ಭಾರತದಲ್ಲಿ ಪೊಕೋ (POCO) ಸ್ಮಾರ್ಟ್ಫೋನ್ ಬ್ರಾಂಡ್ ಇತ್ತೀಚೆಗೆ ತನ್ನ ಲೇಟೆಸ್ಟ್ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ POCO F6 5G ಸ್ಮಾರ್ಟ್ಫೋನ್ ಅನ್ನು ಅದ್ದೂರಿಯ ಫೀಚರ್ಗಳೊಂದಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. POCO F6 5G ಅನ್ನು ದೇಶದ ಮೊದಲ Snapdragon 8s Gen 3 ಚಿಪ್‌ಸೆಟ್‌ನೊಂದಿಗೆ ಮುಂಭಾಗದಲ್ಲಿ 20MP ಸೆಲ್ಫಿ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50MP SONY ಸೆನ್ಸರ್ ಅನ್ನು ಈ ಸ್ಮಾರ್ಟ್ಫೋನ್ ಹೊಂದಿದೆ. ಇಂದು ಭಾರತದಲ್ಲಿ ಅಧಿಕೃತವಾಗಿ ಸುಮಾರು 29,999 ರೂಗಳಿಗೆ ಬಿಡುಗಡೆ ಮಾಡಲಾಗಿದೆ. POCO F6 5G ಸ್ಮಾರ್ಟ್ಫೋನ್ ಪ್ರಕಾಶಮಾನವಾದ ಡಿಸ್ಪ್ಲೇ, ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಇತರ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.
Also Read: 84 ದಿನಗಳಿಗೆ ಉಚಿತ OTT ಅಪ್ಲಿಕೇಶನ್ನೊಂದಿಗೆ ಪ್ರತಿದಿನ 2.5GB ಡೇಟಾ ಮತ್ತು ಕರೆ ನೀಡುವ ಬೆಸ್ಟ್ Airtel ಪ್ಲಾನ್!
ಈ ಲೇಟೆಸ್ಟ್ Poco F6 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾವುದಾದರೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ರೂ 29,999 ರಿಂದ ಪ್ರಾರಂಭವಾಗುತ್ತದೆ. 12GB RAM ಹೊಂದಿರುವ 256GB ಸ್ಟೋರೇಜ್ ರೂಪಾಂತರವು 31,999 ರೂಗಳಾಗಿದ್ದು 12GB ಮತ್ತು 512GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ರೂಪಾಂತರದ ಬೆಲೆ 33,999 ರೂಗಳಾಗಿವೆ.
ಈ ಸ್ಮಾರ್ಟ್‌ಫೋನ್ ಕಪ್ಪು ಮತ್ತು ಟೈಟಾನಿಯಂ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ರಿಯಾಯಿತಿಗಳನ್ನು ಪಡೆಯುವ ಮೂಲಕ ರೂ.4,000 ವರೆಗೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಬಹುದು. ಬ್ಯಾಂಕ್ ಕೊಡುಗೆಯೊಂದಿಗೆ ನೀವು ಇದನ್ನು 25,999 ರೂ.ಗೆ ಖರೀದಿಸಬಹುದು. Poco F6 5G ಮೊದಲ ಮಾರಾಟವು 29ನೇ ಮೇ 2024 ರಿಂದ ಪ್ರಾರಂಭವಾಗಲಿದೆ.
Poco F6 5G ಸ್ಮಾರ್ಟ್ಫೋನ್ 6.67 ಇಂಚಿನ 1.5K ರೆಸಲ್ಯೂಶನ್ AMOLED ಪ್ಯಾನೆಲ್ ಅನ್ನು 120 Hz ರಿಫ್ರೆಶ್ ದರ ಮತ್ತು HDR10+, Dolby Vision ಮತ್ತು Widevine L1 ಬೆಂಬಲದೊಂದಿಗೆ ಹೊಂದಿದೆ. ಫೋನ್‌ನಲ್ಲಿ ನೀವು 2,400 ನಿಟ್‌ಗಳ ಗರಿಷ್ಠ ಹೊಳಪು ಮತ್ತು ಕಾರ್ನಿಂಗ್ ಗೊರಿಲ್ಲಾ ವಿಕ್ಟಸ್‌ನ ಸುರಕ್ಷತೆಯನ್ನು ಪಡೆಯುತ್ತೀರಿ. ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್ ಜೊತೆಗೆ 12GB ಯ LPDDR5x RAM ಮತ್ತು 512GB ಸಂಗ್ರಹದೊಂದಿಗೆ ಬರುತ್ತದೆ.
ನೀವು ಮೂರು ದೊಡ್ಡ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಪಡೆಯುತ್ತೀರಿ. ಈ ಫೋನ್‌ನಲ್ಲಿ ನೀವು ಇತ್ತೀಚಿನ Android 14-ಆಧಾರಿತ HyperOS ಅನ್ನು ನೋಡುತ್ತೀರಿ ಮತ್ತು ಕಂಪನಿಯು ಮೂರು ಪ್ರಮುಖ ಆಂಡ್ರಾಯ್ಡ್ ಅಪ್ಡೇಟ್ಗಳನ್ನು ಮತ್ತು 4 ವರ್ಷಗಳ ಮತ್ತು ಸೆಕ್ಯೂರಿಟಿ ನವೀಕರಣಗಳನ್ನು ಫೋನ್‌ಗೆ ಒದಗಿಸುವುದಾಗಿ ಭರವಸೆ ನೀಡಿದೆ. ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಇದಲ್ಲದೇ 5G, Wi-Fi 6, ಬ್ಲೂಟೂತ್ 5.4, GPS/AGPS, ಗೆಲಿಲಿಯೋ, GLONASS, Beidou ಮತ್ತು USB ಟೈಪ್-C ಪೋರ್ಟ್ ಸಂಪರ್ಕ ವೈಶಿಷ್ಟ್ಯಗಳು ಸಾಧನದಲ್ಲಿ ಲಭ್ಯವಿದೆ. ಇದು ಡಾಲ್ಬಿ ಅಟ್ಮಾಸ್ ಬೆಂಬಲ ಮತ್ತು ಹೈ-ರೆಸ್ ಪ್ರಮಾಣೀಕರಣವನ್ನು ಸಹ ಹೊಂದಿದೆ.