POCO F4 VS POCO F5: ಜನಪ್ರಿಯ ಪೊಕೊ ಕಂಪನಿ ಈಗ ತನ್ನ F ಸರಣಿಯಲ್ಲಿ POCO F4 5G ಅನ್ನು ಕಳೆದ ಜೂನ್ 2022 ರಂದು ಬಿಡುಗಡೆ ಮಾಡಿತ್ತು ಈಗ ಒಂದು ವರ್ಷದ ನಂತರ ಅದೇ ಸಮಯಕ್ಕೆ ಸರಿಯಾಗಿ ಅದೇ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್ಫೋನ್ POCO F5 ಅನ್ನು ಇದೇ ಮೇ 9 ರಂದು ಬಿಡುಗಡೆ ಮಾಡಿದೆ. ಈ ಪೊಕೊ (POCO) ಸ್ಮಾರ್ಟ್ ಫೋನ್ ಈಗಾಗಲೇ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದ್ದು ಈ ಫೋನ್ Qualcomm Snapdragon ಪ್ರೊಸೆಸರ್, 120Hz ನ ರಿಫ್ರೆಶ್ ದರದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್, ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಮತ್ತು ಹೆಚ್ಚಿನ ಫೀಚರ್‌ಗಳೊಂದಿಗೆ ಬರುತ್ತದೆ.
ಮೊದಲಿಗೆ Poco F4 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ರೇಟ್ ಮತ್ತು ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ. ಈ ಫೋನ್ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ HDR10 ಪ್ಲಸ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. Poco F5 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್‌ನೊಂದಿಗೆ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ 395 PPI ಡೆನ್ಸಿಟಿ ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಅನ್ನು ಒಳಗೊಂಡಿದೆ.
Poco F4 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ f/1.8 ಲೆನ್ಸ್‌ನೊಂದಿಗೆ ಬರುತ್ತದೆ. ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಫೋನ್ 20MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. Poco F5 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2MP ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೆ ಈ ಫೋನ್ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
Poco F4 5G ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ MIUI 13 ನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಮಾಲಿ-G610 MC6 GPU ಸಪೋರ್ಟ್ ಅನ್ನು ಪಡೆದಿದೆ. ಅಲ್ಲದೆ ಈ ಫೋನ್ ಫೋರ್ ಕಾರ್ಟೆಕ್ಸ್-A78 ಕೋರ್‌ಗಳನ್ನು ಒಳಗೊಂಡಿದೆ. Poco F5 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7 Gen 2 ಪ್ರೊಸೆಸರ್ ಅನ್ನು ಹೊಂದಿರುವ ದೇಶದ ಮೊದಲ ಫೋನ್ ಆಗಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಈ ಫೋನ್ ಲಭ್ಯವಿದೆ.
Poco F4 5G ಸ್ಮಾರ್ಟ್ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಬ್ಯಾಟರಿ ಕೇವಲ 38 ನಿಮಿಷಗಳಲ್ಲಿ 0% to 100% ಚಾರ್ಜ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. Poco F5 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, USB ಟೈಪ್-C ಪೋರ್ಟ್ ಸೇರಿವೆ.
Poco F4 5G ಸ್ಮಾರ್ಟ್ಫೋನ್ ನೆಬ್ಯುಲಾ ಗ್ರೀನ್ ಮತ್ತು ನೈಟ್ ಬ್ಲಾಕ್ ಕಲರ್‌ಗಳ ಆಯ್ಕೆಯಲ್ಲಿ ರೂ 27,999 ಬೆಲೆಯಲ್ಲಿ ಫ್ಲಿಪ್ಕಾರ್ಟ್ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. ಆದರೆ Poco F5 5G ಸ್ಮಾರ್ಟ್‌ಫೋನ್ ಕಾರ್ಬನ್ ಬ್ಲಾಕ್, ಸ್ನೋ ಸ್ಟಾರ್ಮ್ ವೈಟ್ ಮತ್ತು ಎಲೆಕ್ಟ್ರಿಕ್ ಬ್ಲೂ ಕಲರ್‌ಗಳ ಆಯ್ಕೆಯಲ್ಲಿ ರೂ 29,999 ರ ಬೆಲೆಯಲ್ಲಿ ಅದೇ ಫ್ಲಿಪ್ಕಾರ್ಟ್ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. ಒಟ್ಟಾರೆಯಾಗಿ ನೀವು ನೋಡಿದ ಮೇಲಿನ ಎಲ್ಲ ಆಯ್ಕೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದು ಬೆಸ್ಟ್ ಅಂಥ ನಮಗೆ ಅನಿಸುತ್ತೋ ಕಾಮೆಂಟ್ ಮಾಡಿ ತಿಳಿಸಿ. ಏಕೆಂದರೆ ನಿಮ್ಮ ಕಾಮೆಂಟ್ ಬೇರೆಯವರ ಖರೀದಿಯಲ್ಲಿ ಹೆಚ್ಚು ಸಹಕಾರಿಯಾಗಲಿದೆ.