POCO F5 5G: ಪೊಕೊದ ಮತ್ತೊಂದು ಸೂಪರ್ 5G ಫೋನ್ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
ಪೊಕೊ (POCO) ಕಂಪನಿ ಭಾರತದಲ್ಲಿ ತನ್ನ ಮತ್ತೊಂದು ಹೊಸ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ.
POCO F5 ಮತ್ತು POCO F5 Pro ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ.
POCO F5 5G ಸ್ಮಾರ್ಟ್ಫೋನ್ ಆರಂಭಿಕ ಬೆಳೆಯನ್ನು ನೋಡುವುದಾದರೆ ಇದರ 8GB/256GB ಮಾದರಿಗೆ 29,999 ರೂಗಳಾಗಿವೆ
POCO F5 5G: ಪೊಕೊ ಕಂಪನಿ ಭಾರತದಲ್ಲಿ ತನ್ನ ಮತ್ತೊಂದು ಹೊಸ 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ. ಈ ಭಾರಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಪೊಕೊ F ಸರಣಿಯಲ್ಲಿ ಎರಡು POCO F5 5G ಮತ್ತು POCO F5 PRO 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿದೆ. POCO F5 ಮತ್ತು POCO F5 Pro ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಫೋನ್‌ಗಳು Qualcomm Snapdragon ಚಿಪ್‌ಸೆಟ್‌ಗಳು, 120Hz ರಿಫ್ರೆಶ್ ರೇಟ್ ಮತ್ತು 67W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತವೆ.
ಭಾರತದಲ್ಲಿ POCO F5 ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್ರ್ಫೋನ್ ಡಿಸ್ಪ್ಲೇಯಲ್ಲಿ ಪಂಚ್-ಹೋಲ್ ಕಟೌಟ್ ಜೊತೆಗೆ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಈ ಫೋನ್ಗಳು ಟ್ರಿಪಲ್ ಕ್ಯಾಮೆರಾ ಸೆನ್ಸರ್ ಮತ್ತು 120Hz AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆರಂಭಿಕ ಬೆಳೆಯನ್ನು ನೋಡುವುದಾದರೆ ಇದರ 8GB/256GB ಮಾದರಿಗೆ ರೂ 29,999 ಮತ್ತು 12GB/256GB ಮಾದರಿಗೆ ರೂ 33,999 ರೂಗಳಾಗಿವೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮಗೆ ಎಲೆಕ್ಟ್ರಿಕ್ ಬ್ಲೂ, ಸ್ನೋಸ್ಟಾರ್ಮ್ ವೈಟ್ ಮತ್ತು ಕಾರ್ಬನ್ ಕಪ್ಪು ಬಣ್ಣಗಳಳ್ಳಿ ಲಭ್ಯವಿರುತ್ತವೆ.
The POCO F5 comes in 2 variants – 8GB/256GB & 12GB/256GB, starting at ₹29,999 & ₹33,999 respectively.
Now, here's the King's special launch offer just for you. Get an additional ICICI bank offer of ₹3000 or an exchange discount worth ₹3000. #POCOF5 #ReturnOfTheKing pic.twitter.com/eKUZBaSuOh
— POCO India (@IndiaPOCO) May 9, 2023
ಅಲ್ಲದೆ ನೀವು ICICI ಕಾರ್ಡ್‌ನೊಂದಿಗೆ ಖರೀದಿಸುವ ರೂ 3,000 ತ್ವರಿತ ರಿಯಾಯಿತಿ ಅಥವಾ ರೂ 3,000 ವಿನಿಮಯ ಬೋನಸ್ ಪಡೆಯಬಹುದು. ಜೊತೆಗೆ ಪ್ರಸ್ತುತ POCO ಫೋನ್ ಬಳಕೆದಾರರು ಹೆಚ್ಚುವರಿ ರೂ 1,000 ವಿನಿಮಯ ಬೋನಸ್ ಅನ್ನು ಪಡೆಯುತ್ತಾರೆ. ಕಂಪನಿಯು ಫೋನ್‌ನಲ್ಲಿ 2 ವರ್ಷಗಳ ವಾರಂಟಿಯನ್ನು ನೀಡುತ್ತಿದೆ. POCO F5 ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಿರುತ್ತದೆ ಮತ್ತು ಮೊದಲ ಮಾರಾಟವು ಮೇ 16 ರಂದು ಮಧ್ಯಾಹ್ನ 12:00pm ಶುರುವಾಗಲಿದೆ.
ಭಾರತದಲ್ಲಿ POCO F5 ವಿಶೇಷಣಗಳು
ಮೊದಲಿಗೆ POCO F5 ಸ್ಮಾರ್ಟ್ಫೋನ್ ನಿಮಗೆ 6.67 ಇಂಚಿನ FHD+ 12-ಬಿಟ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1920Hz PWM ಡಿಮ್ಮಿಂಗ್, ಡಾಲ್ಬಿ ವಿಷನ್, ಐ-ಪ್ರೊಟೆಕ್ಷನ್ ಮೋಡ್ ಮತ್ತು ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದರ ಪ್ರೊಸೆಸರ್ ಬಗ್ಗೆ ನೋಡುವುದಾದರೆ ನಿಮಗೆ ಗ್ರಾಫಿಕ್ಸ್‌ಗಾಗಿ Adreno GPU ನೊಂದಿಗೆ ಜೋಡಿಸಲಾದ Qualcomm Snapdragon 7+ Gen2 ಪ್ರೊಸೆಸರ್ನಿಂದ ಈ ಸ್ಮಾರ್ಟ್ಫೋನ್ ನಡೆಯುತ್ತದೆ. ಆಗಾಗಲೇ ಮೇಲೆ ಹೇಳಿರುವಂತೆ ಫೋನ್ 12GB RAM ಮತ್ತು 256GB UFS 3.1 ಸ್ಟೋರೇಜ್ ವರೆಗೆ ಪ್ಯಾಕ್ ಮಾಡುತ್ತದೆ. ಅದು ಮತ್ತಷ್ಟು ವಿಸ್ತರಿಸಬಹುದಾಗಿದೆ. 7GB ವಿಸ್ತರಿಸಬಹುದಾದ RAM ಇದೆ.
ಕೊನೆಯದಾಗಿ POCO F5 Android 13-ಆಧಾರಿತ MIUI 14 ಕಸ್ಟಮ್ ಸ್ಕಿನ್ ಅನ್ನು ಬಾಕ್ಸ್‌ನ ಹೊರಗೆ ಬೂಟ್ ಮಾಡುತ್ತದೆ. POCO F5 67W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. POCO F5 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾಗಳನ್ನು ಹೊಂದಿದೆ, OIS ಮತ್ತು EIS ಜೊತೆಗೆ 64MP ಪ್ರೈಮರಿ ಸೆನ್ಸರ್ ಕ್ಯಾಮೆರಾ ಸೆನ್ಸರ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸಾರ್. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ. ಜೊತೆಗೆ POCO F5 ನ ಸಂಪರ್ಕ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile