POCO X7 Pro Iron Man Edition ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ವಿಶೇಷತೆಗಳೇನು?

POCO X7 Pro Iron Man Edition ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ವಿಶೇಷತೆಗಳೇನು?
HIGHLIGHTS

ಇಂದು POCO X7 Pro Iron Man Edition ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ.

ಪೊಕೋ (POCO) ಭಾರತದಲ್ಲಿ ತನ್ನ ಲೇಟೆಸ್ಟ್ POCO X7 Series ಸ್ಮಾರ್ಟ್ ಫೋನ್ಗಳನ್ನು ಬಿಡುಗಡೆಗೊಳಿಸಿದೆ.

ಹೆಚ್ಚುವರಿಯಾಗಿ ಕಸ್ಟಮ್ ಕೇಸ್, ವಿನ್ಯಾಸ, ಬಳಕೆದಾರ ಇಂಟರ್ಫೇಸ್, ಚಾರ್ಜಿಂಗ್ ಕೇಬಲ್ ಮತ್ತು ಸಿಮ್ ಎಜೆಕ್ಟರ್ ಟೂಲ್ ಹೊಂದಿದೆ.

ಚೀನಾದ ಸ್ಮಾರ್ಟ್ ಫೋನ್ ಬ್ರಾಂಡ್ ಪೊಕೋ (POCO) ಭಾರತದಲ್ಲಿ ತನ್ನ ಲೇಟೆಸ್ಟ್ POCO X7 Series ಅಡಿಯಲ್ಲಿ ಈಗಾಗಲೇ POCO X7 ಮತ್ತು POCO X7 Pro ಸ್ಮಾರ್ಟ್ ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಈಗ ಅದೇ ಸರಣಿಯಡಿಯಲ್ಲಿ ಕಂಪನಿ ಹೊಸ POCO X7 Pro Iron Man Edition ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ ಇದು POCO X7 Pro ಹೊಂದಿರುವಂತೆ ಎಲ್ಲ ಫೀಚರ್ಗಳನ್ನು ಸಮಾನವಾಗಿ ಹೊಂದಿದೆ. ಹೆಚ್ಚುವರಿಯಾಗಿ ಕಸ್ಟಮ್ ಕೇಸ್, ವಿನ್ಯಾಸ, ಬಳಕೆದಾರ ಇಂಟರ್ಫೇಸ್ (UI), ಚಾರ್ಜಿಂಗ್ ಕೇಬಲ್ ಮತ್ತು ಸಿಮ್ ಎಜೆಕ್ಟರ್ ಉಪಕರಣವನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನ ಹಿಂಭಾಗದ ಪ್ಯಾನಲ್ ಕೆಂಪು, ಕಪ್ಪು ಮತ್ತು ಚಿನ್ನದ ಅಂಶಗಳಿಂದ ಆರ್ಕ್ ರಿಯಾಕ್ಟರ್ ಅನ್ನು ರೂಪಿಸಿ ಬೆಲೆ ಏರಿಸಿದೆ.

POCO X7 Pro Iron Man Edition ಬೆಲೆ ಮತ್ತು ಲಭ್ಯತೆ

POCO X7 Pro Iron Man Edition ಸ್ಮಾರ್ಟ್ ಫೋನ್ ಕೇವಲ ಒಂದೇ ಒಂದು ರೂಪಾಂತದರಲ್ಲಿ ಲಭ್ಯವಾಗಲಿದ್ದು ಇದರ ಆರಂಭಿಕ 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು $399 (ಸುಮಾರು 34,000 ರೂಗಳಿಗೆ) ಪಟ್ಟಿ ಮಾಡಲಾಗಿದೆ. ಆದರೆ ಭಾರತದಲ್ಲಿ ಇನ್ನೂ ಇದರ ಅಧಿಕೃತ ಬೆಲೆಯನ್ನು ಘೋಷಿಸಿಲ್ಲ. ಅಲ್ಲದೆ ಈಗಾಗಲೇ ಮೇಲೆ ಹೇಳಿರುವಂತೆ ಈ ರೂಪಾಂತರದಲ್ಲಿ ಹೆಚ್ಚುವರಿಯಾಗಿ ಕಸ್ಟಮ್ ಕೇಸ್, ವಿನ್ಯಾಸ, ಬಳಕೆದಾರ ಇಂಟರ್ಫೇಸ್ (UI), ಚಾರ್ಜಿಂಗ್ ಕೇಬಲ್ ಮತ್ತು ಸಿಮ್ ಎಜೆಕ್ಟರ್ ಉಪಕರಣವನ್ನು ಹೊಂದಿದೆ.

POCO X7 Pro Iron Man Edition silently launched
POCO X7 Pro Iron Man Edition silently launched

POCO X7 Pro Iron Man Edition ಫೀಚರ್ ಮತ್ತು ವಿಶೇಷತೆಗಳೇನು?

ಈ POCO X7 Pro Iron Man Edition ಸ್ಮಾರ್ಟ್ ಫೋನ್ 6.67 CrystalRes AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 3200 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ ಅಂದರೆ ಹೊರಗಡೆ ಸೂರ್ಯನ ಬೆಳಕಿನಲ್ಲೂ POCO X7 Pro ಸ್ಮಾರ್ಟ್ ಫೋನ್ ಉತ್ತಮವಾಗಿ ಬಳಸಬಹುದೆಂದು ಅರ್ಥ. POCO X7 Pro Iron Man Edition ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ 50MP + 8MP ಸೆನ್ಸರ್ ಪ್ರೈಮರಿ Sony IMX 882 ಸೆನ್ಸರ್ ಹೊಂದಿದೆ ಮತ್ತು ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 20MP ಸೆನ್ಸರ್ ಹೊಂದಿದೆ.

Also Read: Online Scam: ಆನ್‌ಲೈನ್‌ನಲ್ಲಿ ಹಳೆ ನಾಣ್ಯಗಳನ್ನು ಮಾರಲು ಹೋಗಿ 58 ಲಕ್ಷ ಕಳೆದುಕೊಂಡ ಮಂಗಳೂರಿಗನ ಕಥೆ!

POCO X7 Pro Iron Man Edition ಸ್ಮಾರ್ಟ್ ಫೋನ್ ಸಹ ಅದೇ MediaTek Dimensity 8400-Ultra ಪ್ರೊಸೆಸರ್‌ನಿಂದ ಚಾಲಿತವಾಗಿರುವ ಮೊದಲ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಫೋನ್ 12GB ಯ LPDDR5X RAM ಮತ್ತು 512GB UFS 4.0 ಸ್ಟೋರೇಜ್ ಪೂರಕವಾಗಿದೆ. POCO X7 Pro Iron Man Edition ಸ್ಮಾರ್ಟ್ ಫೋನ್ ಬರೋಬ್ಬರಿ 6000mAh ಬ್ಯಾಟರಿಯೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo