರವಾದ ದಿನಾಂಕವನ್ನು ಕಂಪನಿ ಇನ್ನೂ ಅಂತಿಮಗೊಳಿಸಲಾಗಿಲ್ಲ.
ಈ ಮುಂಬರಲಿರುವ Realme 12 Pro Series 5G ಸ್ಮಾರ್ಟ್‌ಫೋನ್‌ಗಳ ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಪ್ರತ್ಯೆಕವಾಗಿ Realme 12 Pro 5G ಮಾದರಿಯು ಬೆಸ್ಟ್ ಮತ್ತು ಲೇಟೆಸ್ಟ್ ಅಪ್‌ಡೇಟ್‌ಗಳೊಂದಿಗೆ 6.7 ಇಂಚಿನ FHD+ OLED ಡಿಸ್ಪ್ಲೇಯೊಂದಿಗೆ 160Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತವೆ. ಅಲ್ಲದೆ ಉತ್ತಮ ಅನುಭವಕ್ಕಾಗಿ ಸ್ಮಾರ್ಟ್‌ಫೋನ್ HDR10 ಸಹ ಸಪೋರ್ಟ್ ಮಾಡುವ ನಿರೀಕ್ಷೆಗಳಿವೆ. ಸ್ಮಾರ್ಟ್ಫೋನ್ಗಳು 5000mAh ಸಾಮರ್ಥ್ಯದೊಂದಿಗೆ 67W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುವ ಡಿಸೆಂಟ್ ಬ್ಯಾಟರಿಯನ್ನು ಹೊಂದಲಿದೆ ಎಂದು ಟೆಕ್ ಮೂಲಗಳು ತಿಳಿಸಿವೆ.
ಈ ಸ್ಮಾರ್ಟ್‌ಫೋನ್ ಕ್ಯಾಮರಾಕ್ಕೆ ಸಂಬಂಧಿಸಿದಂತೆ ಇದು 200MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಜೊತೆಗೆ 64MP ಮತ್ತು 8MP ಬ್ಯಾಕ್ ಕ್ಯಾಮೆರಾದ ಟ್ರಿಪಲ್ ಸೆಟಪ್ ಸೆನ್ಸರ್ ಹೊಂದಿರುವ ನಿರೀಕ್ಕ್ಷೆಗಳಿವೆ. ಅಲ್ಲದೆ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಗಳಿವೆ. ಈ ಹೊಸ Realme ಸ್ಮಾರ್ಟ್‌ಫೋನ್ Snapdragon 8s Gen 2 ಚಿಪ್‌ಸೆಟ್‌ನೊಂದಿಗೆ ಬರುವುದಾಗಿ ಹೇಳಬಹುದು. ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ