Attractive ಲುಕ್‌ನೊಂದಿಗೆ POCO X6 Neo ಬಿಡುಗಡೆಗೆ 2 ದಿನ ಬಾಕಿ! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

Updated on 11-Mar-2024
HIGHLIGHTS

ಪೊಕೋ (POCO) ಈಗಾಗಲೇ ಇದರ ಒಂದಿಷ್ಟು ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆ ಮತ್ತು Flipkart ಮೂಲಕ ನೀಡಿದೆ.

ಕಂಪನಿ ಈ POCO X6 Neo ಸ್ಮಾರ್ಟ್ಫೋನ್ ಬಿಡುಗಡೆಯನ್ನು 13ನೇ ಮಾರ್ಚ್ 2024 ರಂದು ಹಮ್ಮಿಕೊಂಡಿದೆ.

POCO X6 Neo ಫೋನ್ ಬೆಝೆಲ್ ಲೆಸ್ ವಿನ್ಯಾಸದೊಂದಿಗೆ ಬರುವುದಾಗಿ ಡಿಸ್ಪ್ಲೇ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.

ಭಾರತದಲ್ಲಿ ಪೊಕೋ (POCO) ತನ್ನ ಮುಂಬರಲಿರುವ ಸ್ಮಾರ್ಟ್ಫೋನ್ ಬಗ್ಗೆ ಭಾರಿ ಸದ್ದು ಮಾಡಿಸುತ್ತಿದೆ. ಯಾಕೆಂದರೆ ಕಂಪನಿ ಈಗಾಗಲೇ ಇದರ ಒಂದಿಷ್ಟು ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆ ಮತ್ತು Flipkart ಮೂಲಕ ನೀಡಿದೆ. ಇದರೊಂದಿಗೆ ಕಂಪನಿ ಈ POCO X6 Neo ಸ್ಮಾರ್ಟ್ಫೋನ್ ಬಿಡುಗಡೆಯನ್ನು 13ನೇ ಮಾರ್ಚ್ 2024 ರಂದು ಹಮ್ಮಿಕೊಂಡಿದೆ. ಅಲ್ಲದೆ POCO X6 Neo ಸ್ಮಾರ್ಟ್ಫೋನ್ ಪ್ರಮುಖವಾಗಿ ಎರಡು ಬಣ್ಣಗಳಲ್ಲಿ ಬರುವುದಾಗಿ ಫ್ಲಿಪ್ಕಾರ್ಟ್ ಲ್ಯಾಂಡಿಂಗ್ ಪುಟ ತೋರಿಸಿದೆ. ಅಲ್ಲದೆ ಸ್ಮಾರ್ಟ್ಫೋನ್ 93.3% ಸ್ಕ್ರೀನ್ ಟು ಬಾಡಿ ರೇಷುವಿನೊಂದಿಗೆ ಬೆಝೆಲ್ ಲೆಸ್ ವಿನ್ಯಾಸದೊಂದಿಗೆ ಬರುವುದಾಗಿ ಕಂಪನಿ ಡಿಸ್ಪ್ಲೇ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. POCO X6 Neo ಮತ್ತಷ್ಟು ನಿರೀಕ್ಷಿತ ಫೀಚರ್ ಮತ್ತು ಬೆಲೆಗಳನ್ನು ಈ ಕೆಳಗೆ ತಿಳಿಯಿರಿ.

Also Read: Phone Hack: ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಿದ್ರೆ ಈ 3 ಸೀಕ್ರೇಟ್ ಕೋಡ್‌ಗಳಿಂದ ಈಗಲೇ ಪರಿಶೀಲಿಸಿಕೊಳ್ಳಿ!

Poco X6 Neo ಭಾರತದಲ್ಲಿ ನಿರೀಕ್ಷಿತ ಫೀಚರ್ಗಳು

Flipkart ನಲ್ಲಿ ಫೋನ್‌ನ ಲ್ಯಾಂಡಿಂಗ್ ಪುಟದ ಪ್ರಕಾರ POCO X6 Neo ಸೆಲ್ಫಿ ಕ್ಯಾಮೆರಾ ಮತ್ತು ಫೋನ್ ಡಿಸ್ಪ್ಲೇ ಮಧ್ಯದಲ್ಲಿ ಪಂಚ್-ಹೋಲ್ ಕಟೌಟ್ ಇರುತ್ತದೆ. ಇದಲ್ಲದೆ ಫೋನ್ ತುಂಬಾ ತೆಳುವಾದ ಬೆಜೆಲ್‌ಗಳನ್ನು ಮತ್ತು 93.3% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿರುತ್ತದೆ. POCO X6 Neo ಸಮತಟ್ಟಾದ ಅಂಚುಗಳನ್ನು ಹೊಂದಿದೆ ಮತ್ತು ಕೇವಲ 7.69 mm ದಪ್ಪವನ್ನು ಹೊಂದಿದೆ. ಫೋಟೋಗ್ರಾಫಿಗಾಗಿ ಫೋನ್ ಹಿಂಭಾಗದಲ್ಲಿ 108MP ಪ್ರೈಮರಿ ಸೆನ್ಸರ್ ಜೊತೆಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವುದಾಗಿ ನಿರೀಕ್ಷಿಸಲಾಗಿದೆ.

POCO X6 Neo all set to launch in India 2024

Poco ಇಂಡಿಯಾ ಇತ್ತೀಚೆಗೆ ಟ್ವಿಟ್ಟರ್ನಲ್ಲಿ ವೀಡಿಯೊ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀಲಿ ಬಣ್ಣವನ್ನು ಹೊರತುಪಡಿಸಿ ಇದನ್ನು ಬೀಜ್ ಬಣ್ಣದ ಆಯ್ಕೆಯಲ್ಲಿಯೂ ಕಾಣಬಹುದು. Poco X6 Neo ಸ್ಮಾರ್ಟ್ಫೋನ್ ಈಗಾಗಲೇ Redmi Note 13 Pro 5G ಫೋನ್ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ವರದಿಗಳು ಹೇಳುತ್ತವೆ. ಇದು ಚೀನಾದ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ. ಆದ್ದರಿಂದ 5000mAh ಬ್ಯಾಟರಿಯೊಂದಿಗೆ Android 13 ಆಧಾರಿತ MIUI 14 ಮತ್ತು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪ್ಯಾಕ್ ಮಾಡಬಹುದು.

ಪೊಕೋ X6 Neo ಭಾರತದಲ್ಲಿ ನಿರೀಕ್ಷಿತ ಬೆಲೆ

ಈ ಮುಂಬರಲಿರುವ Poco X6 Neo ಸ್ಮಾರ್ಟ್ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹಲವಾರು 5G ಸ್ಮಾರ್ಟ್‌ಫೋನ್‌ಗಳ ಪ್ರತಿಸ್ಪರ್ದಿಯಾಗಿ ನಿಲ್ಲಲು ಸಿದ್ಧವಾಗಲಿದೆ. ಏಕೆಂದರೆ ಫೋನ್ ಎರಡು 6GB RAM ಮತ್ತು 128GB ಸ್ಟೋರೇಜ್ ರೂಪಾಂತರ 16,999 ರೂಗಳಿಗೆ ಮತ್ತೊಂದು 6GB RAM ಮತ್ತು 256GB ಸ್ಟೋರೇಜ್ ರೂಪಾಂತರ 18,999 ರೂಗಳಿಗೆ 13ನೇ ಮಾರ್ಚ್ 2024 ರಂದು ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :