POCO F6 ಸ್ಮಾರ್ಟ್ಫೋನ್ 12GB RAM ಮತ್ತು 50MP ಸೋನಿ ಕ್ಯಾಮೆರಾದೊಂದಿಗೆ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಭಾರತದಲ್ಲಿ ಪೊಕೋ ತನ್ನ ಲೇಟೆಸ್ಟ್ POCO F6 ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
POCO F6 ಸ್ಮಾರ್ಟ್ಫೋನ್ 12GB RAM ಮತ್ತು 50MP ಸೋನಿ ಕ್ಯಾಮೆರಾದೊಂದಿಗೆ Snapdragon 8s Gen 3 ಚಿಪ್‌ಸೆಟ್ ಅನ್ನು ಹೊಂದಿದೆ.
POCO F6 ಸ್ಮಾರ್ಟ್ಫೋನ್ 6.67 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದ್ದು ಕಾರ್ನಿಂಗ್‌ಗೊರಿಲ್ಲಾ ಗ್ಲಾಸ್ ವಿಕ್ಟಸ್ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ.
ಭಾರತದಲ್ಲಿ ಪೊಕೋ (POCO) ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ಇಂದು ತನ್ನ ಲೇಟೆಸ್ಟ್ POCO F6 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಫೋನ್ ಇತ್ತೀಚಿನ ಹೊಸ ಮತ್ತು ಬೆಸ್ಟ್ ಫೀಚರ್ಗಳೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ಫೋನ್ಗಳೊಂದಿಗೆ ನೇರವಾಗಿ ಠಕ್ಕರ್ ನೀಡಲು POCO F6 ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರಲ್ಲಿ ಮುಖ್ಯವಾಗಿ 12GB RAM ಮತ್ತು 50MP ಸೋನಿ ಕ್ಯಾಮೆರಾದೊಂದಿಗೆ Snapdragon 8s Gen 3 ಚಿಪ್‌ಸೆಟ್ ಅನ್ನು ಹೊಂದಿರುವುದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ POCO F6 ಸ್ಮಾರ್ಟ್ಫೋನ್ ಅನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಟಾಪ್ ಹೈಲೈಟ್ ಫೀಚರ್ ಮತ್ತು ವಿಶೇಷಣಗಳನ್ನು ತಿಳಿಯಿರಿ.
ಭಾರತದಲ್ಲಿ POCO F6 ಬೆಲೆ ಮತ್ತು ಆಫರ್ಗಳೇನು?
ಈ ಸ್ಮಾರ್ಟ್ಫೋನ್ ಬಿಡುಗಡೆಯ ಬೆಲೆ ನೋಡುವುದಾದರೆ 8GB + 256GB: ₹29,999 ಮತ್ತೊಂದು 12GB + 256GB: ₹31,999 ಕೊನೆಯದಾಗಿ 12GB + 512GB: ₹33,999 ರೂಗಳಿಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ 29ನೇ ಮೇ 2024 ರಂದು ಮೊದಲ ಮಾರಾಟದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರುತ್ತದೆ.
ಈ ಮಾರಾಟದ ಮೊದಲ ದಿನದ ಬೆಲೆಯು ಸಹ ಮಾನ್ಯವಾಗಿದ್ದು ಇದರೊಂದಿಗೆ ರೂ. 2,000 ಬ್ಯಾಂಕ್ ಕೊಡುಗೆಗಳು ಮತ್ತು ರೂ. 2,000 ಪ್ರಾಡಕ್ಟ್ ವಿನಿಮಯ ಕೊಡುಗೆಗಳನ್ನು ಒಳಗೊಂಡಿದೆ. ಅಲ್ಲದೆ ಗ್ರಾಹಕರು ಮಾರಾಟದ ಮೊದಲ ದಿನದಂದು 1+1 ವರ್ಷದ ವಾರಂಟಿಯಿಂದ ಪ್ರಯೋಜನ ಪಡೆಯಬಹುದು. ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರು ಹಾಗೆಯೇ EMI ವಹಿವಾಟುಗಳನ್ನು ಆಯ್ಕೆ ಮಾಡುವವರು 2,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.
ಭಾರತದಲ್ಲಿ Poco F6 ಡಿಸ್ಪ್ಲೇ ಮತ್ತು ಕ್ಯಾಮೆರಾ:
ಸ್ಮಾರ್ಟ್ಫೋನ್ 6.67 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದ್ದು ಕಾರ್ನಿಂಗ್‌ಗೊರಿಲ್ಲಾ ಗ್ಲಾಸ್ ವಿಕ್ಟಸ್ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. 2712×1220 ರೆಸಲ್ಯೂಶನ್ ಮತ್ತು 446 PPI ಹೊಂದಿರುವ ಕ್ರಿಸ್ಟಲ್‌ರೆಸ್ ಫ್ಲೋ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು Poco ನಿಂದ ಮೊದಲೇ ತರಲಾಯಿತು. ಫೋನ್ ಯಾವಾಗಲೂ ಆನ್ ಡಿಸ್ಪ್ಲೇಯನ್ನು ಹೊಂದಿದ್ದು ಗರಿಷ್ಠ ಹೊಳಪಿನ 2400 ನಿಟ್‌ಗಳವರೆಗೆ ಇರುತ್ತದೆ.
Also Read: 365 ದಿನಗಳಿಗೆ ಬರೋಬ್ಬರಿ 912GB ಡೇಟಾ ಮತ್ತು ಅನ್ಲಿಮಿಟೆಡ್ ಕರೆ ನೀಡುವ Reliance Jio ಈ ಪ್ಲಾನ್ ಬೆಲೆ ಎಷ್ಟು?
Poco F6 5G ಸ್ಮಾರ್ಟ್ಫೋನ್ ಡುಯಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಮೆಗಾಪಿಕ್ಸೆಲ್ Sony IMX882 ಸೆನ್ಸರ್ ಹೊಂದಿದ್ದು ಮತ್ತೊಂದು 8MP ಮೆಗಾಪಿಕ್ಸೆಲ್ IMX355 ಅನ್ನು ಸಪೋರ್ಟ್ ಮಾಡುತ್ತದೆ. Poco F6 5G ಸ್ಮಾರ್ಟ್ಫೋನ್ ವೀಡಿಯೊಗಾಗಿ HDR10+ ವೈಶಿಷ್ಟ್ಯವನ್ನು ಹೊಂದಿದೆ. ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 20MP ಮೆಗಾಪಿಕ್ಸೆಲ್ ಹೊಂದಿದೆ.
ಭಾರತದಲ್ಲಿ ಪೊಕೋ F6 ಹಾರ್ಡ್ವೇರ್ ಮತ್ತು ಬ್ಯಾಟರಿ
ಈ ಫೋನ್ Qualcomm Snapdragon 8s Gen 3 ಪ್ರೊಸೆಸರ್‌ನಿಂದ LPDDR5X RAM ಮತ್ತು UFS 4.0 ಸ್ಟೋರೇಜ್ ಹೊಂದಿದೆ.ಈ ಸ್ಮಾರ್ಟ್ಫೋನ್ ಹೊಸ ಕ್ವಾಲ್ಕಾಮ್ ಚಿಪ್ ಅನ್ನು ಪ್ಯಾಕ್ ಮಾಡಿದ ಭಾರತದಲ್ಲಿ ಇದು ಮೊದಲ ಫೋನ್ ಆಗಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ Xiaomi ಹೈಪರ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ ಬ್ಲಾಕ್ ಮತ್ತು ಟೈಟಾನಿಯಂ ಗ್ಲೋ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಫೋನ್ 5,000mAh ಬ್ಯಾಟರಿಯನ್ನು ಸಹ ಹೊಂದಿದ್ದು ಜೊತೆಗೆ 90W ಟರ್ಬೋಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ‘ಬೂಸ್ಟ್ ಚಾರ್ಜಿಂಗ್ ಸ್ಪೀಡ್’ ವೈಶಿಷ್ಟ್ಯವು ಸ್ಮಾರ್ಟ್‌ಫೋನ್‌ನ ಮತ್ತೊಂದು ಪ್ರಮುಖ ಅಂಶವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile