POCO F6 Deadpool Edition: ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿದ್ದ ಸ್ಮಾರ್ಟ್ಫೋನ್ ಅನ್ನು ಮತ್ತೆ ಒಂದಿಷ್ಟು ಲುಕ್ ಮತ್ತು ಡಿಸೈನಿಂಗ್ ಬದಲಾಯಿಸಿ ಡೆಡ್‌ಪೂಲ್ ಮತ್ತು ವೊಲ್ವೆರಿನ್ ಚಲನಚಿತ್ರ ಬಿಡುಗಡೆಗೆ ಮುಂಚಿತವಾಗಿ ಸ್ಮಾರ್ಟ್‌ಫೋನ್ ತಯಾರಕ ಪೊಕೊ (POCO) ಸೀಮಿತ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಿದೆ. ಪೊಕೊ ಇಂಡಿಯಾದ ಮುಖ್ಯಸ್ಥರಾಗಿರುವ ಹಿಮಾಂಶು ಟಂಡನ್ POCO F6 Deadpool Edition ಬಗ್ಗೆ ಪೋಸ್ಟ್ ಮಾಡಿದ್ದು ಇದು ಅತ್ಯಂತ ನಿರೀಕ್ಷಿತ ಡೆಡ್‌ಪೂಲ್ ಮತ್ತು ವೊಲ್ವೆರಿನ್ ಚಲನಚಿತ್ರದ ಬಿಡುಗಡೆಯ ಸಮಯದಲ್ಲಿ ಅನಾವರಣಗೊಂಡಿದೆ.
ಫೋನ್ ಸ್ವತಃ ಮಾರ್ವೆಲ್ ಪಾತ್ರಗಳಿಂದ ಪ್ರೇರಿತವಾಗಿದೆ. POCO F6 Deadpool Edition ಡೆಡ್‌ಫೂಲ್‌ನ ಸೂಟ್‌ಗೆ ಅನುಗುಣವಾಗಿ ಹಿಂಭಾಗದ ಪ್ಯಾನಲ್ ಕೆಂಪು ಬಣ್ಣದ್ದಾಗಿದೆ. ಇದು ಕ್ಯಾಮೆರಾ ಲೈಟ್‌ನಲ್ಲಿ ಡೆಡ್‌ಪೂಲ್ ಲೋಗೋ ಜೊತೆಗೆ ಹಿಂಭಾಗದಲ್ಲಿ ಡೆಡ್‌ಪೂಲ್ ಮತ್ತು ವೊಲ್ವೆರಿನ್ 3D ಇಂಪ್ರೆಶನ್ ಅನ್ನು ಹೊಂದಿದೆ. POCO F6 Deadpool Edition ಕ್ಯಾಮೆರಾ ಮಾಡ್ಯೂಲ್ ಅಡಿಯಲ್ಲಿ ಚಲಿಸುವ ಮತ್ತೊಂದು ಸೂಕ್ಷ್ಮವಾದ ಡೆಡ್ ಪೂಲ್ ಬ್ರಾಂಡಿಂಗ್ ಇದೆ.
Also Read: 43 ಇಂಚಿನ Ultra 4K Smart TV ಕೇವಲ 17,999 ರೂಗಳಿಗೆ ಮಾರಾಟ! ಯಾರಿಗುಂಟು ಯಾರಿಗಿಲ್ಲ ಈ ಆಫರ್!
ಫೋನ್ ಬಗ್ಗೆ ಹೇಳುವುದಾದರೆ ಸ್ಮಾರ್ಟ್ಫೋನ್ ಫೀಚರ್ ಅಲ್ಲಿ ಯಾವುದೇ ರೀತಿಯ ಫೀಚರ್ ಅಥವಾ ವಿಶೇಷಣಗಳನ್ನು Qualcomm Snapdragon 8s Gen 3 ಪ್ರೊಸೆಸರ್‌ನಿಂದ ಚಾಲಿತವಾಗಿರುವ ಮೊದಲ ಸ್ಮಾರ್ಟ್‌ಫೋನ್‌ಗಳಲ್ಲಿ POCO F6 Deadpool Edition ಒಂದಾಗಿದೆ. ಇದು 50MP ಹಿಂದಿನ ಪ್ರೈಮರಿ ಕ್ಯಾಮೆರಾದೊಂದಿಗೆ ಬರುತ್ತದೆ ಮತ್ತು 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಮೂಲ ರೂಪಾಂತರವು 12GB RAM ಮತ್ತು 256GB ಸ್ಟೋರೇಜ್ ಸಂಗ್ರಹಣೆಯೊಂದಿಗೆ ಬೆಲೆಯಲ್ಲಿ ಬರುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ 29,999 ರೂಗಳಗಳಿಗೆ ಫೋನ್ 7 ಆಗಸ್ಟ್ 2024 ರಿಂದ ಮಾರಾಟವಾಗಲಿದೆ.
ಈ POCO F6 Deadpool Edition ಫೀಚರ್ ಮತ್ತು ವಿಶೇಷಣಗಳನ್ನು ನೋಡುವುದಾದರೆ 6.67 ಇಂಚಿನ 1.5K ಕ್ರಿಸ್ಟಲ್‌ರೆಸ್ ಫ್ಲೋ 120Hz AMOLED ಡಿಸ್ಪ್ಲೇಯನ್ನು ಪ್ಯಾಕ್ ಮಾಡುತ್ತದೆ. ಇದು ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್ನಿಂದ ಚಾಲಿತವಾಗಿದೆ. 4800mm ಅಲ್ಟ್ರಾ-ಲಾರ್ಜ್ IceLoop ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ. 12GB RIP6 LP ವಾಟರ್ ಪ್ರೂಫ್ 12GB ವರೆಗೆ ವಾಟರ್ ಪ್ರೂಫ್, ಆಂಡ್ರಾಯ್ಡ್ 14 ಆಧಾರಿತ Xiaomi HyperOS ಅನ್ನು ರನ್ ಮಾಡುತ್ತದೆ.
ಅಲ್ಲದೆ POCO F6 Deadpool Edition ಸ್ಮಾರ್ಟ್ಫೋನ್ 50MP 1/1.95 ಅಪರ್ಚರ್ Sony IMX882 ಸೆನ್ಸಾರ್ ಜೊತೆಗೆ f/1.59 ಅಪರ್ಚರ್ OIS ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 20MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಕೊನೆಯದಾಗಿ 90W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.