ಭಾರತದಲ್ಲಿ POCO X6 Series ಲಾಂಚ್ ಡೇಟ್ ಫಿಕ್ಸ್! ಇಲ್ಲಿದೆ ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

Updated on 02-Jan-2024
HIGHLIGHTS

ಪೊಕೊ ಹೊಸ 2024 ವರ್ಷದಲ್ಲಿ ತಮ್ಮ ಮೊದಲ ಸ್ಮಾರ್ಟ್ಫೋನ್ POCO X6 Series ಮೂಲಕ ಬಿಡುಗಡೆಗೆ ಸಿದ್ದ

POCO X6 Series ಇದೇ 11ನೇ ಜನವರಿ 2024 ರಂದು ಬಿಡುಗಡೆಯಾಗಲು ಫ್ಲಿಪ್‌ಕಾರ್ಟ್‌ನಲ್ಲಿನ ಮೈಕ್ರೋಸೈಟ್ ಬ್ಯಾನರ್ ಅಧಿಕೃತವಾಗಿ ದೃಢಪಡಿಸಿದೆ.

ಭಾರತದಲ್ಲಿ ಮಾಧ್ಯಮ ಶೇಣಿಯಲ್ಲಿ ಅತ್ಯುತ್ತಮ ಫೀಚರ್ಗಳನ್ನು ನೀಡುವ ಪೊಕೊ (POCO) ಬ್ರಾಂಡ್ ಈಗ ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಬಗ್ಗೆ ಮಾಹಿತಿಯನ್ನು ನೀಡಿದೆ. ಪೊಕೊ ಹೊಸ 2024 ವರ್ಷದಲ್ಲಿ ಮೊದಲ ಸ್ಮಾರ್ಟ್ಫೋನ್ POCO X6 Series ಮೂಲಕ ಮಾರುಕಟ್ಟೆಗೆ ಕಾಲಿಡಲು ಸಿದ್ಧವಾಗಿದೆ. ಈಗಾಗಲೇ ಈ ಮಾದರಿಗಳ ಹಲವಾರು ಪ್ರಮುಖ ವಿಶೇಷಣಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಅಲ್ಲದೆ ಈಗ ಭಾರತದಲ್ಲಿ POCO X6 Series ಬಿಡುಗಡೆ ದಿನಾಂಕವನ್ನು ಇದೇ 11ನೇ ಜನವರಿ 2024 ರಂದು ಬಿಡುಗಡೆಯಾಗಲು ಫ್ಲಿಪ್‌ಕಾರ್ಟ್‌ನಲ್ಲಿನ ಮೈಕ್ರೋಸೈಟ್ ಬ್ಯಾನರ್ ಅಧಿಕೃತವಾಗಿ ದೃಢಪಡಿಸಿದ್ದು ಇದರ ಮಾರಾಟವನ್ನು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು.

Also Read: 2024 Plans: ಉಚಿತ Netflix ಜೊತೆಗೆ Unlimited ಕರೆ ಮತ್ತು ಡೇಟಾ ನೀಡುವ Jio ಮತ್ತು Airtel ಪ್ಲಾನ್‌ಗಳು

POCO X6 Series ಡಿಸ್ಪ್ಲೇ ಮತ್ತು ಕ್ಯಾಮೆರಾ

ಈ ಎರಡು ಸ್ಮಾರ್ಟ್‌ಫೋನ್‌ಗಳು 6.67 ಇಂಚಿನ AMOLED 1.5K LTPS ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿರುವ ನಿರೀಕ್ಷೆಗಳಿವೆ. POCO X6 ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿದ್ದು 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 13MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಶೂಟರ್ ಅನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತದೆ.

ಇದರ ಕ್ಯಾಮೆರಾ ಮಾಹಿತಿಯನ್ನು ನೋಡುವುದಾದರೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 64MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತೊಂದು ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಜೋಡಿಸಲಾದ 8MP-ಮೆಗಾಪಿಕ್ಸೆಲ್ ಸೆನ್ಸರ್ ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿರುವ ನಿರೀಕ್ಷೆಗಳಿವೆ.

POCO X6 Series ಹಾರ್ಡ್ವೇರ್

ಇತ್ತೀಚಿನ ವರದಿಗಳು ಮೂಲಗಳ ಪ್ರಕಾರ POCO X6 ಸ್ಮಾರ್ಟ್ಫೋನ್ LPDDR5 RAM ಮತ್ತು UFS 3.1 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಜೋಡಿಸಲಾದ Snapdragon 7s Gen 2 ಪ್ರೊಸೆಸರ್ನೊಂದಿಗೆ ಚಾಲಿತವಾಗಿರಬಹುದು ಎಂದು ಸೂಚಿಸುತ್ತದೆ. ಆದರೆ POCO X6 Pro ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾವನ್ನು ಪಡೆಯುವ ನಿರೀಕ್ಷೆಯಿದೆ.

ಪೊಕೊ X6 Series ಬ್ಯಾಟರಿ

ಈ ಎರಡು ಸ್ಮಾರ್ಟ್ಫೋನ್ಗಳು ಉನ್ನತ-ಮಟ್ಟದ ಮಾದರಿಯು 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡಲು ಸಲಹೆ ನೀಡಿದೆ. ಇತ್ತೀಚಿನ ಸೋರಿಕೆಯಲ್ಲಿ POCO X6 ಸರಣಿಯ ಹ್ಯಾಂಡ್‌ಸೆಟ್‌ಗಳ ವಿನ್ಯಾಸವನ್ನು ಹಂಚಿಕೊಳ್ಳುವುದು, ಮೂಲ ಮಾದರಿಯನ್ನು ಕಪ್ಪು, ಬೂದು ಮತ್ತು ಹಳದಿ ಬಣ್ಣಗಳಲ್ಲಿ ನೀಡುವ ಸಾಧ್ಯತೆಗಳಿವೆ. ಇದರ POCO X6 Pro ಮಾದರಿಯು ಕಪ್ಪು, ನೀಲಿ ಮತ್ತು ಬಿಳಿ ಛಾಯೆಗಳಲ್ಲಿ ಬರುವ ನಿರೀಕ್ಷೆಯಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :