Realme 11 Pro ಸರಣಿಯ ಜಬರ್ದಸ್ತ್ 5G ಫೋನ್ ಬಿಡುಗಡೆ! ಖರೀದಿಗೂ ಮುಂಚೆ ಟಾಪ್ ಫೀಚರ್ ತಿಳಿಯಲೇಬೇಕು!

Updated on 08-Jun-2023
HIGHLIGHTS

ಇಂದು ಭಾರತದಲ್ಲಿ ತನ್ನ ಹೊಚ್ಚ Realme 11 Pro 5G ಮತ್ತು Realme 11 Pro Plus 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಈ ಸರಣಿಯ ಒಂದು ವಿಶೇಷತೆ ಅಂದ್ರೆ Realme 11 Pro+ ಸ್ಮಾರ್ಟ್ಫೋನ್ ನಿಮಗೆ 200MP ಕ್ಯಾಮೆರಾದ ಸೆನ್ಸರ್ ಅನ್ನು ಒಳಗೊಂಡಿರುವುದು.

Realme 11 Pro ಸರಣಿಯನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಟಾಪ್ 5 ವಿಶೇಷತೆಗಳನ್ನು ತಿಳಿದುಕೊಳ್ಳಿ

ಭಾರತದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಮಿಡ್ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್ಮಿ ಇಂದು ಭಾರತದಲ್ಲಿ ತನ್ನ ಹೊಚ್ಚ Realme 11 Pro 5G ಮತ್ತು Realme 11 Pro Plus 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಒಂದು ವಿಶೇಷತೆ ಅಂದ್ರೆ Realme 11 Pro ಸ್ಮಾರ್ಟ್ಫೋನ್ ನಿಮಗೆ 200MP ಕ್ಯಾಮೆರಾದ ಸೆನ್ಸರ್ ಅನ್ನು ಒಳಗೊಂಡಿರುವುದು. ಈ ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ ಜೊತೆಗೆ ಕರ್ವ್ ಡಿಸ್ಪ್ಲೇಯನ್ನು ಹೆಚ್ಚು ಆಕರ್ಷಕವಾಗಿ ಪ್ಯಾಕ್‌ ಮಾಡುತ್ತದೆ. ಈ ಸ್ಮಾರ್ಟ್ಫೋನ್ ಅನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಟಾಪ್ 5 ವಿಶೇಷತೆಗಳನ್ನು ತಿಳಿದುಕೊಳ್ಳಿ ಮತ್ತು ಯಾರಿಗೆ ಇದರ ಹೆಚ್ಚಿನ ಮಾಹಿತಿ ಅವಶ್ಯವೋ ಅವರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ.

   

Realme 11 Pro ಸರಣಿಯ ಡಿಸ್ಪ್ಲೇ ಮತ್ತು ಡಿಸೈನ್

Realme 11 Pro 5G ಮತ್ತು Realme 11 Pro 5G ಗಳು 120Hz ರಿಫ್ರೆಶ್ ರೇಟ್ ಜೊತೆಗೆ ಕರ್ವ್ 6.7 ಇಂಚಿನ FHD 10-ಬಿಟ್ ಸ್ಕ್ರೀನ್ ಅನ್ನು  ಹೊಂದಿವೆ ಸ್ಮಾರ್ಟ್‌ಫೋನ್‌ಗಳು ಪ್ರೀಮಿಯಂ ವೆಜಿಟೇರಿನ್ ಲೆದರ್ ಮತ್ತು 3D ವಿನ್ಯಾಸವನ್ನು ಹಿಂಭಾಗದಲ್ಲಿ ಹೊಂದಿವೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮಗೆ ಸರಣಿಯ ಸಾಮರ್ಟ್ಫೋನ್ ಶೀಘ್ರದಲ್ಲೇ ಸನ್‌ರೈಸ್ ಬೀಜ್, ಓಯಸಿಸ್ ಗ್ರೀನ್ ಮತ್ತು ಆಸ್ಟ್ರಲ್ ಬ್ಲ್ಯಾಕ್ ಎಂಬ ಮೂರು ವಿವಿಧ ಬಣ್ಣಗಳ ರೂಪಾಂತರಗಳಲ್ಲಿ ಬರುತ್ತದೆ.

Realme 11 Pro ಸರಣಿಯ ಪ್ರೊಸೆಸರ್ ಮತ್ತು ಸ್ಟೋರೇಜ್

ಈ ಹ್ಯಾಂಡ್‌ಸೆಟ್‌ಗಳು 6nm MediaTek ಡೈಮೆನ್ಸಿಟಿ 7050 ಚಿಪ್‌ನಿಂದ ಪವರ್ ಪಡೆಯುತ್ತವೆ. Mali G68 GPU ಇದು ಗೇಮಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೈಪರ್‌ಎಂಜಿನ್‌ನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ಗಳು ರಿಯಲ್‌ಮೆ UI 40 ಮೇಲೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತವೆ. ಈ Realme 11 Pro ಸರಣಿಯ ಸ್ಮಾರ್ಟ್ಫೋನ್ಗಳು 8GB/12 RAM ಜೊತೆಗೆ ಸುಮಾರು 128GB ಮತ್ತು 256GB ಸ್ಟೋರೇಜ್ ವೇರಿಯಂಟ್ ಅನ್ನು ಕಂಪನಿ ಬಿಡುಗಡೆಗೊಳಿಸಿದೆ.

Realme 11 Pro ಸರಣಿಯ ಬ್ಯಾಟರಿ

 ಎರಡೂ ಫೋನ್‌ಗಳು ವಿಭಿನ್ನ ಚಾರ್ಜಿಂಗ್ ವೇಗದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿವೆ, 11 ಪ್ರೊ 5G 67W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ ಆದರೆ ಮತ್ತೊಂದೆಡೆ Pro 5G ಟ್ರಿಪಲ್-ಅಂಕಿಯ 100W ಚಾರ್ಜಿಂಗ್‌ನೊಂದಿಗೆ ಬರುತ್ತದೆ.

Realme 11 Pro ಸರಣಿಯ ಕ್ಯಾಮೆರಾ ಸೆನ್ಸರ್

ಕೊನೆಯದಾಗಿ ಕ್ಯಾಮರಾ ವಿಭಾಗದಲ್ಲಿ Realme 11 Pro 5G ಫೋನ್ 100MP ಪ್ರೈಮರಿ ಲೆನ್ಸ್ ಒಳಗೆ OIS ಪ್ರೈಮರಿ ಲೆನ್ಸ್ ಅನ್ನು ಹೊಂದಿದೆ. ಇಇದರ ಕ್ರಮವಾಗಿ Realme 11 Pro Plus 5G ಮಾದರಿಯು 200MP ಪ್ರೈಮರಿಯಲ್ಲಿ Samsung ISOCELL HP3 OIS ಸೂಪರ್‌ಜೂಮ್ ಪ್ರೈಮರಿ ಸೆನ್ಸರ್ ಅನ್ನು ಹೊಂದಿದೆ. ಇದು ಮೂನ್ ಮೋಡ್ ಸೂಪರ್ ನೈಟ್‌ಸ್ಕೇಪ್ ಮೋಡ್ ಸ್ಟಾರಿ ಪ್ರೊ ಮೋಡ್ ಮತ್ತು ಹೆಚ್ಚಿನದನ್ನು ಹೊಂದಿದೆ. ಸೆಲ್ಫಿಗಳಿಗೆ ಸಂಬಂಧಿಸಿದಂತೆ Realme 11 Pro 5G ಅಲ್ಲಿ 16MP ನೀಡಿದರೆ Realme 11 Pro Plus 5G ಸ್ಮಾರ್ಟ್ಫೋನ್ 32MP ಲೆನ್ಸ್ ಅನ್ನು ಹೊಂದಿದೆ.

https://twitter.com/realmeIndia/status/1666710995350466566?ref_src=twsrc%5Etfw

Realme 11 Pro 5G ಸರಣಿಯ ಬೆಲೆ ಮತ್ತು ಆಫರ್ಗಳು

Realme 11 Pro 5G ಸ್ಮಾರ್ಟ್ಫೋನ್ 8GB 128GB | ₹23,999 ರೂಗಳು 
Realme 11 Pro 5G ಸ್ಮಾರ್ಟ್ಫೋನ್ 8GB  256GB | ₹24,999 ರೂಗಳು 
Realme 11 Pro 5G ಸ್ಮಾರ್ಟ್ಫೋನ್ 12GB 256GB | ₹27,999 ರೂಗಳು 

Realme 11 Pro+ 5G ಸ್ಮಾರ್ಟ್ಫೋನ್  8GB 256GB | ₹27,999 ರೂಗಳು 
Realme 11 Pro+ 5G ಸ್ಮಾರ್ಟ್ಫೋನ್ 12GB 256GB | ₹29,999 ರೂಗಳು 

Realme 11 Pro 5G ಸರಣಿಯ ಲಭ್ಯತೆ ಮತ್ತು ಮಾರಾಟ

ಈ ಹೊಚ್ಚ ಹೊಸ ಸ್ಮಾರ್ಟ್ಫೋನ್ ಅನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಇದರ ಮಾರಾಟದ ಸಮಯ ತಿಳಿಯುವುದು ಅತಿ ಮುಖ್ಯವಾಗಿದೆ. ಈ ಹ್ಯಾಂಡ್‌ಸೆಟ್‌ನ ಮೊದಲ ಮಾರಾಟವು ಜೂನ್ 15 ರಂದು ಆಫ್‌ಲೈನ್ ಸ್ಟೋರ್‌ಗಳಲ್ಲಿ ಮತ್ತು ಜೂನ್ 16 ರಂದು ಫ್ಲಿಪ್‌ಕಾರ್ಟ್ ಮತ್ತು ರಿಯಲ್ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಾರಂಭವಾಗುತ್ತದೆ. ಮತ್ತೊಂದೆಡೆ ಕಂಪನಿಯು ಆರಂಭಿಕ ಪ್ರವೇಶ ಮಾರಾಟವನ್ನು ಘೋಷಿಸಿತು. ಇಂದಿನಿಂದ ಮೊದಲ ವಿಶೇಷ ಸೇಲ್ ಅಂದ್ರೆ 8ನೇ ಜೂನ್ ಸಂಜೆ 6PM – 8PM ನಡುವೆ ನಡೆಯಲಿದ್ದು ನಾಳೆ ಅಂದರೆ 9ನೇ ಜೂನ್ 2023 ರಂದು ರಾತ್ರಿ 12:00 AM ನಿಂದ ಪ್ರೀ-ಆರ್ಡರ್ ಮಾಡಲು ಲಭ್ಯವಾಗಲಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :