POCO F6 launch in India: ಪೊಕೋದ ಮುಂಬರಲಿರುವ POCO F6 ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್!
POCO F6 ಸ್ಮಾರ್ಟ್ಫೋನ್ 23ನೇ ಮೇ 2024 ರಂದು ಜಾಗತಿಕವಾಗಿ ದುಬೈನಲ್ಲಿ ಸಂಜೆ 4.30 ಕ್ಕೆ IST ಬಿಡುಗಡೆಯನ್ನು ನಿಗದಿಗೊಳಿಸಿದೆ.
POCO F6 ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ನೇರವಾಗಿ ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಾಗಲಿದೆ.
ಪ್ರಸ್ತುತ ಈವರೆಗೆ ಈ ಹೊಸ POCO F6 ಸ್ಮಾರ್ಟ್ಫೋನ್ ಬಗ್ಗೆ ತಿಳಿದಿರುವ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
POCO F6 launch in India: ಭಾರತದಲ್ಲಿ ಜನಪ್ರಿಯವಾಗಿರುವ ಸ್ಮಾರ್ಟ್ಫೋನ್ ಬ್ರಾಂಡ್ ಪೊಕೋ (POCO) ತನ್ನ ಮುಂಬರಲಿರುವ ಹೊಸ POCO F6 ಸ್ಮಾರ್ಟ್ಫೋನ್ ಭಾರತದಲ್ಲಿ ಪ್ರೀಮಿಯಂ ಡಿಸೈನಿಂಗ್ ಮತ್ತು ಲೇಟೆಸ್ಟ್ ಫೀಚರ್‌ಗಳೊಂದಿಗೆ ಇದೆ 23ನೇ ಮೇ 2024 ರಂದು ಜಾಗತಿಕವಾಗಿ ದುಬೈನಲ್ಲಿ ಸಂಜೆ 4.30 ಕ್ಕೆ IST ಅಧಿಕೃತವಾಗಿ ಬಿಡುಗಡೆಯಾಗುವುದಾಗಿ ಕಂಪನಿ ಧೃಡಪಡಿಸಿದೆ. ಈ ಮುಂಬರುವ ಪೊಕೋ ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ನೇರವಾಗಿ ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟಕ್ಕೆ ಕಾಲಿಡಲಿರುವುದನ್ನು ಸಹ ಕಂಪನಿ ದೃಢೀಕರಿಸಿದೆ. ಪ್ರಸ್ತುತ ಈವರೆಗೆ ಹೊಸ POCO F6 ಸ್ಮಾರ್ಟ್ಫೋನ್ ಬಗ್ಗೆ ತಿಳಿದಿರುವ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಭಾರತದಲ್ಲಿ ಪೊಕೋ F6 ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳು
ಈ ಮುಂಬರಲಿರುವ POCO F6 ಸ್ಮಾರ್ಟ್ಫೋನ್ ಅನ್ನು ಈಗಾಗಲೇ ಬಿಡುಗಡೆಯಾಗಿರುವ Xiaomi Redmi Turbo 3 ಫೋನ್ ಮರು ಬ್ರಾಂಡ್ ಆಗಿ ಹೊಸ ಹೆಸರಿನಲ್ಲಿ ಬಿಡುಗಡೆಯಾಗಲು ನಿರೀಕ್ಷಿಸಲಾಗಿದೆ. ಒಂದು ವೇಳೆ ಈ ಈ ವದಂತಿಗಳು ನಿಜವಾದರೆ ಈ ಸ್ಮಾರ್ಟ್‌ಫೋನ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದು ಈ ಕೆಳಗೆ ವಿವರಿಸಲಾಗಿದೆ. ಇದು ಮೃದುವಾದ 120Hz ರಿಫ್ರೆಶ್ ದರದೊಂದಿಗೆ ರೋಮಾಂಚಕ 6.67 ಇಂಚಿನ 1.5K OLED AMOLED ಡಿಸ್ಪ್ಲೇಯನ್ನು ಒಳಗೊಂಡಿದೆ.
ಇಮೇಜಿಂಗ್ ಸಾಮರ್ಥ್ಯಗಳು ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರಬಹುದು. ಸೋನಿ LYT 600 ಸಂವೇದಕದೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಆದರೆ ಸೆಲ್ಫಿಗಳನ್ನು 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಸೆರೆಹಿಡಿಯಬಹುದು.
Also Read: HMD Arrow: ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ HMD ಸ್ಟೈಲಿಶ್ 5G ಸ್ಮಾರ್ಟ್ಫೋನ್ | Tech News
ಮೊದಲಿಗೆ ಪ್ರಸ್ತುತ Qualcomm Snapdragon 8s Gen 3 ಚಿಪ್‌ಸೆಟ್ ಅನ್ನು ಹೊಂದಿರುವುದನ್ನು POCO F6 ಸ್ಮಾರ್ಟ್ಫೋನ್ ಖಚಿತಪಡಿಸಿದೆ. ಇದರೊಂದಿಗೆ 8GB RAM ಮತ್ತು 128GB ಸ್ಟೋರೇಜ್ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷಿಸಬಹುದು. Android 14-ಆಧಾರಿತ HyperOS ನಿಂದ ನಡೆಸಲ್ಪಡುವ Poco F6 ದೃಢವಾದ 5,000mAh ಬ್ಯಾಟರಿಯನ್ನು ಹೊಂದಲು ನಿರೀಕ್ಷಿಸಲಾಗಿದೆ. ಹೆಚ್ಚಿನ ಅನುಕೂಲಕ್ಕಾಗಿ ತ್ವರಿತ 90W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಭಾರತದಲ್ಲಿ POCO F6 ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
ಕೊನೆಯದಾಗಿ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ ನಿಮಗೆ ಈಗಾಗಲೇ ಮೇಲ ತಿಳಿಸಿರುವಂತೆ ಒಟ್ಟಾರೆಯಾಗಿ ಎರಡು ವೇರಿಯೆಂಟ್ಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 27,999 ರೂಗಳಿಗೆ ಬಂದ್ರೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನು ಸುಮಾರು 29,999 ರೂಗಳಿಗೆ ನಿಗದಿಪಡಿಸುವ ನಿರೀಕ್ಷೆಗಳಿವೆ. ಅಂದ್ರೆ ಒಟ್ಟಾರೆಯಾಗಿ ಭಾರತದಲ್ಲಿ ಮುಂಬರಲಿರುವ POCO F6 ಸ್ಮಾರ್ಟ್ಫೋನ್ ಸುಮಾರು 30,000 ರೂಗಳೊಳಗೆ ಬಿಡುಗಡೆಯಾಗುವುದನ್ನು ನಿರೀಕ್ಷಿಸಬಹುದು. ಇದರೊಂದಿಗೆ ಈಗಾಗಲೇ ನಿಮಗೆ ತಿಳಿಸಿರುವಂತೆ ಫೋನ್ ನೇರವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile