ಹೊಸ POCO X2 ಸ್ಮಾರ್ಟ್ಫೋನ್’ಗೆ ಆಂಡ್ರಾಯ್ಡ್ 11 ಅಪ್ಡೇಟ್ ಖಚಿತ
64MP ಪ್ರೈಮರಿ ಕ್ಯಾಮೆರಾ ಸೋನಿ IMX686 ಸೆನ್ಸರ್ ಒಳಗೊಂಡಿರುವುದರಿಂದ ಇದೊಂದು ಕ್ಯಾಮೆರಾ ಸೆಂಟ್ರಿಕ್ ಫೋನಾಗಿದೆ
ಭಾರತದಲ್ಲಿ ಸ್ವತಂತ್ರವಾಗಿ ತಲೆ ಎತ್ತಿರುವ Xiaomi ವತಿಯ POCO ಕಂಪನಿ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ POCO X2 ಸ್ಮಾರ್ಟ್ಫೋನ್'ಗೆ Android 11 ಅಪ್ಡೇಟ್ ಅನ್ನು ಖಚಿತಪಡಿಸಿದೆ. ಈ ಸ್ಮಾರ್ಟ್ಫೋನ್ ಇದೇ ತಿಂಗಳು 4ನೇ ಫೆಬ್ರವರಿ 2020 ರಂದು ಬಿಡುಗಡೆಯಾಯಿತು. ಇದು POCO X2 POCO ನಿಮಗೆ ಬೇಕಾಗಿರುವುದೆಲ್ಲವನ್ನು ನೀಡಿದೆ ಎಂಬ ವಾಖ್ಯದೊಂದಿಗೆ ಇಂಟರ್ನಲ್ ಮತ್ತು ಆಧುನಿಕ ವಿನ್ಯಾಸದ ಸಂಯೋಜನೆಯೊಂದಿಗೆ ವಿಸ್ತರಿಸುತ್ತದೆ. ಈ ಹೊಸ POCO X2 ಪ್ರಸ್ತುತ ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯೊಂದಿಗೆ ರವಾನಿಸುತ್ತದೆ. ಅಂದರೆ POCOMIUI ನೊಂದಿಗೆ Android 10 ನಡೆಸುತ್ತದೆ. ಆದರೆ ತನ್ನ ಗ್ರಾಹಕರಿಗೆ ಮತ್ತಷ್ಟು ಅಡ್ವಾನ್ಸ್ ನೀಡಲು ನಿಷ್ಠಾವಂತ ಅಭಿಮಾನಿ ಮತ್ತು ಬಳಕೆದಾರರ ನೆಲೆಯನ್ನು ಹೊಂದಿಲ್ಲು Android 11 ಅಪ್ಡೇಟ್ ಅನ್ನು ಖಚಿತಪಡಿಸಿದೆ.
POCO X2 Display
ಈ ಬೆಲೆ ವಿಭಾಗದಲ್ಲಿ ಮೊಟ್ಟ ಮೊದಲ ಸ್ಮಾರ್ಟ್ಫೋನ್ 120Hz ಡಿಸ್ಪ್ಲೇ ರಿಫ್ರೆಶ್ ರೇಟ್ ಜೊತೆಗೆ 6.7 ಇಂಚಿನ FHD+ ಡಿಸ್ಪ್ಲೇಯನ್ನು 2400 x 1800 ಪಿಕ್ಸೆಲ್ ರೆಸುಲ್ಯೂಷನ್ 20:9 ಅಸ್ಪೆಟ್ ರೇಷುವಿನೊಂದಿಗೆ HDR 10 ಡಿಸ್ಪ್ಲೇಯನ್ನು ಒಳಗೊಂಡಿದೆ. ಪ್ರೊಟೆಕ್ಷನ್ಗಾಗಿ ಇದರ ಡಿಸ್ಪ್ಲೇ ಮೇಲೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಸಹ ನೀಡಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಸ್ಮಾರ್ಟ್ಫೋನಿನ ಡಿಸ್ಪ್ಲೇ ನಿಜಕ್ಕೂ ತುಂಬಾನೇ ಸ್ಮೂತ್ ಮತ್ತು ಹೆಚ್ಚು ಆಕರ್ಷಕ ಅನುಭವ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಏಕೆಂದರೆ ಈ ಫೀಚರ್ಗಳು ಸಾಮಾನ್ಯವಾಗಿ ಹೈ ಎಂಡ್ ಫೋನ್ಗಳಲ್ಲಿ ನೋಡಬವುದು.
POCO X2 Camera
ಈ ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ ಈ ಬಾರಿ ಹೆಚ್ಚಾಗಿಯೇ ಗಮನ ಹರಿಸಿದೆ. ಏಕೆಂದರೆ ಇದರಲ್ಲಿ ನಿಮಗೆ ಕ್ವಾಡ್ ಅಂದ್ರೆ ನಾಲ್ಕು 64MP + 8MP + 2MP + 2MP ಮಾದರಿಯ ಕ್ಯಾಮೆರಾ ಸೆಟಪ್ ನೋಡಲು ಸಿಗುತ್ತದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 64MP ಮೆಗಾಪಿಕ್ಸೆಲ್ ಸೋನಿ IMX686 ಸೆನ್ಸರ್ ಒಳಗೊಂಡಿದ್ದು ಇದೊಂದು ಕ್ಯಾಮೆರಾ ಸೆಂಟ್ರಿಕ್ ಫೋನ್ ಎನ್ನುವುದರಲ್ಲಿ ಬೇರೆ ಮಾತಿಲ್ಲ. ನಂತರ 8MP ಮೆಗಾಪಿಕ್ಸೆಲ್ f/2.2 ಅಪರ್ಚರ್ ಅಲ್ಟ್ರಾವೈಡ್ ಸೆನ್ಸರ್ ಮ್ಯಾಕ್ರೋ ಶಾಟ್ಗಳಿಗಾಗಿ 2MP ಮೆಗಾಪಿಕ್ಸೆಲ್ f/2.4 ಅಪರ್ಚರ್ ಸುಮಾರು 2cm ಕ್ಲೋಸರ್ ಶಾಟ್ಗಳನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಕೊನೆಯದಾಗಿ 2MP ಡೆಪ್ತ್ ಸೆನ್ಸರ್ f/2.4 ಅಪರ್ಚರ್ ಸಪೋರ್ಟ್ ಮಾಡುತ್ತದೆ. ಇದರ ಕ್ರಮವಾಗಿ ಫ್ರಂಟಲ್ಲಿ 20MP + 2MP ಹೊಂದಿದೆ.
POCO X2 Processor
ಇದರಲ್ಲಿ ಈಗಾಗಲೇ realme ತಮ್ಮ ಸ್ಮಾರ್ಟ್ಫೋನಗಳಲ್ಲಿ ಬಳಸಿರುವ ಅಂದ್ರೆ Realme X2 ಸ್ಮಾರ್ಟ್ಫೋನಲ್ಲಿ ಲಭ್ಯವಿರುವ ಅದೇ Qualcomm Snapdragon 730G ಪ್ರೊಸೆಸರ್ ಆಂಡ್ರಾಯ್ಡ್ 10.0 ಜೊತೆಗೆ MIUI 11 ನೀಡಲಾಗಿದೆ. ಇದು 2.2GHz ಕ್ಲಾಕ್ ಸ್ಪೀಡ್ ನೀಡುವುದರಿಂದಿಗೆ ಅಡ್ರಿನೊ 618 ಹೊಂದಿದೆ. ಜೊತೆಗೆ ಫೋಳನ್ನು ತಂಪಾಗಿಡಲು ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಸಹ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ವೇರಿಯಂಟ್ ರೂಪಾಂತರಗಳಲ್ಲಿ ಲಭ್ಯವಿದೆ 6GB ಮತ್ತು 8GB LPDDR4X RAM ಹೊಂದಿದ್ದರೆ ಇದರ ಕ್ರಮವಾಗಿ 64GB, 128GB ಮತ್ತು 256GB UFS 2.1 ಸ್ಟೋರೇಜ್ ಒಳಗೊಂಡಿದೆ.
POCO X2 Battery & Ports
ಇದರಲ್ಲಿ ಕೊನೆಯದಾಗಿ ನಿಮ್ಮ ಪೂರ್ತಿ ದಿನವನ್ನು ಕಳೆಯಲು ಹೈ ಕೆಪ್ಯಾಸಿಟಿ ಸಾಮರ್ಥ್ಯದ 4500mAh ಬ್ಯಾಟರಿ ನೀಡಲಾಗಿದೆ. ಅಲ್ಲದೆ ಇದರಲ್ಲಿ ನಿವಾಕ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಂಪನಿ ಬಾಕ್ಸ್ ಜೊತೆಯಲ್ಲೇ 27w ಸಪೋಟ್ ಮಾಡುವ ಹೊಸ ಫಾಸ್ಟ್ ಚಾರ್ಜ್ ಅಡಾಪ್ಟರ್ ನೀಡುತ್ತಿದೆ. ಇದರ ಕ್ರಮವಾಗಿ USB ಟೈಪ್ ಸಿ ಪೋರ್ಟ್ ಜೊತೆಗೆ ಪ್ರತ್ಯೇಕವಾಗಿ 3.5mm ಆಡಿಯೋ ಜಾಕ್ ಸಹ ನೀಡಲಾಗಿದೆ. ಫೋನಿನ ಎಡ ಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತುಇ ಫೇಸ್ ಅನ್ಲಾಕ್ ಫೀಚರ್ಗಳನ್ನು ನೀಡಲಾಗಿದೆ. ಇದರಲ್ಲಿ 4G dual SIM ಸಪೋರ್ಟ್ ಅಂದ್ರೆ ಎರಡು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೋ SD ಕಾರ್ಡ್ ಹಾಕುವ ಆಯ್ಕೆಯನ್ನು ನೀಡಲಾಗಿದೆ.
POCO X2 Price & Availability
ಈ ಹೊಸ ಸ್ಮಾರ್ಟ್ಫೋನ್ ಈಗಾಗಲೇ ತಿಳಿಸಿರುವ ಹಾಗೆ ಒಟ್ಟು ಮೂರು ವೇರಿಯಂಟ್ಗಳಲ್ಲಿ ಲಭ್ಯವಿದೆ. 6GB ಮತ್ತು 8GB LPDDR4X RAM ಹೊಂದಿದ್ದರೆ ಇದರ ಕ್ರಮವಾಗಿ 64GB, 128GB ಮತ್ತು 256GB UFS 2.1 ಸ್ಟೋರೇಜ್ ಒಳಗೊಂಡಿದೆ. ಇದರ ಮೊದಲ ವೇರಿಯಂಟ್ 6GB+64GB ಕೇವಲ ₹15,999 ರೂಗಳಲ್ಲಿ ಲಭ್ಯವಾದರೆ ಇದರ ಎರಡನೇಯದು 6GB+128GB ಕೇವಲ ₹16,999 ರೂಗಳಲ್ಲಿ ಬರುತ್ತದೆ. ಕೊನೆಯದಾಗಿ ಇದರ ಹೈ ಎಂಡ್ ಸ್ಮಾರ್ಟ್ಫೋನ್ 8GB ಮತ್ತು 256GB ₹19,999 ರೂಗಳಲ್ಲಿ ಲಭ್ಯವಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile