ಭಾರತದಲ್ಲಿ ಬಿಡುಗಡೆಯಾಗಿರುವ ಪೊಕೊ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ POCO X2 ಅನ್ನು ಪ್ರತ್ಯೇಕ ಬ್ರಾಂಡ್ ಆಗಿ ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್ ಅನ್ನು ಮಧ್ಯ ಶ್ರೇಣಿಯ ವಿಭಾಗದಲ್ಲಿ ಪರಿಚಯಿಸಿದೆ. ಇದು ಕೇವಲ 15,999 ರೂಗಳ ಆರಂಭಿಕ ಬೆಲೆಯೊಂದಿಗೆ ಬರುವ ಈ ಫೋನ್ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಇದರ ನೇರ ಸ್ಪರ್ಧೆ realme X2 ಫೋನೊಂದಿಗೆ ಬರುತ್ತದೆ. ಇದು realme X2 ಪ್ರೀಮಿಯಂ ಸ್ಮಾರ್ಟ್ಫೋನ್ ಆಗಿದ್ದು ಅದು POCO X2 ನಂತೆ 64MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಬರುತ್ತದೆ. ಇವೇರಡೂ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ವೈಶಿಷ್ಟ್ಯ ಮತ್ತು ವಿಶೇಷಣಗಳನ್ನು ಹೊಂದಿವೆ. ಇವುಗಳಲ್ಲಿ ಯಾವುದು ನಿಮಗೆ ಉತ್ತಮ ಉತ್ಪನ್ನವೆಂದು ಕಾಮೆಂಟ್ ಮಾಡಿ ತಿಳಿಸಬಹುದು.
ಮೊದಲಿಗೆ POCO X2 ಸ್ಮಾರ್ಟ್ಫೋನ್ 6.67 ಇಂಚಿನ FHD+ ಡಿಸ್ಪ್ಲೇಯನ್ನು HDR 10 ಜೊತೆಗೆ 20: 9 ರ ಅನುಪಾತದೊಂದಿಗೆ ಹೊಂದಿದೆ. ಅದೇ ಸಮಯದಲ್ಲಿ realme X2 ಫೋನಿನ ಡಿಸ್ಪ್ಲೇಯಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ನೊಂದಿಗೆ 6.4 ಇಂಚಿನ FHD+ ಅಮೋಲೆಡ್ ಡಿಸ್ಪ್ಲೇ ಮತ್ತು 19.5: 9 ರ ಅನುಪಾತವನ್ನು ಹೊಂದಿದೆ. POCO X2 ಫೋನಿನ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಜೊತೆಗೆ ಬರುತ್ತದೆ.
ಮೊದಲಿಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730G SoC ಪ್ರೊಸೆಸರ್ ಅನ್ನು POCO X2 ನಲ್ಲಿ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಅಲ್ಲದೆ ಇದು ಆಂಡ್ರಾಯ್ಡ್ 10.0 ಜೊತೆಗೆ MIUI 11 ರನ್ ಮಾಡುತ್ತದೆ. ಅದೇ ಸಮಯದಲ್ಲಿ realme X2 ಸಹ ಇದೇ ಮಾದರಿಯಲ್ಲಿ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಅಲ್ಲದೆ ಇದು ಆಂಡ್ರಾಯ್ಡ್ 9.0 ಪೈ ಜೊತೆಗೆ ColorOS 6 ರನ್ ಮಾಡುತ್ತದೆ ಈ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 730G ಪ್ರೊಸೆಸರ್ ನೀಡಲಾಗಿದೆ.
ಮೊದಲಿಗೆ POCO X2 ಫೋನಲ್ಲಿ ಫೋಟೋಗ್ರಾಫಿಗಾಗಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 64MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಹೊಂದಿದೆ. realme X2 ಫೋನಲ್ಲಿ ಇದೇ ಮಾದರಿಯಲ್ಲಿ 64MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಹೊಂದಿದೆ. ಸೆಲ್ಫಿಗಾಗಿ realme X2 ಫ್ರಂಟ್ 32MP ಮೆಗಾಪಿಕ್ಸೆಲ್ಗಳನ್ನು ಹೊಂದಿದ್ದರೆ POCO X2 ಫೋನ್ 20MP + 2MP ಮೆಗಾಪಿಕ್ಸೆಲ್ಗಳ ಡುಯಲ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿಯ ಬಗ್ಗೆ ಮಾತನಾಡಬೇಕೆಂದರೆ POCO X2 ಸ್ಮಾರ್ಟ್ಫೋನ್ 4500mAh ಬ್ಯಾಟರಿಯನ್ನು 27w ವ್ಯಾಟ್‌ಗಳ ಫಾಸ್ಟ್ ಚಾರ್ಜರ್ ಚಾರ್ಜಿಂಗ್‌ನೊಂದಿಗೆ ಪಡೆಯುತ್ತದೆ. ಇದು 62 ನಿಮಿಷಗಳಲ್ಲಿ ಫೋನ್ ಅನ್ನು 100% ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ಸಮಯದಲ್ಲಿ realme X2 ಸ್ಮಾರ್ಟ್ಫೋನ್ 4000mAh ಬ್ಯಾಟರಿಯನ್ನು ಒದಗಿಸಲಾಗಿದೆ ಇದು 30w ವ್ಯಾಟ್ VOOC 4.0 ಫ್ಲ್ಯಾಷ್ ಚಾರ್ಜ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು 50 ನಿಮಿಷಗಳಲ್ಲಿ ಫೋನ್ ಅನ್ನು 100% ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇವೇರಡು ಫೋನ್ಗಳ ಬೆಲೆಯ ಬಗ್ಗೆ ಮಾತನಾಡಬೇಕೆಂದರೆ ಮೊದಲಿಗೆ POCO X2 ಅನ್ನು ಭಾರತದಲ್ಲಿ 6GB RAM ಮತ್ತು 64GB ಸ್ಟೋರೇಜ್ 15,999 ರೂಗಳಲ್ಲಿ ಆರಂಭಿಕ ಬೆಲೆಯೊಂದಿಗೆ ಪರಿಚಯಿಸಲಾಗಿದೆ. ಇದರ ಟಾಪ್-ಎಂಡ್ ವೇರಿಯಂಟ್ 8GB + 256GB ಬೆಲೆ 19,999 ರೂಗಳಾಗಿವೆ. ಅದೇ ಸಮಯದಲ್ಲಿ realme X2 ಬೇಸ್ ವೆರಿಯಂಟ್ 4GB + 64GB ಬೆಲೆ 16,999 ರೂಗಳಿಗೆ ಬರುತ್ತದೆ ಮತ್ತು ಹೈ-ಎಂಡ್ ರೂಪಾಂತರ 8GB + 128GB ಬೆಲೆ 19,999 ರೂಗಳಿಗೆ ಬರುತ್ತದೆ. ಇಲ್ಲಿ ನೇರವಾಗಿ POCO X2 ಉತ್ತಮ ಬೆಲೆಯಲ್ಲಿ ಹೆಚ್ಚಿನ RAM ನೀಡುತ್ತಿದೆ.