POCO X6 Series: ಜನಪ್ರಿಯ ಮತ್ತು ಉತ್ತಮ ಕಾರ್ಯಕ್ಷಮತೆ ನೀಡುವ ಸ್ಮಾರ್ಟ್ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಪೊಕೊ (POCO) ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ POCO X6 Series 5G ಅನ್ನು ಭಾರತದಲ್ಲಿ ನೆನ್ನೆ ಅಂದ್ರೆ 11ನೇ ಜನವರಿ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಸ್ಮಾರ್ಟ್ಫೋನ್ ಈಗಾಗಲೇ ಭಾರಿ ಸದ್ದು ಮಾಡುತ್ತಿದ್ದು ಈ ಸರಣಿಯಲ್ಲಿ POCO X6 5G ಮತ್ತು POCO X6 Pro 5G ಲಭ್ಯವಿದೆ. ನೀವು ಈ 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಉತ್ತಮ ಕ್ಯಾಮೆರಾ, ಡಿಸ್ಪ್ಲೇ ಮತ್ತು ಪ್ರೊಸೆಸರ್ ಹೊಂದಿರುವ ಹೈಎಂಡ್ ವೇರಿಯೆಂಟ್ POCO X6 Pro 5G ಬಗ್ಗೆ ಮಾತ್ರ ಒಂದಿಷ್ಟು ಮಾಹಿತಿಗಳನ್ನು ನಿಮಗಾಗಿ ನೀಡಿದ್ದೇನೆ.
Also Read: 84 ದಿನಗಳಿಗೆ Unlimited ಕರೆ ಮತ್ತು 5G ಡೇಟಾದೊಂದಿಗೆ ಉಚಿತ Netflix ನೀಡುವ Airtel ಬೆಸ್ಟ್ ಪ್ಲಾನ್!
ಸ್ಮಾರ್ಟ್ಫೋನ್ ಅತ್ಯುತ್ತಮ 120Hz ಸ್ಕ್ರೀನ್‌ಗಳಲ್ಲಿ ಒಂದನ್ನು ಹೊಂದಿದ್ದು 6.67 ಇಂಚಿನ 1.5K ರೆಸಲ್ಯೂಶನ್ ಡಿಸ್ಪ್ಲೇಯನ್ನು 1220 x 2712 ರೆಸಲ್ಯೂಷನ್ ಹೊಂದಿದೆ. ಸ್ಮಾರ್ಟ್ಫೋನ್ ಈ ಬೆಲೆಯಲ್ಲಿ Dolby Vision ಬೆಂಬಲದೊಂದಿಗೆ HDR10+ ಅನ್ನು ಯುಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊ ಪ್ಲೇಬ್ಯಾಕ್ ಅನ್ನು ಸಹ ಬೆಂಬಲಿಸುತ್ತದೆ. POCO X6 Pro 5G ಸ್ಮಾರ್ಟ್ಫೋನ್ HDR ಗರಿಷ್ಠ ಬ್ರೈಟ್‌ನೆಸ್ 1800 ನಿಟ್ಸ್ ಹೊಂದಿದೆ. ವೀಕ್ಷಣೆಯಲ್ಲಿ ಹೆಚ್ಚು ಕ್ಲಿಯರ್ ಮತ್ತು ಶಾರ್ಪ್ ಮತ್ತಷ್ಟು ಉತ್ತಮಗೊಳಿಸಲು 446 ಪಿಪಿಐ ಡೆನ್ಸಿಟಿಯನ್ನು ಬೆಂಬಲಿಸಲಿದೆ. ಪೊಕೊ ಸ್ಮಾರ್ಟ್‌ಫೋನ್‌ನಲ್ಲಿ ಅತಿ ಹೆಚ್ಚು ಬ್ರೈಟ್‌ನೆಸ್ ಹೊಂದಿರುವ ಫೋನ್ಗಳಲ್ಲಿ ಇದು ಮೊದಲನೇಯದಾಗಿದೆ.
ಈ ಸ್ಮಾರ್ಟ್ಫೋನ್ ಬ್ಯಾಕ್ ಪ್ಯಾನಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 64MP ಪ್ರೈಮರಿ ಶೂಟರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ f/1.7 ಅಪರ್ಚರ್ ವೈಡ್ ಸೆನ್ಸರ್ ಆಗಿದೆ. ಇದರ ಕ್ರಮವಾಗಿ ಎರಡನೇಯದು 8MP ಕ್ಯಾಮೆರಾ f/2.2 ಅಪರ್ಚರ್ನೊಂದಿಗೆ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿದ್ದು ಕೊನೆಯದಾಗಿ 2MP ಮ್ಯಾಕ್ರೋ ಲೆನ್ಸ್ f/2.4 ಅಪರ್ಚರ್ನೊಂದಿಗೆ ಬರುತ್ತದೆ. ಈ POCO X6 Pro 5G ಲೆನ್ಸ್ಗಳ ಬೆಸ್ಟ್ ಫೀಚರ್ ಅಂದ್ರೆ LED flash, HDR, Portrait ಮತ್ತು Panorama ಹೊಂದಿದೆ. ಇದರ ಡಿಸ್ಪ್ಲೇಯಲ್ಲಿ ನಿಮಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಸೆನ್ ಸೆನ್ಸರ್ ಅನ್ನು ನೀಡಲಾಗಿದೆ.
ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ HyperOS ಆಧರಿಸಿ ಚಾಲನೆಯಲ್ಲಿದೆ. ಸ್ಮಾರ್ಟ್ಫೋನ್ Mediatek Dimensity 8300 Ultra ಪ್ರೊಸೆಸರ್ನೊಂದಿಗೆ 3.35GHz ಓಕ್ಟಾ ಕೋರ್ CPU ಅನ್ನು ಸಪೋರ್ಟ್‌ನೊಂದಿಗೆ 12GB LPDDR5x RAM ಮತ್ತು 512GB UFS 4.0 ಸ್ಟೋರೇಜ್ ಹೊಂದಿರುವುದರಿಂದ ನಿಮ್ಮ ದಿನನಿತ್ಯದ ಬಳಕೆ ನಿಜಕ್ಕೂ ಉತ್ತಮವಾಗಲಿದೆ. ಈ ಲೇಟೆಸ್ಟ್ POCO X6 Pro 5G ಸ್ಮಾರ್ಟ್ಫೋನ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ನೊಂದಿಗೆ ಫಾಸ್ಟ್ ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ನೀಡುವುದಾಗಿ ಭರವಸೆ ನೀಡುತ್ತದೆ. ಏಕೆಂದರೆ ಇದರಲ್ಲಿ ನಿಮಗೆ ಅನಿಮೇಷನ್‌ಗಳು ಗಮನಾರ್ಹವಾಗಿ ತ್ವರಿತವಾಗಿದ್ದು ಯಾವುದೇ ಅಡೆತಡೆಗಳಿಲ್ಲದೆ ಬಳಕೆದಾರರಿಗೆ ಉತ್ತಮ ಅನುಭವವನ್ನು ಒದಗಿಸಲು ಉತ್ತೇಜಿಸುತ್ತದೆಂದು ಕಂಪನಿ ಹೇಳಿದೆ.
ಪೊಕೊದ ಈ ಲೇಟೆಸ್ಟ್ ಸ್ಮಾರ್ಟ್ಫೋನ್ 67W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಸ್ಮಾರ್ಟ್ಫೋನ್ ಫಾಸ್ಟ್ ಚಾರ್ಜರ್ ಅನ್ನು ಬಾಕ್ಸ್‌ನಲ್ಲಿ ಸೇರಿಸಲಾಗಿದ್ದು ಇದು ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. POCO X6 Pro 5G ಸ್ಮಾರ್ಟ್ಫೋನ್ ಎರಡು ಸ್ಲಾಟ್‌ಗಳಲ್ಲಿ 5G ನೆಟ್‌ವರ್ಕ್‌ಗೆ ಬೆಂಬಲದೊಂದಿಗೆ ಡ್ಯುಯಲ್ ನ್ಯಾನೊ-ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಹೊಂದಿದೆ. ಫೋನ್ 5G ಆಧಾರಿತ ಕರೆ ತಂತ್ರಜ್ಞಾನವಾದ VoNR ಅನ್ನು ಸಹ ಬೆಂಬಲಿಸುತ್ತದೆ. ಪೋಪಿನ ಟೈಪ್ ಸಿ ಪೋರ್ಟ್ ಜೊತೆಗೆ 3.5mm ಆಡಿಯೋ ಜಾಕ್ ಅನ್ನು ಸಹ ಹೊಂದಿದೆ.
ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ POCO X6 Pro 5G ಸ್ಮಾರ್ಟ್‌ಫೋನ್‌ನ ಒಟ್ಟಾರೆಯಾಗಿ ಎರಡು ವೇರಿಯೆಂಟ್ಗಳಲ್ಲಿ ಲಭ್ಯವಾಗಲಿದ್ದು ಮೊದಲನೇಯದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂಗಳಾದರೆ ಇದರ 12GB RAM ಮತ್ತು 512GB ಸ್ಟೋರೇಜ್ ರೂಪಾಂತರದ ಬೆಲೆ 26,999 ರೂಗಳಾಗಿವೆ. ಸ್ಮಾರ್ಟ್ಫೋನ್ ಫೋನ್ ಬ್ಲಾಕ್, ಗ್ರೇಯ್ ಮತ್ತು ಯೆಲ್ಲೋ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ಫೋನ್‌ನ ಮಾರಾಟವು ಫ್ಲಿಪ್‌ಕಾರ್ಟ್‌ನಲ್ಲಿ ನೀಡಲಾಗಿದ್ದು 16ನೇ ಜನವರಿ 2024 ರಿಂದ ಇದರ ಮೊದಲ ಸೇಲ್ ಪ್ರಾರಂಭವಾಗಲಿದೆ. ನೀವು ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಫೋನ್‌ನಲ್ಲಿ ರೂ 2000 ವರೆಗೆ ರಿಯಾಯಿತಿ ಪಡೆಯಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ