ಭಾರತದಲ್ಲಿ ಕಡಿಮೆ ಬೆಲೆಗೆ ಅತ್ಯುತ್ತಮವಾದ ಸ್ಮಾರ್ಟ್‌ಫೋನ್ಗಳನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್ ಬ್ರಾಂಡ್ ಪೊಕೋ (POCO) ಈಗ ತನ್ನ ಹೊಸ POCO M6 ಸ್ಮಾರ್ಟ್‌ಫೋನ್ ಅನ್ನು 108MP ಕ್ಯಾಮೆರಾದೊಂದಿಗೆ 5030mAh ಬ್ಯಾಟರಿಯೊಂದಿಗೆ ಸ್ಮಾರ್ಟ್ಫೋನ್ ನಾಳೆ ಅಂದ್ರೆ 11ನೇ ಜೂನ್ 2024 ರಂದು ಅಧಿಕೃತವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. POCO M6 ಸ್ಮಾರ್ಟ್‌ಫೋನ್ ದೊಡ್ಡ ಬ್ಯಾಟರಿ, ದೊಡ್ಡ ಡಿಸ್ಪ್ಲೇ ಮತ್ತು ಉತ್ತಮ ಪ್ರೊಸೆಸರ್ ಈ ಬೆಲೆಗೆ ಈಗಾಗಲೇ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿದೆ. ಸ್ಮಾರ್ಟ್ಫೋನ್ ಬಿಡುಗಡೆಗೂ ಮುಂಚೆ ಇದರ ಸರಿ ಸುಮಾರು ಎಲ್ಲ ಫೀಚರ್ಗಳನ್ನು ಬಹಿರಂಗಪಡಿಸಿದೆ.
Also Read: 150 ದಿನಗಳ ವ್ಯಾಲಿಡಿಟಿಯ ಈ BSNL ಯೋಜನೆಯಲ್ಲಿ ದಿನಕ್ಕೆ 2GB ಡೇಟಾ ಮತ್ತು ಕರೆಗಳು 397 ರೂಗಳಿಗೆ ಲಭ್ಯ!
ಕಂಪನಿಯು ಈ ಫೋನ್‌ಗೆ 6.79 ಇಂಚಿನ IPS LCD ಪ್ಯಾನೆಲ್ ಅನ್ನು ನೀಡುತ್ತಿದೆ. ಈ ಪೂರ್ಣ HD + ಡಿಸ್ಪ್ಲೇ 20.5: 9 ರ ಆಕಾರ ಅನುಪಾತದೊಂದಿಗೆ ಬರಲಿದೆ. ಇದರ ಗರಿಷ್ಠ ಹೊಳಪಿನ ಮಟ್ಟ 550 ನಿಟ್‌ಗಳಾಗಿದ್ದು ಕಂಪನಿಯು ಫೋನ್‌ನಲ್ಲಿ ಡಿಸಿ ಡಿಮ್ಮಿಂಗ್ ವೈಶಿಷ್ಟ್ಯವನ್ನು ಸಹ ಒದಗಿಸುತ್ತಿದೆ. ಫೋನ್‌ನ ಹಿಂಭಾಗದ ಪ್ಯಾನಲ್ ಗ್ಲಾಸ್ನೊಂದಿಗೆ ಬರಲಿದೆ. ಇದು ಫೋನ್‌ನ ನೋಟವನ್ನು ಸಾಕಷ್ಟು ಪ್ರೀಮಿಯಂ ಮಾಡುತ್ತದೆ. ಈ ಫೋನ್ ಅನ್ನು 8GB LPDDR4x RAM ಮತ್ತು 256GB ವರೆಗೆ eMMC 5.1 ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ.
ಪ್ರೊಸೆಸರ್ ಆಗಿ ನೀವು ಫೋನ್‌ನಲ್ಲಿ MediaTek Helio G91 ಚಿಪ್‌ಸೆಟ್ ಅನ್ನು ನೋಡುತ್ತೀರಿ. ಕ್ಯಾಮೆರಾ ವಿಭಾಗದಲ್ಲಿ ಫೋನ್ LED ಫ್ಲ್ಯಾಷ್‌ನೊಂದಿಗೆ ಎರಡು ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಇವುಗಳು 108MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್‌ನೊಂದಿಗೆ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿವೆ. ಸೆಲ್ಫಿಗಾಗಿ ಫೋನ್‌ನ ಮುಂಭಾಗದಲ್ಲಿ 13MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒದಗಿಸಲಾಗಿದೆ. ಫೋನ್ ಅನ್ನು ಪವರ್ ಮಾಡಲು ಇದು 5030mAh ಬ್ಯಾಟರಿಯೊಂದಿಗೆ ಒದಗಿಸಲಾಗಿದೆ. ಈ ಬ್ಯಾಟರಿಯು 33W ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಬಯೋಮೆಟ್ರಿಕ್ ಭದ್ರತೆಗಾಗಿ ಕಂಪನಿಯು ಫೋನ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡುತ್ತಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಸಂಪರ್ಕಕ್ಕಾಗಿ ಕಂಪನಿಯು ಈ ಫೋನ್‌ನಲ್ಲಿ ಡ್ಯುಯಲ್ ಸಿಮ್, 4G VoLTE, Wi-Fi, ಬ್ಲೂಟೂತ್ 5.4, NFC, USB ಟೈಪ್-ಸಿ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನಂತಹ ಆಯ್ಕೆಗಳನ್ನು ಒದಗಿಸಿದೆ. ಈ ಫೋನ್ ಈಗಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
ಈ POCO M6 4G ಸ್ಮಾರ್ಟ್‌ಫೋನ್ ಭಾರತದಲ್ಲಿನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಇದನ್ನು ಪ್ರಸ್ತುತ ಎರಡು ವೇರಿಯೆಂಟ್ಗಳ ಮೂಲಕ ಬಿಡುಗಡೆಗಡೆಗೊಳಿಸುವುದಾಗಿ ಕಂಪನಿಯಿಂದ ನಿರೀಕ್ಷಿಸಲಾಗಿದೆ. ಅಂದ್ರೆ ಇದರಲ್ಲಿ ನಿಮಗೆ 6GB RAM ಮತ್ತು 128GB ಸ್ಟೋರೇಜ್ ಆಗಿದ್ದು ಇದರ ಬೆಲೆಯನ್ನು ಸುಮಾರು 12,499 ರೂಗಳಿಗೆ ನಿರೀಕ್ಷಿಸಿದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 13,499 ರೂಗಳಿಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗುವುದಾಗಿ ನಿರೀಕ್ಷಬಹುದು. ಆದರೆ ಇದರ ಬಗ್ಗೆ ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿಗಳಿಲ್ಲ.