ಪಾರದರ್ಶಕ ಬ್ಯಾಕ್ ಪ್ಯಾನೆಲ್‌ನೊಂದಿಗೆ Realme 12 Pro Plus ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ!

ಪಾರದರ್ಶಕ ಬ್ಯಾಕ್ ಪ್ಯಾನೆಲ್‌ನೊಂದಿಗೆ Realme 12 Pro Plus ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ!
HIGHLIGHTS

ರಿಯಲ್‌ಮಿ ಇತ್ತೀಚೆಗೆ ತನ್ನ ಲೇಟೆಸ್ಟ್ Realme 12 Pro ಸರಣಿಯನ್ನು ಈಗಾಗಲೇ ಭಾರತದಲ್ಲಿ ಬಿಡುಗಡೆಗೊಳಿಸಿದೆ.

Realme 12 Pro Plus ಸ್ಮಾರ್ಟ್ಫೋನ್ 6.7 ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ.

Realme 12 Pro Plus ಪಾರದರ್ಶಕ ಬ್ಯಾಕ್ (Transparent Back) ಒಳಗೊಂಡಿರುವ ಹೊಸ ಆವೃತ್ತಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.

ರಿಯಲ್‌ಮಿ ಇತ್ತೀಚೆಗೆ ತನ್ನ ಲೇಟೆಸ್ಟ್ Realme 12 Pro ಸರಣಿಯನ್ನು ಈಗಾಗಲೇ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಆದರೆ ಈಗ ಕಂಪನಿ ಈ ಶ್ರೇಣಿಯ ಮತ್ತೊಂದು ವೇರಿಯೆಂಟ್ ಸ್ಮಾರ್ಟ್‌ಫೋನ್ ಮಾದರಿಯನ್ನು ಬಿಡುಗಡೆಗೆಗೊಳಿಸುವ ನಿರೀಕ್ಷೆಗಳಿವೆ. ಅಂದ್ರೆ Realme 12 Pro Plus ಸ್ಮಾರ್ಟ್ಫೋನ್ ಈಗಾಗಲೇ ಪಾರದರ್ಶಕ ಬ್ಯಾಕ್ (Transparent Back) ಒಳಗೊಂಡಿರುವ ಈ ಸ್ಮಾರ್ಟ್ಫೋನ್ ತನ್ನ ಹೊಸ ಆವೃತ್ತಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿರುವಂತೆ ತೋರುತ್ತಿದೆ. ಈ ಮೂಲಕ ಫೋನ್ ಪಾರದರ್ಶಕ ಬ್ಯಾಕ್ ಪ್ಯಾನೆಲ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

Also Read: Valentine’s Day Gifts: ವ್ಯಾಲೆಂಟೈನ್ಸ್​ ಡೇ ದಿನದಂದು ಪೋಷಕರಿಗೆ ಅಥವಾ ಪ್ರೇಯಸಿಗೆ ನೀಡುವ ಬೆಸ್ಟ್ ಟೆಕ್ ಗಿಫ್ಟ್‌ಗಳು!

ಇದನ್ನು ರಿಯಲ್‌ಮಿ ಯೂರೋಪ್ CEO ಆಗಿರುವ ಫ್ರಾನ್ಸಿಸ್ ವಾಂಗ್ (Francis Wong) ಅವರು ತಮ್ಮ ಟ್ವಿಟ್ಟರ್ ಖಾತೆಯಾದ @FrancisRealme ಮೂಲಕ ಈ ಮುಂಬರುವ ಫೋನ್‌ನ ಹ್ಯಾಂಡ್-ಆನ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ಪೋಸ್ಟ್‌ನಲ್ಲಿ ವಾಂಗ್ ಅವರು ಕಳೆದ ವಾರದಿಂದ ಈ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿದ್ದಾರೆ ಮತ್ತು “ಮೊದಲು ಅದನ್ನು ಎಲ್ಲಿ ಪ್ರಾರಂಭಿಸಬೇಕು ಎಂದು ಸೂಚಿಸಲು ಬಳಕೆದಾರರನ್ನು ಕೇಳಿದರು. ಚಿತ್ರದಲ್ಲಿ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ (1) ಮತ್ತು (2) ಸೀ-ಥ್ರೂ ಬ್ಯಾಕ್ ಪ್ಯಾನೆಲ್‌ನಂತೆಯೇ ಪಾರದರ್ಶಕ ಹಿಂಭಾಗವನ್ನು ಹೊಂದಿದೆ.

ರಿಯಲ್‌ಮಿ 12 Pro Plus ಹೊಸ ರೂಪಾಂತರ?

ಇದರ ಲೈವ್ ಚಿತ್ರದಲ್ಲಿರುವ ಫೋನ್ Realme 12 Pro Plus ನಂತೆಯೇ ದೊಡ್ಡ ವೃತ್ತಾಕಾರದ ಮಾಡ್ಯೂಲ್ ಅನ್ನು ಹೊಂದಿದೆ. ಅದಕ್ಕಾಗಿಯೇ ಅನೇಕ ಮಾಧ್ಯಮ ವರದಿಗಳು ಪಾರದರ್ಶಕ ಬ್ಯಾಕ್ ಪ್ಯಾನಲ್ ಮೂಲಕ ಬರಲಿರುವ ಈ ಹ್ಯಾಂಡ್‌ಸೆಟ್ ಹೊಸದಾಗಿ ಬಿಡುಗಡೆಯಾದ Realme 12 Pro+ ಸ್ಮಾರ್ಟ್‌ಫೋನ್ ಮಾದರಿಯ ಹೊಸ ರೂಪಾಂತರವಾಗಿರಬಹುದು ಎಂದು ಊಹಿಸಬಹುದು. ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಚಿನ್ನದ ಬಣ್ಣದ ಕವರ್ ಅನ್ನು ಸಹ ಹೊಂದಿದೆ.

Realme 12 Pro Plus ಸ್ಮಾರ್ಟ್ಫೋನ್ ವಿಶೇಷಣಗಳು

ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಕಾಯುತ್ತಿರುವಾಗ Realme 12 Pro Plus ಸ್ಮಾರ್ಟ್ಫೋನ್ ವಿಶೇಷಣಗಳನ್ನು ನೋಡೋಣ. Realme 12 Pro Plus ಸ್ಮಾರ್ಟ್ಫೋನ್ 6.7 ಇಂಚಿನ FHD+ AMOLED ಡಿಸ್ಪ್ಲೇಯನ್ನು ಹೊಂದಿದೆ ಅದು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುವುದರೊಂದಿಗೆ ಅದು 67W ವ್ಯಾಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ Snapdragon 7s Gen 2 ಪ್ರೊಸೆಸರ್‌ನೊಂದಿಗೆ ಪವರ್ ನೀಡುತ್ತದೆ.

ಇದರ ಫೋಟೋಗ್ರಾಫಿಯಲ್ಲಿ Realme 12 Pro Plus ಸ್ಮಾರ್ಟ್‌ಫೋನ್ ಮಾದರಿಯು 50-ಮೆಗಾಪಿಕ್ಸೆಲ್ OIS ಪ್ರೈಮರಿ ಕ್ಯಾಮೆರಾ 64MP ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಸಂವೇದಕ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇದು 32MP ಸೆಲ್ಫಿ ಶೂಟರ್ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo