ಪೊಕೋ (POCO) ನ ಹೊಸ ಸ್ಮಾರ್ಟ್‌ಫೋನ್ POCO M4 Pro 5G ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಸಾಧನದ ಹಲವು ಟೀಸರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಟೀಸರ್‌ಗಳ ಪ್ರಕಾರ ಮುಂಬರುವ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರು 33W ವೇಗದ ಚಾರ್ಜಿಂಗ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ನ ಬೆಂಬಲವನ್ನು ಪಡೆಯುತ್ತಾರೆ. ಇದರ ಹೊರತಾಗಿ ಸೋರಿಕೆಯಾದ ವರದಿಗಳ ಪ್ರಕಾರ Poco M4 Pro ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್ ಜೊತೆಗೆ 50MP AI ಕ್ಯಾಮೆರಾ ಮತ್ತು 5000mAh ಜಂಬೋ ಬ್ಯಾಟರಿಯೊಂದಿಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ.
ಈ Poco M4 Pro ಸ್ಮಾರ್ಟ್ಫೋನ್ ಅಲ್ಟ್ರಾ ಫಾಸ್ಟ್ ಪ್ರೊಸೆಸರ್ನೊಂದಿಗೆ ಬರಲಿದೆ ಇದು 6nm ಚಿಪ್ ಅನ್ನು ಆಧರಿಸಿದೆ. ಇದು 33W ವೇಗದ ಚಾರ್ಜಿಂಗ್ ಮತ್ತು ಎರಡು ಸ್ಪೀಕರ್‌ಗಳನ್ನು ಹೊಂದಿರುತ್ತದೆ. ಇದಲ್ಲದೆ ಬಳಕೆದಾರರು ಸ್ಮಾರ್ಟ್‌ಫೋನ್‌ನಲ್ಲಿ ಎಕ್ಸ್-ಆಕ್ಸಿಸ್ ಲೀನಿಯರ್ ಮೋಟಾರ್ ಸೇರಿದಂತೆ ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್‌ನ ಬೆಂಬಲವನ್ನು ಪಡೆಯುತ್ತಾರೆ. ಸೋರಿಕೆಯ ಪ್ರಕಾರ Poco M4 Pro 5G ಸ್ಮಾರ್ಟ್‌ಫೋನ್‌ನಲ್ಲಿ 6.6 ಇಂಚಿನ Full HD+ IPS LCD ಡಿಸ್ಪ್ಲೇಯನ್ನು ನೀಡಬಹುದು ಇದು 90Hz ನ ರಿಫ್ರೆಶ್ ದರವನ್ನು ಹೊಂದಿರುತ್ತದೆ. ಇದಲ್ಲದೇ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಚಿಪ್‌ಸೆಟ್ ಅನ್ನು ಸ್ಮಾರ್ಟ್‌ಫೋನ್‌ನಲ್ಲಿ ನೀಡಬಹುದಾಗಿದೆ.
https://twitter.com/POCOGlobal/status/1457316906394918915?ref_src=twsrc%5Etfw
POCO M4 Pro 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಬೆಂಬಲಿಸುತ್ತದೆ. ಇದು ಮೊದಲ 50MP AI ಲೆನ್ಸ್ ಮತ್ತು ಎರಡನೇ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಹೊಂದಿರುತ್ತದೆ. ಇದಲ್ಲದೆ ಫೋನ್‌ನಲ್ಲಿ ಸೆಲ್ಫಿಗಾಗಿ 16MP ಕ್ಯಾಮೆರಾವನ್ನು ಕಾಣಬಹುದು. POCO M4 Pro 5G ಸ್ಮಾರ್ಟ್‌ಫೋನ್‌ನಲ್ಲಿ 5000mAh ಬ್ಯಾಟರಿಯನ್ನು ನೀಡಬಹುದು. ಇದಲ್ಲದೆ ಫೋನ್‌ನಲ್ಲಿ ಸಂಪರ್ಕಕ್ಕಾಗಿ ವೈ-ಫೈ ಜಿಪಿಎಸ್ ಬ್ಲೂಟೂತ್ ಮತ್ತು ಯುಎಸ್‌ಬಿ ಪೋರ್ಟ್‌ನಂತಹ ವೈಶಿಷ್ಟ್ಯಗಳು ಲಭ್ಯವಿರುತ್ತವೆ.
ಮುಂಬರುವ ಸ್ಮಾರ್ಟ್‌ಫೋನ್ Poco M4 Pro ಬೆಲೆಯ ಬಗ್ಗೆ Poco ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಈ ಸಾಧನದ ಬೆಲೆ 15000 ರಿಂದ 18000 ರೂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಡಿಜಿಟ್ ಕನ್ನಡದೊಂದಿಗೆ ಸೇರಿರಿ. ಅಷ್ಟೇಯಲ್ಲದೆ ಇದರ ಅಧಿಕೃತವಾದ ಬೆಲೆ ಮತ್ತು ಇದರ ಲೈವ್ ವೀಕ್ಷಣೆಯನ್ನು ಪೊಕೊ ತನ್ನ ಅಧಿಕೃತ ವೆಬ್ಸೈಟ್ ಮತ್ತು ಯುಟ್ಯೂಬ್ ಚಾನಲ್ಗಳಲ್ಲಿ ನೋಡಬವುದು.