POCO C75 5G First Sale Today: ಭಾರತದಲ್ಲಿ ಪೊಕೊ (POCO) ಕಂಪನಿ ಎರಡು ದಿನಗಳ ಹಿಂದೆಯಷ್ಟೇ ತನ್ನ ಈ ಲೇಟೆಸ್ಟ್ POCO C75 5G ಸ್ಮಾರ್ಟ್ಫೋನ್ ಅನ್ನು ಫುಲ್ ಲೋಡೆಡ್ ಫೀಚರ್ಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಲಭ್ಯವಿರುವ 5G ಸ್ಮಾರ್ಟ್ಫೋನ್ ವಿಭಾಗದಲ್ಲಿ ಅಂದ್ರೆ ಕೇವಲ ₹7,999 ರೂಗಳಿಗೆ ಅಧಿಕೃತವಾಗಿ ಬಿಡುಗಡೆಗೊಳಿಸಿತ್ತು. ಪ್ರಸ್ತುತ ಇಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಈ ಲೇಟೆಸ್ಟ್ POCO C75 5G ಸ್ಮಾರ್ಟ್ಫೋನ್ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಆಫರ್ ಬೆಲೆ ಮತ್ತು ಟಾಪ್ ಹೈಲೈಟ್ ಫೀಚರ್ ಮತ್ತು ವಿಶೇಷಣಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.
ಈಗಾಗಲೇ ಮೇಲೆ ತಿಳಿಸಿರುವಂತೆ ಈ ಈ ಲೇಟೆಸ್ಟ್ POCO C75 5G ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗಲಿದ್ದು ಇದರ ಆಫರ್ ಮತ್ತು ಬೆಲೆಗಳ ಬಗ್ಗೆ ತಿಳಿಯಿರಿ. ಈ ಸ್ಮಾರ್ಟ್ಫೋನ್ ಪ್ರಸ್ತುತ ಒಂದೇ ಒಂದು ರೂಪಾಂತರ ಅಂದ್ರೆ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದೊಂದಿಗೆ ಮಾತ್ರ ಲಭ್ಯವಿದ್ದು ಇದನ್ನು ಕೇವಲ ₹7,999 ರೂಗಳಿಗೆ ಬಿಡುಗಡೆ ಮಾಡಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ನೀವು Enchanted Green, Aqua Bliss ಮತ್ತು Silver Stardust ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.
POCO C75 5G ಸ್ಮಾರ್ಟ್ಫೋನ್ 6.88 ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಜೊತೆಗೆ 600nits ಬ್ರೈಟ್‌ನೆಸ್ ಮತ್ತು ವಿಷನ್ ಬೂಸ್ಟರ್‌ನೊಂದಿಗೆ ಬರುತ್ತದೆ. POCO C75 5G ಸ್ಮಾರ್ಟ್ಫೋನ್ 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ನೀಡಿದೆ. ಅಲ್ಲದೆ ಇದು ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ.
POCO C75 5G ಕ್ಯಾಮರಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಸ್ಮಾರ್ಟ್ಫೋನ್ 50MP ಪ್ರೈಮರಿ ಸೆನ್ಸರ್ Ai ಕ್ಯಾಮೆರಾ ಮತ್ತು Sony ಸೆನ್ಸರ್ ಹೊಂದಿದ್ದು ಅತ್ಯುತ್ತಮ ಫೋಟೋಗ್ರಾಫಿಗಾಗಿ ಕೈ ತಟ್ಟಲೇಬೇಕು. ಅಲ್ಲದೆ ಎರಡನೆಯದಾಗಿ Auxiliary Lens ಜೊತೆಗೆ ಬರುತ್ತದೆ. ಅಲ್ಲದೆ ಫೋನ್ ಸೆಲ್ಫಿಗಾಗಿ ಇದು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಪ್ರೈಮರಿ ಕ್ಯಾಮೆರಾವು 4K ವೀಡಿಯೊ ರೆಕಾರ್ಡಿಂಗ್ 30fps ಬೆಂಬಲದೊಂದಿಗೆ ಬರುತ್ತದೆ.
Also Read: Rs 42.4 Lakh Loses: ಟೆಲಿಗ್ರಾಂನಲ್ಲಿ ಅಕೌಂಟ್ ತೆರೆಯಲು ಹೇಳಿ 42.4 ಲಕ್ಷ ಉಡಾಯಿಸಿದ ವಂಚಕರು! ಆಗಿದ್ದೇನು ಗೊತ್ತಾ?
POCO C75 5G ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್‌ನೊಂದಿಗೆ Snapdragon 4s Gen 2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಬಾಕ್ಸ್ ಹೊರಗೆ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ರನ್ ಆಗುತ್ತದೆ. ಆದಾಗ್ಯೂ ಕಂಪನಿಯು 2 ವರ್ಷಗಳ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುತ್ತದೆ. ಫೋನ್ ಅನ್ನು ಪವರ್ ಮಾಡಲು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5160mAh ಬ್ಯಾಟರಿ ಇದೆ.