POCO C75 5G Launched in India: ಭಾರತದಲ್ಲಿ ಪೊಕೊ ಕಂಪನಿ ತನ್ನ ಲೇಟೆಸ್ಟ್ C ಸರಣಿಯಲ್ಲಿ ಹೊಸ POCO C75 5G ಫೋನ್ ಅನಾವರಣಗೊಳಿಸಿದೆ. ಕಂಪನಿ ಈ ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಅತಿ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ಸ್ಮಾರ್ಟ್ಫೋನ್ ಇಂದು 17ನೇ ಡಿಸೆಂಬರ್ 2024 ರಂದು ಸಂಜೆ 5:00 ಗಂಟೆಗೆ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಈ POCO C75 5G ಸ್ಮಾರ್ಟ್ಫೋನ್ 5160mAh ಬ್ಯಾಟರಿ ಮತ್ತು Sony ಕ್ಯಾಮೆರಾದೊಂದಿಗೆ ಕೇವಲ 7,999 ರೂಗಳಿಗೆ ಪರಿಚಯಿಸಿದ್ದು ಲೇಟೆಸ್ಟ್ ಫೀಚರ್ಗಳೊಂದಿಗೆ ಅನಾವರಣಗೊಳಿಸಿದೆ.
POCO C75 5G ವಿಶೇಷತೆಗಳನ್ನು ನೋಡುವುದಾದರೆ ಕಂಪನಿ ಇದರಲ್ಲಿ ನಿಮಗೆ 50MP ಕ್ಯಾಮೆರಾದೊಂದಿಗೆ Sony LYT-600 ಸೆನ್ಸರ್ ಮತ್ತು 5MP ಸೇಲ್ಫಿ ಕ್ಯಾಮೆರಾ ಮತ್ತು AMOLED ಡಿಸ್ಪ್ಲೇ ಅದ್ದೂರಿಯ ಬ್ರೈಟ್‌ನೆಸ್ ಜೊತೆಗೆ 5160mAh ಬ್ಯಾಟರಿಯನ್ನು ಹೊಂದಿದೆ. POCO C75 5G ಆಫರ್ ಬೆಲೆ ಮತ್ತು ಟಾಪ್ ಹೈಲೈಟ್ ಫೀಚರ್ಗಳೊಂದಿಗೆ ಎಲ್ಲವನ್ನು ಈ ಕೆಳಗೆ ಪಡೆಯಬಹುದು.
Also Read: Aadhaar Update Deadline: ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೊನೆ ದಿನ ಘೋಷಣೆ!
ನಿಮಗೆ ಈ POCO C75 5G ಸ್ಮಾರ್ಟ್ಫೋನ್ ಒಂದೇ ಒಂದು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಇದನ್ನು ನೀವು ಕೇವಲ ₹7,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಆದರೆ ನೀವು HDFC, SBI ಮತ್ತು ICICI ಬ್ಯಾಂಕ್ ಕಾರ್ಡ್ ಬಳಸಿಕೊಂಡು 1000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಇದರ ಮಾರಾಟವು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಮತ್ತು ಇತರ ಮಾಧ್ಯಮದ ಮೂಲಕ 19ನೇ ಡಿಸೆಂಬರ್ 2024 ರಂದು ಪಾಲುದಾರರಲ್ಲಿ ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ.
POCO C75 5G ಸ್ಮಾರ್ಟ್ಫೋನ್ 6.88 ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಜೊತೆಗೆ 600nits ಬ್ರೈಟ್‌ನೆಸ್ ಮತ್ತು ವಿಷನ್ ಬೂಸ್ಟರ್‌ನೊಂದಿಗೆ ಬರುತ್ತದೆ. POCO C75 5G ಸ್ಮಾರ್ಟ್ಫೋನ್ 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡಿದೆ. ಅಲ್ಲದೆ ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
POCO C75 5G ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್‌ನೊಂದಿಗೆ Snapdragon 4s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ರನ್ ಆಗುತ್ತದೆ. ಆದಾಗ್ಯೂ ಕಂಪನಿಯು 2 ವರ್ಷಗಳ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುತ್ತದೆ. ಫೋನ್ ಅನ್ನು ಪವರ್ ಮಾಡಲು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5160mAh ಬ್ಯಾಟರಿ ಇದೆ.
POCO C75 5G ಕ್ಯಾಮರಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸರ್ Ai ಕ್ಯಾಮೆರಾ ಮತ್ತು Sony ಸೆನ್ಸರ್ ಹೊಂದಿದ್ದು ಅತ್ಯುತ್ತಮ ಫೋಟೋಗ್ರಾಫಿಗಾಗಿ ಕೈ ತಟ್ಟಲೇಬೇಕು. ಅಲ್ಲದೆ ಎರಡನೆಯದಾಗಿ 2MP ಅಲ್ಟ್ರಾ-ವೈಡ್-ಆಂಗಲ್ನೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ನೀಡುತ್ತದೆ. ಸೆಲ್ಫಿಗಾಗಿ ಇದು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಪ್ರೈಮರಿ ಕ್ಯಾಮೆರಾವು 4K ವೀಡಿಯೊ ರೆಕಾರ್ಡಿಂಗ್ 30fps ಬೆಂಬಲದೊಂದಿಗೆ ಬರುತ್ತದೆ.