POCO M7 Pro 5G ಸ್ಮಾರ್ಟ್ಫೋನ್ Ai Camera ಸೆನ್ಸರ್‌ನೊಂದಿಗೆ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

POCO M7 Pro 5G ಸ್ಮಾರ್ಟ್ಫೋನ್ Ai Camera ಸೆನ್ಸರ್‌ನೊಂದಿಗೆ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?
HIGHLIGHTS

ಭಾರತದಲ್ಲಿ POCO M7 Pro 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ.

POCO M7 Pro 5G ಸ್ಮಾರ್ಟ್ಫೋನ್ ಕೇವಲ 10,000 ರೂಗಳೊಳಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ಪರಿಚಯಿಸಿದೆ.

POCO M7 Pro 5G ಸ್ಮಾರ್ಟ್ಫೋನ್ 50MP Ai Camera ಕ್ಯಾಮೆರಾದೊಂದಿಗೆ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.

POCO M7 Pro 5G launched in India: ಭಾರತದಲ್ಲಿ POCO M7 Pro 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ಸ್ಮಾರ್ಟ್ಫೋನ್ ಇಂದು 17ನೇ ಡಿಸೆಂಬರ್ 2024 ರಂದು ಸಂಜೆ 5:00 ಗಂಟೆಗೆ ಪೊಕೋ ಇಂಡಿಯನ್ CEO ಆಗಿರುವ ಹಿಮಾಂಶು ಟಂಡನ್ (Himanshu Tandon) ಅಧಿಕೃತವಾಗಿ ಬಿಡುಗಡೆಗೊಳಿಸಿದ್ದಾರೆ. ಈ POCO M7 Pro 5G ಸ್ಮಾರ್ಟ್ಫೋನ್ ಕೇವಲ 13,999 ರೂಗಳೊಳಗೆ ಪರಿಚಯಿಸಿದ್ದು ಲೇಟೆಸ್ಟ್ ಫೀಚರ್ಗಳೊಂದಿಗೆ ಅನಾವರಣಗೊಳಿಸಿದೆ.

POCO M7 Pro 5G ವಿಶೇಷತೆಗಳನ್ನು ನೋಡುವುದಾದರೆ ಕಂಪನಿ ಇದರಲ್ಲಿ ನಿಮಗೆ 50MP ಕ್ಯಾಮೆರಾದೊಂದಿಗೆ Sony LYT-600 ಸೆನ್ಸರ್ ಮತ್ತು 20MP ಸೇಲ್ಫಿ ಕ್ಯಾಮೆರಾ ಮತ್ತು AMOLED ಡಿಸ್ಪ್ಲೇ ಅದ್ದೂರಿಯ ಬ್ರೈಟ್‌ನೆಸ್‌ ಜೊತೆಗೆ ಬರುತ್ತದೆ. ಇದರ ಬೆಲೆ ಮತ್ತು ಟಾಪ್ ಹೈಲೈಟ್ ಫೀಚರ್ಗಳೊಂದಿಗೆ ಎಲ್ಲವನ್ನು ಈ ಕೆಳಗೆ ಪಡೆಯಬಹುದು.

Also Read: 43 ಇಂಚಿನ ಲೇಟೆಸ್ಟ್ ಗೂಗಲ್ Smart TV ಕೈಗೆಟಗುವ ಬೆಲೆಗೆ ಅದ್ದೂರಿಯಾಗಿ ಮಾರಾಟ! ಯಾರಿಗುಂಟು ಯಾರಿಲ್ಲ ಈ ಆಫರ್!

POCO M7 Pro 5G ಸ್ಮಾರ್ಟ್ಫೋನ್ ಲಾಂಚ್ ಬೆಲೆ ಮತ್ತು ಆಫರ್ಗಳೇನು?

ನಿಮಗೆ ಈ POCO M7 Pro 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮೊದಲನೆಯದು 6GB RAM ಮತ್ತು 128GB ಸ್ಟೋರೇಜ್ ಇದನ್ನು ನೀವು ಕೇವಲ ₹13,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಇದನ್ನು ನೀವು ಕೇವಲ ₹15,999 ರೂಗಳಿಗೆ ಬಿಡುಗಡೆಯಾಗಿದೆ ಖರೀದಿಸಬಹುದು.

Poco M7 Pro 5G launched with stylish design and sony 50mp camera
Poco M7 Pro 5G launched with stylish design and sony 50mp camera

ಆದರೆ ನೀವು IHDFC, SBI ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು 1000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಇದರ ಮಾರಾಟವು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮತ್ತು ಇತರ ಮಾಧ್ಯಮದ ಮೂಲಕ 20ನೇ ಡಿಸೆಂಬರ್ 2024 ರಂದು ಪಾಲುದಾರರಲ್ಲಿ ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ.

ಭಾರತದಲ್ಲಿ POCO M7 Pro 5G ಹೈಲೈಟ್ ಫೀಚರ್ಗಳೇನು?

POCO M7 Pro 5G ಸ್ಮಾರ್ಟ್ಫೋನ್ 6.67 ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಜೊತೆಗೆ 2160nits ಬ್ರೈಟ್‌ನೆಸ್ ಮತ್ತು ವಿಷನ್ ಬೂಸ್ಟರ್‌ನೊಂದಿಗೆ ಬರುತ್ತದೆ. POCO M7 Pro 5G ಸ್ಮಾರ್ಟ್ಫೋನ್ 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡಿದೆ. ಅಲ್ಲದೆ ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.

POCO M7 Pro 5G launched in India

ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ MediaTek Dimensity 7025 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ರನ್ ಆಗುತ್ತದೆ. ಆದಾಗ್ಯೂ ಕಂಪನಿಯು 2 ವರ್ಷಗಳ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುತ್ತದೆ. ಫೋನ್ ಅನ್ನು ಪವರ್ ಮಾಡಲು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5110mAh ಬ್ಯಾಟರಿ ಇದೆ.

POCO M7 Pro 5G Camera

POCO M7 Pro 5G ಕ್ಯಾಮರಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸರ್ Ai ಕ್ಯಾಮೆರಾ ಮತ್ತು Sony LYT-600 ಸೆನ್ಸರ್ ಹೊಂದಿದ್ದು ಅತ್ಯುತ್ತಮ ಫೋಟೋಗ್ರಾಫಿಗಾಗಿ ಕೈ ತಟ್ಟಲೇಬೇಕು. ಅಲ್ಲದೆ ಎರಡನೆಯದಾಗಿ 2MP ಅಲ್ಟ್ರಾ-ವೈಡ್-ಆಂಗಲ್ನೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ನೀಡುತ್ತದೆ. ಸೆಲ್ಫಿಗಾಗಿ ಇದು 20MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಪ್ರೈಮರಿ ಕ್ಯಾಮೆರಾವು 4K ವೀಡಿಯೊ ರೆಕಾರ್ಡಿಂಗ್ 30fps ಬೆಂಬಲದೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo