64MP ಕ್ಯಾಮೆರಾ ಮತ್ತು HyperOS ಪ್ರೊಸೆಸರ್‌ನೊಂದಿಗೆ POCO X6 Pro 5G ಬಿಡುಗಡೆಗೆ ಡೇಟ್ ಫಿಕ್ಸ್ | Tech News

Updated on 08-Jan-2024
HIGHLIGHTS

ಮುಂಬರಲಿರುವ POCO X6 Pro 5G ಸ್ಮಾರ್ಟ್ಫೋನ್ HyperOS ಪ್ರೊಸೆಸರ್‌ನೊಂದಿಗೆ ಬರುವ ನಿರೀಕ್ಷೆ

5000mAh ಬ್ಯಾಟರಿ ಮತ್ತು 64MP ಪ್ರೈಮರಿ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ

POCO X6 Pro 5G ಸ್ಮಾರ್ಟ್ಫೋನ್ 11ನೇ ಜನವರಿ 2024 ರಂದು ಬಿಡುಗಡೆಯಾಗಲಿದೆ.

ಭಾರತದಲ್ಲಿ ಈ ವಾರ ಬಿಡುಗಡೆಯಾಗಲಿರುವ ಮತ್ತೊಂದು ಸ್ಮಾರ್ಟ್ಫೋನ್ ಅಂದ್ರೆ POCO X6 Pro 5G ಆಗಿದೆ. ಕಂಪನಿ ಈಗಾಗಲೇ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೆಲವೊಂದು ವಿಶೇಷಗಳನ್ನು ಈಗಾಗಲೇ ಬಿಡುಗಡೆಗೂ ಮುಂಚೆಯೇ ಅನಾವರಣಗೊಳಿಸಿದೆ. ಪೊಕೊ ಈಗಾಗಲೇ POCO X6 Pro 5G ಸ್ಮಾರ್ಟ್ಫೋನ್ ಬಿಡುಗಡೆಯ ದಿನಾಂಕವನ್ನು 11ನೇ ಜನವರಿ 2024 ರಂದು ಸಂಜೆ 5:30ಕ್ಕೆ ಗ್ಲೋಬಲ್ ಬಿಡುಗಡೆಯಾಗಲು ನಿಗದಿಪಡಿಸಿದೆ. ಈ ಸ್ಮಾರ್ಟ್ಫೋನ್ HyperOS ಪ್ರೊಸೆಸರ್‌ನೊಂದಿಗೆ ಬರುವ ಮೊದಲ ಪೊಕೊ ಫೋನ್ ಆಗಲಿದೆ. ಅಲ್ಲದೆ 64MP ಪ್ರೈಮರಿ ಕ್ಯಾಮೆರಾದೊಂದಿಗೆ ಟ್ರಿಪಲ್ ರೇರ್ ಸೆಟಪ್ ಅನ್ನು ಹೊಂದಿದೆ. ಈವರೆಗೆ ನಮಗೆ ತಿಳಿದಿರುವ ಒಂದಿಷ್ಟು ಮಾಹಿತಿಗಳು ನಿಮ್ಮ ಮುಂದೆ ನೀಡಿದ್ದೇವೆ.

Also Read: Amazon ರಿಪಬ್ಲಿಕ್ ಡೇ 2024 ಸೇಲ್‌ನಲ್ಲಿ ಲೇಟೆಸ್ಟ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಭಾರಿ ಡೀಲ್‌ಗಳ ನಿರೀಕ್ಷೆ

POCO X6 Pro 5G ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಪ್ರಸ್ತುತ ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ ಇದಕ್ಕೂ ಮುಂಚೆ ಬಿಡುಗಡೆಯಾಗಿರುವ POCO X5 Pro 5G ಸ್ಮಾರ್ಟ್ಫೋನ್ ಹೋಲಿಕೆಯಲ್ಲಿ ಫೋನ್ ಒಟ್ಟಾರೆಯಾಗಿ ಮೂರು ವೇರಿಯೆಂಟ್‌ಗಳಲ್ಲಿ ಬರುವ ನಿರೀಕ್ಷೆಗಳಿವೆ. ಅವೆಂದರೆ 6GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 128 ಸ್ಟೋರೇಜ್ ಕೊನೆಯದಾಗಿ 8GB RAM ಮತ್ತು 256GB ಸ್ಟೋರೇಜ್ ಅನ್ನು ನಿರೀಕ್ಷಿಸಬಹುದು. ಇದರ ಬೆಲೆಯನ್ನು ಸುಮಾರು ಸಹ 20,000 ರಿಂದ 25,000 ರೂಗಳೊಳಗೆ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗುವುದಾಗಿ ನಿರೀಕ್ಷಿಸಬಹುದು.

ಪೊಕೊ X6 Pro 5G ನಿರೀಕ್ಷಿತ ಫೀಚರ್ ವಿಶೇಷಣಗಳು

ಈ ಮುಂಬರಲಿರುವ POCO X6 Pro 5G ಮಾಹಿತಿ ಇಷ್ಟವಾದರೆ ತಿಳಿಯದವರರೊಂದಿಗೆ ಶೇರ್ ಮಾಡಿಕೊಳ್ಳಿ. Poco X6 Pro ಸ್ಮಾರ್ಟ್ಫೋನ್ 6.67 ಇಂಚಿನ 1.5K LTPS ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್‌ನೊಂದಿಗೆ ನಿರೀಕ್ಷಿಸಬಹುದು. ಫೋನ್ LPDDR5 RAM ಮತ್ತು UFS 3.1 ಸ್ಟೋರೇಜ್ ಜೊತೆಗೆ MediaTek Dimensity 8300 Ultra ಪ್ರೊಸೆಸರ್‌ನೊಂದಿಗೆ ಮೂಲಕ ಚಾಲಿತವಾಗಿರಬಹುದು ಎಂದು ಪಟ್ಟಿಯು ಸೂಚಿಸಿದೆ. ಆದರೆ ಇದರ ಬಗ್ಗೆ ಕಂಪನಿ ಟ್ವಿಟ್ಟರ್ ಖಾತೆಯಲ್ಲೂ ಈಗಾಗಲೇ ಚಿಪ್ ಅನ್ನು ಅಪ್ಡೇಟ್ ಮಾಡಿದೆ.

ಕ್ಯಾಮೆರಾದ ವಿಷಯದಲ್ಲಿ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 64MP ಪ್ರೈಮರಿ ಸೆನ್ಸರ್ 13MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್‌ಗೆ ಬೆಂಬಲದೊಂದಿಗೆ 2MP ಸೆಕೆಂಡರಿ ಹೊಂದಿರಬಹುದು. ಈ ಮಧ್ಯಮ ಶ್ರೇಣಿಯ ಪೊಕೊ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಮತ್ತು 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿರುವ ನಿರೀಕ್ಷೆಗಳಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :