POCO F7 Series ಅತಿ ಶೀಘ್ರದಲ್ಲೇ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

POCO F7 Series ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ ಪೊಕೋ.
POCO F7 Series ಸ್ಮಾರ್ಟ್ಫೋನ್ ಇದೆ 27ನೇ ಮಾರ್ಚ್ 2025 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.
ಈ ಸರಣಿಯಲ್ಲಿ POCO F7, POCO F7 Pro ಮತ್ತು POCO F7 Ultra ಸ್ಮಾರ್ಟ್ಫೋನ್ಗಳನ್ನು ನಿರೀಕ್ಷಿಸಲಾಗಿದೆ.
POCO F7 Series Global Launch: ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಪೊಕೋ (POCO) ತನ್ನ ಮುಂಬರಲಿರುವ POCO F7 Series ಸ್ಮಾರ್ಟ್ಫೋನ್ಗಳನ್ನು ಗ್ಲೋಬಲ್ ಲಾಂಚ್ ಇವೆಂಟ್ ಅನ್ನು ಇದೆ 27ನೇ ಮಾರ್ಚ್ 2025 ರಂದು ಹಮ್ಮಿಕೊಳ್ಳಲಾಗಿದ್ದು ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಬಹುದು. ಯಾಕೆಂದರೆ ಕಂಪನಿ ಈಗಾಗಲೇ ಸ್ಮಾರ್ಟ್ಫೋನ್ ಲುಕ್ ಡಿಸೈನಿಂಗ್ ಎಲ್ಲವನ್ನು ಪೋಸ್ಟ್ ಮಾಡಿ ಜನರನ್ನು ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.
POCO F7 Series ನಿರೀಕ್ಷಿತ ಫೀಚರ್ಗಳೇನು?
ಈ POCO F7 Series ಸ್ಮಾರ್ಟ್ಫೋನ್ ಸೋನಿ ಕ್ಯಾಮೆರಾ ಸೆನ್ಸರ್ ಮತ್ತು ಡಿಸೆಂಟ್ ಬ್ಯಾಟರಿಯೊಂದಿಗೆ ಅನೇಕ ಹೊಸ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬಿಡುಗಡೆಯಾಗುವುದಾಗಿ ನಿರೀಕ್ಷಿಸಲಾಗಿದೆ. ಈ ಮುಂಬರಲಿರುವ POCO F7 Series ಸ್ಮಾರ್ಟ್‌ಫೋನ್ ಪವರ್ಫುಲ್ Snapdragon 8s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗುವ ಸಾಧ್ಯತೆಗಳಿವೆ. ಇದೊಂದು ಅತ್ಯುತ್ತಮ ಫ್ಲ್ಯಾಗ್‌ಶಿಪ್ ಮಟ್ಟದ ಅನುಭವವನ್ನು ಹುಡುಕುತ್ತಿರುವ ಭಾರತೀಯ ಬಳಕೆದಾರರಿಗೆ ಕಾರ್ಯಕ್ಷಮತೆಯ ವರ್ಧಕವನ್ನು ಸೂಚಿಸುತ್ತದೆ.
The True Flagship Has Arrived: no compromises, no limits.
— POCO (@POCOGlobal) March 20, 2025
Mark your calendar:
📍 Mar 27, 2025 | 16:00 GMT+8#POCOF7Series #POCOF7Pro #POCOF7Ultra pic.twitter.com/K9kCxujYOE
ಅಲ್ಲದೆ ಸ್ಮಾರ್ಟ್ಫೋನ್ ಈಗಾಗಲೇ ಲಭ್ಯವಲಿರುವ POCO F6 ಮಾದರಿಯ ಸ್ಮಾರ್ಟ್ಫೋನ್ ಸಮನಾಗಿ ಅಲ್ಲ ಫೀಚರ್ಗಳನ್ನೂ ಹೊಂದಿರುವ ನಿರೀಕ್ಷೆಗಳಿವೆ. ಈಗಾಗಲೇ ಮೇಲೆ ತಿಳಿಸಿರುವಂತೆ ಫೋನ್ ಅತ್ಯುತ್ತಮ ಸೋನಿ ಕ್ಯಾಮೆರಾ ಮತ್ತು ಡಿಸೆಂಟ್ ಬ್ಯಾಟರಿ ಪ್ಯಾಕ್ ಮಾಡುವುದಾಗಿ ಕಾಣಬಹುದು. ಆದರೆ ಇದರ ಯಾವುದೇ ಮಾಹಿತಿಗಳು ಅಧಿಕೃತವಾಗಿ ಇನ್ನೂ ಹೊರಬಂದಿಲ್ಲ ಎನ್ನವುದನ್ನು ಗಮನಿಸಬೇಕಿದೆ.
Also Read: ಕೆಲವೇ ತಿಂಗಳುಗಳಲ್ಲಿ BSNL 5G ಸೇವೆಗಳು ಆಯ್ದ ನಗರಗಳಲ್ಲಿ ಆರಂಭಿಸಲು ಸಿದ್ದ!
POCO F7 Series ಬೆಲೆ ಮತ್ತು ಲಭ್ಯತೆ
ಪ್ರಸ್ತುತ ಈ ಸ್ಮಾರ್ಟ್ಫೋನ್ ಜಾಗತಿಕವಾಗಿ ಬಿಡುಗಡೆಯಾಗಲಿದ್ದು ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತೆ ಮತ್ತು ಯಾವಗ ಮಾರಾಟಕ್ಕೆ ಬರುತ್ತೆ ಎನ್ನೋದರ ಬಗ್ಗೆ ಇನ್ನೂ ಯಾವುದೇ ಮಾಹಿತಿಗಳಿಲ್ಲ. POCO F7 Series ಸ್ಮಾರ್ಟ್ಫೋನ್ ಲುಕ್ ನೋಡುವುದಾದರೆ ಸ್ಮಾರ್ಟ್ಫೋನ್ 30,000 ರಿಂದ 35,000 ರೂಗಳೊಳಗೆ ನಿರೀಕ್ಷಿಸಲಾಗಿದೆ. ಯಾಕೆಂದರೆ ಈಗಾಗಲೇ ಬಿಡುಗಡೆಯಾಗಿರುವ POCO F6 Series ಆರಂಭಿಕ ಸುಮಾರು 27,000 ರೂಗಳಿಗೆ ಲಭ್ಯವಿದೆ. ಈ ಫೋನ್ ಭಾರತದಲ್ಲಿ ಫ್ಲಿಪ್ಕಾರ್ಟ್ ಮೂಲಕ ಮಾರುವುದಾಗಿ ನಿರೀಕ್ಷಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile