POCO C65: ಕೈಗೆಟಕುವ ಬೆಲೆಗೆ 50MP ಕ್ಯಾಮೆರಾದ Attractive ಪೊಕೊ ಫೋನ್ ಲಾಂಚ್ | Tech News

Updated on 15-Dec-2023
HIGHLIGHTS

ಭಾರತೀಯ ಮಾರುಕಟ್ಟೆಯಲ್ಲಿ ಪೊಕೊ ಬಜೆಟ್ ವಿಭಾದಲ್ಲಿ ಹೊಸ POCO C65 ಸ್ಮಾರ್ಟ್ಫೋನ್ ಬಿಡುಗಡೆ

POCO C65 ಬೆಸ್ಟ್ ಲುಕ್ ಮತ್ತು ವಿಶ್ವಾಸಾರ್ಹ ಫೀಚರ್ಗಳೊಂದಿಗೆ ಕೇವಲ ₹8,499 ರೂಗಳಿಗೆ ಬಿಡುಗಡೆಗೊಳಿಸಿದೆ.

POCO C65 in India: ಭಾರತೀಯ ಮಾರುಕಟ್ಟೆಯಲ್ಲಿ ಇಂದು ಪೊಕೊ ಕಂಪನಿಯ ಹೊಸ ಮತ್ತು ಬಜೆಟ್ ಸ್ಮಾರ್ಟ್ಫೋನ್ ಲೇಟೆಸ್ಟ್ POCO C65 ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ ಬೆಸ್ಟ್ ಬಜೆಟ್ ವಿಭಾಗಕ್ಕೆ ಸೇರ್ಪಡೆಯಾಗಿದ್ದು ಉತ್ತಮ ಲುಕ್ ಮತ್ತು ವಿಶ್ವಾಸಾರ್ಹ ಫೀಚರ್ಗಳೊಂದಿಗೆ ಭಾರತದಲ್ಲಿ ಕೇವಲ ₹8,499 ರೂಗಳಿಗೆ ಬಿಡುಗಡೆಯಾಗಿದೆ. ಈ ಹೊಸ POCO C65 ಸ್ಮಾರ್ಟ್ಫೋನ್ ಮೀಡಿಯಾಟೆಕ್ ಚಿಪ್‌ಸೆಟ್‌ನೊಂದಿಗೆ ಆಂಡ್ರಾಯ್ಡ್ 13 ಅನ್ನು ಪ್ಯಾಕ್ ಮಾಡುತ್ತದೆ. ಫೋನ್ ನಾಚ್-ಫ್ರೀ ವಾಟರ್ ಡ್ರಾಪ್ ವಿನ್ಯಾಸದೊಂದಿಗೆ ಸಂಪೂರ್ಣವಾಗಿದ್ದು 6.74 ಇಂಚಿನ HD+ 90Hz ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ.

Also Read: Pinned Message Feature: ಇನ್ಮೇಲೆ Important ಚಾಟ್ ಮಿಸ್ ಆಗಲ್ಲ! ಬಂದೆ ಬಿಡ್ತು ಜಬರ್ದಸ್ತ್ ಫೀಚರ್

ಭಾರತದಲ್ಲಿ POCO C65 ವಿಶೇಷಣಗಳು

ಫೋನ್ 6.74 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. POCO C65 ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಇದು ಸುಗಮ ಸ್ಕ್ರೋಲಿಂಗ್ ಮತ್ತು ತ್ವರಿತ ಸ್ಪರ್ಶ ಪ್ರತಿಕ್ರಿಯೆಗಳನ್ನು ಖಚಿತಪಡಿಸುತ್ತದೆ. ಮತ್ತು ನಿಮ್ಮ ಕಣ್ಣುಗಳನ್ನು ರಕ್ಷಿಸಲು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಇದು ಪ್ರಮಾಣೀಕರಣಗಳನ್ನು ಪಡೆದುಕೊಂಡಿದೆ. ಇದರ ಬಲವಾದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಮತ್ತು ಸ್ಪ್ಲಾಶ್ ಪ್ರತಿರೋಧವು ಅದನ್ನು ಬಾಳಿಕೆ ಬರುವಂತೆ ಮಾಡುತ್ತದೆ.

ಭಾರತದಲ್ಲಿ POCO C65 ಕ್ಯಾಮೆರಾ ವಿವರ

ಈ POCO C65 ಡ್ಯೂಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಮೊದಲನೆಯದು 50MP AI ಟ್ರಿಪಲ್ ರಿಯರ್ ಕ್ಯಾಮೆರಾ f/1.8 ಅಪರ್ಚರ್ನೊಂದಿಗೆ ಬಂದ್ರೆ ಕ್ಲೋಸ್ ಅಪ್‌ಗಳಿಗಾಗಿ 2MP ಮ್ಯಾಕ್ರೋ f/2.4 ಲೆನ್ಸ್‌ನೊಂದಿಗೆ ಬರುತ್ತದೆ. ಹಿಂಬದಿಯ ಕ್ಯಾಮೆರಾವು ವಿಶಾಲವಾದ ಅಪರ್ಚರ್ ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಇದು ಸ್ಪಷ್ಟ ಮತ್ತು ವಿವರವಾದ ಫೋಟೋಗಳನ್ನು ನೀಡುತ್ತದೆ. ಫೋನ್ ಸೆಲ್ಫಿಗಳು ಮತ್ತು ವೀಡಿಯೋ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮರಾ ಉತ್ತಮ ಶಾಟ್‌ಗಳನ್ನು ಖಾತ್ರಿಗೊಳಿಸುತ್ತದೆ. ಫಿಲ್ಟರ್‌ಗಳು, ನೈಟ್ ಮೋಡ್ ಮತ್ತು AI ಪೋರ್ಟ್ರೇಟ್ ಮೋಡ್‌ನಂತಹ ಫೀಚರ್ ಹೊಂದಿದೆ. ಇದು ನಿಮ್ಮ ಫೋಟೋಗಳನ್ನು ಅದ್ಭುತವಾಗಿ ಕಾಣುವಂತೆ ಮಾಡುತ್ತದೆ.

Is POCO C65 4G or 5G?

ಪೊಕೊದ ಈ ಸ್ಮಾರ್ಟ್ಫೋನ್ MediaTek Helio G85 ಚಿಪ್‌ಸೆಟ್‌ನಲ್ಲಿ ಚಾಲನೆಯಲ್ಲಿರುವ POCO C65 ಸ್ಮಾರ್ಟ್ಫೋನ್ 4G / 3G / 2G ನೆಟ್ವರ್ಕ್ ಬ್ಯಾಂಡ್ಗಳನ್ನು ಬೆಂಬಲಿಸುತ್ತದೆ. ಫೋನ್ ಡ್ಯೂಯಲ್ ನ್ಯಾನೊ ಸಿಮ್ ಕಾರ್ಡ್‌ಗಳನ್ನು ಬೆಂಬಲಿಸುತ್ತದೆ. ಮೈಕ್ರೊ SD ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್ ವಿಸ್ತರಿಸಲು ಅನುಮತಿಸುತ್ತದೆ. ಕೊನೆಯದಾಗಿ 5000mAh ಬ್ಯಾಟರಿಯನ್ನು ಹೊಂದಿದ್ದು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ತ್ವರಿತವಾಗಿ ಚಾರ್ಜ್ ಮಾಡಬಹುದು. ಫೋನ್ 10W ಸಿ-ಟೈಪ್ ಚಾರ್ಜರ್‌ನೊಂದಿಗೆ ಬರುತ್ತದೆ. ಜೊತೆಗೆ ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಬಳಸಿಕೊಂಡು ಅನ್‌ಲಾಕ್ ಮಾಡುವುದು ಸುಲಭ ಹೆಚ್ಚುವರಿ ಭದ್ರತೆ ಮತ್ತು ತ್ವರಿತ ಪ್ರವೇಶವನ್ನು ನೀಡುತ್ತದೆ.

ಭಾರತದಲ್ಲಿ ಪೊಕೊ C65 ಬೆಲೆ ಮತ್ತು ಲಭ್ಯತೆಯ ವಿವರಗಳು:

4GB RAM ಮತ್ತು 128GB ಸ್ಟೋರೇಜ್: ₹8,499 ರೂಗಳು
6GB RAM ಮತ್ತು 128GB ಸ್ಟೋರೇಜ್: ₹9,499 ರೂಗಳು
8GB RAM ಮತ್ತು 256GB ಸ್ಟೋರೇಜ್: ₹10,999 ರೂಗಳು

POCO C65 ನ 4GB + 128GB ಮಾದರಿಯು ರೂ 8,499 ರಿಂದ ಪ್ರಾರಂಭವಾಗುತ್ತದೆ. ಈ ಸ್ಮಾರ್ಟ್ಫೋನ್ ನಿಮಗೆ ಲೈಮ್ ಬ್ಲೂ ಮತ್ತು ಮ್ಯಾಟ್ ಬಾಸಿಲ್ ಬ್ಲಾಕ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಈ 4G ಸ್ಮಾರ್ಟ್‌ಫೋನ್‌ನ ಮೊದಲ ಮಾರಾಟವು 18ನೇ ಡಿಸೆಂಬರ್ 2023 ರಿಂದ ಫ್ಲಿಪ್ಕಾರ್ಟ್ ಮತ್ತು ಹತ್ತಿರದ Xiaomi ಅಂಗಡಿಗಳಲ್ಲಿ ಪಡೆಯಬಹುದು. ಆಸಕ್ತ ಖರೀದಿದಾರರು ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ ರೂ 1,000 ರಿಯಾಯಿತಿಯನ್ನು ಪಡೆಯಬಹುದು. ಇದರ ನಂತರ ಇದರ ಆರಂಭಿಕ ಬೆಲೆ ಕೇವಲ ₹7,499 ರೂಗಳಾಗುತ್ತವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :