ಭಾರತದಲ್ಲಿ ಪ್ರತಿ ತಿಂಗಳು ಹತ್ತಾರು ಸ್ಮಾರ್ಟ್‌ಫೋನ್‌ಗಳು ವಿವಿಧ ಬೆಲೆ ಮತ್ತು ಫೀಚರ್ಗಳೊಂದಿಗೆ ಬಿಡುಗಡೆಯಾಗುವುದನ್ನು ನೀವು ಕಾಣಬಹುದು. POCO C61 vs REDMI 13C ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದೇ ರೀತಿಯ ಸುಮಾರು 8000 ರೂಗಳ ಬೆಲೆಯೊಂದಿಗೆ ಬರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು ವಿಶಿಷ್ಟ ಡಿಸ್ಪ್ಲೇ, ಕ್ಯಾಮೆರಾ, ಬ್ಯಾಟರಿ ಮತ್ತು ಪ್ರೊಸೆಸರ್ ಜೊತೆಗೆ ಲೇಟೆಸ್ಟ್ ಫೀಚರ್‌ಗಳನ್ನು ಹೊಂದಿರುವ ಈ ಲೇಟೆಸ್ಟ್ POCO C61 vs REDMI 13C ಸ್ಮಾರ್ಟ್‌ಫೋನ್ ನಡುವಿನ ವ್ಯತ್ಯಾಸಗಳೇನು ತಿಳಿಯೊಣ.
POCO C61 vs REDMI 13C ಸ್ಮಾರ್ಟ್‌ಫೋನ್ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲು ಕಷ್ಟಕರವಾಗಿದ್ದರೆ ಟಾಪ್ 5 ಫೀಚರ್ ಹೋಲಿಕೆ ಮಾಡಿ ಇವುಗಳ ಬೆಲೆಗೆ ಯಾವುದು ಬೆಸ್ಟ್ ನೀವೇ ಕಾಮೆಂಟ್ ಮಾಡಿ ತಿಳಿಸಬಹುದು. ಈ POCO C61 vs REDMI 13C ಎರಡು ಸ್ಮಾರ್ಟ್‌ಫೋನ್‌ಗಳ ಟಾಪ್ 5 ಫೀಚರ್ ಮತ್ತು ಬೆಲೆಯೊಂದಿಗೆ ಇವುಗಳಲ್ಲಿ ಯಾವುದು ಕಾಸಿಗೆ ತಕ್ಕ ಕಜ್ಜಾಯವೆಂದು ತಿಳಿಯೋಣ.
Also Read: ಒಮ್ಮೆ Reliance Jio ಪ್ಲಾನ್ ರಿಚಾರ್ಜ್ ಮಾಡ್ಕೊಂಡ್ರೆ Unlimited 5G ಮತ್ತು ಉಚಿತ OTT ಪ್ರಯೋಜನ 3 ತಿಂಗಳಿಗೆ ಲಭ್ಯ!
POCO C61 ಸ್ಮಾರ್ಟ್ಫೋನ್ 6.71 ಇಂಚಿನ ಫುಲ್ IPS LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 720 x 1650 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 268 PPI ಡೆನ್ಸಿಟಿ ಅನ್ನು ಹೊಂದಿದೆ. REDMI 13C ಫೋನ್ 90Hz ರಿಫ್ರೆಶ್ ದರ ಮತ್ತು 450 nits ಗರಿಷ್ಠ ಬ್ರೈಟ್‌ನೆಸ್ ಜೊತೆಗೆ 6.74 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಈ ಎರಡು ಸ್ಮಾರ್ಟ್ಫೋನ್ ಡಿಸ್ಪ್ಲೇ ಪ್ರೊಟೆಕ್ಷನ್ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಹೊಂದಿವೆ.
POCO C61 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8MP ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2MP ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 5MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ. REDMI 13C ಸ್ಮಾರ್ಟ್ಫೋನ್ 50MP ಪ್ರೈಮರಿ ಶೂಟರ್ ಅನ್ನು 2MP ಮ್ಯಾಕ್ರೋ ಸೆನ್ಸರ್ ನಿಂದ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ ಫೋನ್ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
POCO C61 ಸ್ಮಾರ್ಟ್ಫೋನ್ ಆಕ್ಟಾ-ಕೋರ್ Mediatek Helio G36 ಪ್ರೊಸೆಸರ್ ಅನ್ನು ಹೊಂದಿದೆ. ಇದು 6GB ವರೆಗೆ ಮೆಮೊರಿ ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೊತೆಗೆ Android 14 ಆಧರಿಸಿದ MIUI ಸ್ಕಿನ್ ಅನ್ನು ಹೊಂದಿದೆ. REDMI 13C ಮೀಡಿಯಾ ಟೆಕ್ Helio G85 ಪ್ರೊಸೆಸರ್ನಿಂದ ನಡೆಸಲ್ಪಡುತ್ತದೆ. ಇದು 8GB RAM ಮತ್ತು 256GB ಸ್ಟೋರೇಜ್ ಸ್ಪೇಸ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ಅನ್ನು ರನ್ ಮಾಡುತ್ತದೆ.
POCO C61 ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು USB ಟೈಪ್-C ಕನೆಕ್ಟರ್‌ನಲ್ಲಿ 10W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. REDMI 13C ಸ್ಮಾರ್ಟ್ಫೋನ್ 18W ಡಾರ್ಟ್ ಚಾರ್ಜ್ ತಂತ್ರಜ್ಞಾನದೊಂದಿಗೆ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಬ್ಯಾಟರಿಯನ್ನು ಕೇವಲ 31 ನಿಮಿಷಗಳಲ್ಲಿ 50% ಪ್ರತಿಶತ ಮತ್ತು ಕೇವಲ 70% ನಿಮಿಷಗಳಲ್ಲಿ 100% ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು Realme ಹೇಳುತ್ತದೆ.
POCO C61 ನಾರ್ವೆ ಬ್ಲೂ ಮತ್ತು ಪೆಸಿಫಿಕ್ ನೈಟ್ ಕಲರ್‌ಗಳ ಆಯ್ಕೆಯಲ್ಲಿ ರೂ ₹6,999 ಬೆಲೆಯಲ್ಲಿ Flipkart ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. REDMI 13C ಹೈಪರ್ ಬ್ಲೂ ಮತ್ತು ಹೈಪರ್ ಬ್ಲಾಕ್ ಕಲರ್‌ಗಳ ಆಯ್ಕೆಯಲ್ಲಿ ₹7,799 ಬೆಲೆಯಲ್ಲಿ ಆನ್ಲೈನ್ Flipkart ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.