POCO M7 Pro 5G First Sale Today: ಭಾರತದಲ್ಲಿ ಪೊಕೊ (POCO) ಕಂಪನಿ ಮೂರು ದಿನಗಳ ಹಿಂದೆಯಷ್ಟೇ ತನ್ನ ಈ ಲೇಟೆಸ್ಟ್ POCO M7 Pro 5G ಸ್ಮಾರ್ಟ್ಫೋನ್ ಅನ್ನು ಫುಲ್ ಲೋಡೆಡ್ ಫೀಚರ್ಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ 5G ಸ್ಮಾರ್ಟ್ಫೋನ್ ವಿಭಾಗದಲ್ಲಿ ಅಂದ್ರೆ ಕೇವಲ ₹13,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿತ್ತು. ಪ್ರಸ್ತುತ ಇಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಈ ಲೇಟೆಸ್ಟ್ POCO M7 Pro 5G ಸ್ಮಾರ್ಟ್ಫೋನ್ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಆಫರ್ ಬೆಲೆ ಮತ್ತು ಟಾಪ್ ಹೈಲೈಟ್ ಫೀಚರ್ ಮತ್ತು ವಿಶೇಷಣಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ನಿಮಗೆ ಈ POCO M7 Pro 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮೊದಲನೆಯದು 6GB RAM ಮತ್ತು 128GB ಸ್ಟೋರೇಜ್ ಇದನ್ನು ನೀವು ಕೇವಲ ₹13,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಇದನ್ನು ನೀವು ಕೇವಲ ₹15,999 ರೂಗಳಿಗೆ ಬಿಡುಗಡೆಯಾಗಿದೆ ಖರೀದಿಸಬಹುದು.
ಆದರೆ ನೀವು HDFC, SBI ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು 1000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಇದರ ಮಾರಾಟವು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮತ್ತು ಇತರ ಮಾಧ್ಯಮದ ಮೂಲಕ ಇಂದು 20ನೇ ಡಿಸೆಂಬರ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ.
POCO M7 Pro 5G ಸ್ಮಾರ್ಟ್ಫೋನ್ 6.67 ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಜೊತೆಗೆ 2160nits ಬ್ರೈಟ್‌ನೆಸ್ ಮತ್ತು ವಿಷನ್ ಬೂಸ್ಟರ್‌ನೊಂದಿಗೆ ಬರುತ್ತದೆ. POCO M7 Pro 5G ಸ್ಮಾರ್ಟ್ಫೋನ್ 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡಿದೆ. ಅಲ್ಲದೆ ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
Also Read: Smart TV: ಬರೋಬ್ಬರಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಕೇವಲ ₹12,999 ರೂಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ!
ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ MediaTek Dimensity 7025 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ರನ್ ಆಗುತ್ತದೆ. ಆದಾಗ್ಯೂ ಕಂಪನಿಯು 2 ವರ್ಷಗಳ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುತ್ತದೆ. ಫೋನ್ ಅನ್ನು ಪವರ್ ಮಾಡಲು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5110mAh ಬ್ಯಾಟರಿ ಇದೆ.
POCO M7 Pro 5G ಕ್ಯಾಮರಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸರ್ Ai ಕ್ಯಾಮೆರಾ ಮತ್ತು Sony LYT-600 ಸೆನ್ಸರ್ ಹೊಂದಿದ್ದು ಅತ್ಯುತ್ತಮ ಫೋಟೋಗ್ರಾಫಿಗಾಗಿ ಕೈ ತಟ್ಟಲೇಬೇಕು. ಅಲ್ಲದೆ ಎರಡನೆಯದಾಗಿ 2MP ಅಲ್ಟ್ರಾ-ವೈಡ್-ಆಂಗಲ್ನೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ನೀಡುತ್ತದೆ. ಸೆಲ್ಫಿಗಾಗಿ ಇದು 20MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಪ್ರೈಮರಿ ಕ್ಯಾಮೆರಾವು 4K ವೀಡಿಯೊ ರೆಕಾರ್ಡಿಂಗ್ 30fps ಬೆಂಬಲದೊಂದಿಗೆ ಬರುತ್ತದೆ.