POCO F7 Ultra Launched: ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿ ಪೊಕೋ (POCO) ತನ್ನ ಲೇಟೆಸ್ಟ್ POCO F7 Ultra ಸ್ಮಾರ್ಟ್ಫೋನ್ ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ ವಿಶೇಷಣತೆಗಳನ್ನು ನೋಡುವುದಾದರೆ 12GB RAM ಮತ್ತು 32MP ಸೆಲ್ಫಿ ಕ್ಯಾಮೆರಾದೊಂದಿಗೆ ಪರಿಚಯವಾಗಿದೆ. ಸ್ಮಾರ್ಟ್ಫೋನ್ ಪ್ರಸ್ತುತ ಭಾರತದಲ್ಲಿ ಯಾವಾಗ ಬರಲಿದೆ ಎನ್ನುವುದರ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಗಳನ್ನು ಕಂಪನಿ ನೀಡಿಲ್ಲ. POCO F7 Ultra ಜಾಗತಿಕವಾಗಿ ಬಿಡುಗಡೆಯಾಗಿದ್ದು ಇದರ ಬೆಲೆಯೊಂದಿಗೆ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಲೇಟೆಸ್ಟ್ POCO F7 Ultra ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಹೇಳುವುದಾದರೆ ಸ್ಮಾರ್ಟ್ಫೋನ್ 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ $599 (ಸುಮಾರು 51,000 ರೂಗಳು) ಮತ್ತು ಇದರ 16GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ರೂಪಾಂತರದ ಬೆಲೆಯನ್ನು $649 (ಸುಮಾರು 55,000 ರೂಗಳು) ಮೂಲಕ ಬಿಡುಗಡೆಯಾಗಲಿದೆ. ಲೇಟೆಸ್ಟ್ POCO F7 Ultra ಸ್ಮಾರ್ಟ್ಫೋನ್ ಕಪ್ಪು ಮತ್ತು ಹಳದಿ ಎಂಬ ಎರಡು ಬಣ್ಣ ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ.
Also Read: BHIM 3.0 Launched: ಭಾರತದಲ್ಲಿ ಭೀಮ್ ಅಪ್ಲಿಕೇಶನ್‌ನ ಹೊಸ ಅಪ್ಡೇಟ್ ಪರಿಚಯ! ಇದರ ವಿಶೇಷತೆಗಳೇನು ತಿಳಿಯಿರಿ!
ಮೊದಲಿಗೆ ಈ ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮತನಡುವುದಾದರೆ 6.67 ಇಂಚಿನ WQHD+ ಫ್ಲೋ AMOLED (1440×3200 ಪಿಕ್ಸೆಲ್‌ಗಳು) ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.
POCO F7 Ultra ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಅಳವಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್ 512GB UFS 4.1 ಸ್ಟೋರೇಜ್ ಮತ್ತು 16GB LPDDR5X RAM ಅನ್ನು ಹೊಂದಿದೆ.
POCO F7 Ultra ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್ ಮತ್ತು 32MP ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಬರುತ್ತದೆ.
POCO F7 Ultra ಸ್ಮಾರ್ಟ್ಫೋನ್ 32MP ಮುಂಭಾಗದ ಕ್ಯಾಮೆರಾದೊಂದಿಗೆ ನೀವು ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು.
ಈ POCO F7 Ultra ಸ್ಮಾರ್ಟ್‌ಫೋನ್ IP68 ರೇಟಿಂಗ್‌ನೊಂದಿಗೆ ಬರುತ್ತದೆ.
ಈ ಸ್ಮಾರ್ಟ್‌ಫೋನ್ 5300mAh ಬ್ಯಾಟರಿಯೊಂದಿಗೆ ಇದು 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 120W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.