POCO X7 Pro 5G First Day Sale: ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾಗಿರುವ ಪೊಕೊ (POCO) ತನ್ನ ಲೇಟೆಸ್ಟ್ POCO X7 Pro 5G ಸ್ಮಾರ್ಟ್ಫೋನ್ ಅನ್ನು ಇಂದಿನಿಂದ ಮೊದಲ ಮಾರಾಟಕ್ಕೆ ಬಿಡುಗಡೆಗೊಳಿಸಿದೆ. ವಿಶೇಷವೆಂದರೆ ಸ್ಮಾರ್ಟ್ಫೋನ್ ಮೊದಲ ಮಾರಾಟದಲ್ಲೇ 3000 ರೂಗಳ ಡಿಸ್ಕೌಂಟ್! ಆಫರ್ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ಪಡೆಯಬಹುದು. ಅಲ್ಲದೆ ಈ POCO X7 Pro 5G ಸ್ಮಾರ್ಟ್ ಫೋನ್ 6550mAh ಬ್ಯಾಟರಿ ಮತ್ತು 20MP ಸೆಲ್ಫಿ ಕ್ಯಾಮೆರಾದೊಂದಿಗೆ ಆಕರ್ಷಕ ಫೀಚರ್ಗಳನ್ನು ಬೆಲೆಗೆ ತಕ್ಕಂತೆ ಹೊಂದಿದೆ.
ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 2 ರೂಪಾಂತರಗಳಲ್ಲಿ ಬರಲಿದ್ದು ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನ ₹24,999 ರೂಗಳಿಗೆ ಬಿಡುಗಡೆಯಾಗಿದ್ದು ಇದರ ಕ್ರಮವಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನ ₹26,999 ರೂಗಳಿಗೆ ಬಿಡುಗಡೆಗೊಳಿಸಲಾಗಿದೆ.
ಆದರೆ ಬಿಡುಗಡೆಯ ಕೊಡುಗೆಯಾಗಿ ₹1000 ರೂಗಳ ಮೊದಲ ದಿನದ ಡಿಸ್ಕೌಂಟ್ ಉಚಿತವಾಗಿ ಕಡಿಮೆಗೊಳಿಸುವ ಕೂಪನ್ ನೀಡುತ್ತಿದೆ. ಅಲ್ಲದೆ ನೀವು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು ₹2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು. ಕೊನೆಯದಾಗಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಇದರೊಂದಿಗೆ ಬದಲಾಹಿಸಿ ಮತ್ತೆ ₹2000 ರೂಗಳ Exchange ಬೋನಸ್ ಪಡೆಯಬಹುದು.
ಈ POCO X7 Pro ಸ್ಮಾರ್ಟ್ ಫೋನ್ 6.73 flat AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 3200 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ ಅಂದರೆ ಹೊರಗಡೆ ಸೂರ್ಯನ ಬೆಳಕಿನಲ್ಲೂ POCO X7 Pro ಸ್ಮಾರ್ಟ್ ಫೋನ್ ಉತ್ತಮವಾಗಿ ಬಳಸಬಹುದೆಂದು ಅರ್ಥ. ಅಲ್ಲದೆ ಡಿಸ್ಪ್ಲೇ ಪ್ರೊಟೆಕ್ಷನ್‌ಗಾಗಿ Corning Gorilla Glass 7i ಅನ್ನು ಸಹ ನೀಡಲಾಗಿದೆ.
ಈ POCO X7 Pro ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾದೊಂದಿಗೆ 50MP Sony LYT-600 ಪ್ರೈಮರಿ OIS + EIS ಸೆನ್ಸರ್ ಹೊಂದಿದೆ. ಇದರ ಮತ್ತೊಂದು 8MP ಸೆನ್ಸರ್ ಹೊಂದಿದೆ. ಅಲ್ಲದೆ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 20MP ಸೆನ್ಸರ್ ಹೊಂದಿದೆ.
Also Read: Makar Sankranti Wishes in Kannada: 70+ ಅಧಿಕ ಮಕರ ಸಂಕ್ರಾಂತಿ ಹಬ್ಬದ ಮೆಸೇಜ್ ಮತ್ತು ಸ್ಟಿಕರ್ ಶುಭಾಶಯಗಳು!
POCO X7 Pro ಸ್ಮಾರ್ಟ್ ಫೋನ್ ಸಹ ಅದೇ MediaTek Dimensity 8400 Ultra ಪ್ರೊಸೆಸರ್‌ನಿಂದ ಚಾಲಿತವಾಗಿರುವ ಮೊದಲ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಫೋನ್ 12GB ಯ LPDDR5X RAM ಮತ್ತು 512GB UFS 4.0 ಸ್ಟೋರೇಜ್ ಪೂರಕವಾಗಿದೆ. ಫೋನ್ ಡಸ್ಟ್ ಮತ್ತು ವಾಟರ್ ಪ್ರೂಫ್‌ಗಾಗಿ IP66 + IP68 + IP69 ಸೆನ್ಸರ್ ಹೊಂದಿದೆ.
ಅಲ್ಲದೆ Dolby Atmos Dual Stereo ಸ್ಪೀಕರ್ ಹೊಂದಿದೆ. POCO X7 Pro ಸ್ಮಾರ್ಟ್ ಫೋನ್ ಬರೋಬ್ಬರಿ 6550mAh ಬ್ಯಾಟರಿಯೊಂದಿಗೆ 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಹೆಚ್ಚುವರಿಯಾಗಿ 3 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷ ಸೆಕ್ಯೂರಿಟಿ ಅಪ್ಡೇಟ್ ಹೊಂದಿದೆ.