ಭಾರತದಲ್ಲಿ ಕೈಗೆಟುವ ಬೆಲೆಗೆ POCO C61ಸ್ಮಾರ್ಟ್ಫೋನ್ ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ನೀವು ಇದೀಗ Poco ಇಂಡಿಯಾದ ವೆಬ್‌ಸೈಟ್‌ಗೆ ಹೋಗಿ ಪುಟವನ್ನು ತೆರೆದರೆ ಈ ಹೊಸ POCO C61 ಸ್ವಲ್ಪಮಟ್ಟಿಗೆ ಬೆಸ್ಟ್ ಸೆಲ್ಲರ್ ಎಂದು ನೀವು ಕಂಡುಕೊಳ್ಳಬಹುದು. ಯಾಕೇಂದರೆ ಪೊಕೋ ಹೇಳುವಂತೆ ಪುಟದಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡಿದೆ. POCO C61 ಲೇಟೆಸ್ಟ್ ಫೀಚರ್ಗಳೊಂದಿಗೆ ದೊಡ್ಡ ಬ್ಯಾಟರಿ, ಡಿಸ್ಪ್ಲೇ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ಗೆ ಫಾಸ್ಟ್ ಪ್ರೊಸೆಸರ್ ಅನ್ನು ಸೇರಿಸಿ ಖರೀದಿದಾರರು ಇದರ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದು ಇದರ ಟಾಪ್ 5 ಫೀಚಗಳನ್ನು ಪರಿಶೀಲಿಸಿ!
Also Read: ವಾಟ್ಸಾಪ್‌ನಲ್ಲಿ ಸರಿಯಾದ Emoji Search ಮಾಡಲು ಈ ಫೀಚರ್ ಹೆಚ್ಚು ಪ್ರಯೋಜನಕಾರಿ | Tech News
ಫೋನ್ 6.71 ಇಂಚಿನ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಫೋನ್ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಫೋನ್ LCD ಡಾಟ್ ಡ್ರಾಪ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಫೋನ್‌ನಲ್ಲಿ ನೀಡಲಾಗಿದೆ. ಇದರ ಟಚ್ ಸ್ಯಾಂಪ್ಲಿಂಗ್ ದರವು 180Hz ಆಗಿದೆ. ಇದು ಫೋನ್ ಅನ್ನು ನಿರ್ವಹಿಸುವಾಗ ಸುಗಮ ಅನುಭವವನ್ನು ನೀಡುತ್ತದೆ. ಹೊಳಪು 500 ನಿಟ್‌ಗಳು ಅಂತಹ ಪರಿಸ್ಥಿತಿಯಲ್ಲಿ ಫೋನ್ ಅನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಳಸುವುದರಲ್ಲಿ ಯಾವುದೇ ತೊಂದರೆಗಳಿಲ್ಲ. ಒಟ್ಟಾರೆಯಾಗಿ ಫೋನ್‌ನ ಡಿಸ್‌ಪ್ಲೇ ಉತ್ತಮವಾಗಿದೆ. ಫೋನ್ ಉತ್ತಮ ರಕ್ಷಣೆಯೊಂದಿಗೆ ಪ್ರಬಲ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
ಕ್ಯಾಮೆರಾಕ್ಕೆ ಸಂಬಂಧಿಸಿದಂತೆ POCO C61 8MP AI ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಸೆಲ್ಫಿಗಳಿಗಾಗಿ 5MP ಫ್ರಂಟ್ ಶೂಟರ್ ಅನ್ನು ನೀಡುತ್ತದೆ. ಫೋನ್ ಇದರ ಫೀಚರ್ಗಳಿಗೆ ಸಂಬಂಧಿಸಿದಂತೆ ವೈಶಿಷ್ಟ್ಯಗಳು AI ಪೋರ್ಟ್ರೇಟ್ ಮೋಡ್, ಫೋಟೋ ಮೋಡ್, ಟೈಮ್ಡ್ ಬರ್ಸ್ಟ್ ಮತ್ತು HDR ಮುಂತಾದ ವಿವಿಧ ವಿಧಾನಗಳನ್ನು ಒಳಗೊಂಡಿವೆ.
ಫೋನ್ ನಿಮಗೆ MediaTek Helio G36 ಚಿಪ್‌ಸೆಟ್ ಬೆಂಬಲವನ್ನು ಫೋನ್‌ನಲ್ಲಿ ನೀಡಲಾಗಿದೆ. ಇದು 12nm ಪ್ರಕ್ರಿಯೆ ತಂತ್ರಜ್ಞಾನವನ್ನು ಹೊಂದಿರುವ ಪ್ರೊಸೆಸರ್ ಆಗಿದೆ. ಇದು 4GB RAM ಮತ್ತು 6GB RAM ಎಂಬ ರಾಡು ವೇರಿಯೆಂಟ್ ಬೆಂಬಲದೊಂದಿಗೆ ಬರುತ್ತದೆ. ಇದು ಆರಂಭಿಕ 4GB ಮತ್ತು 5GB ವರ್ಚುವಲ್ RAM ಬೆಂಬಲವನ್ನು ಹೊಂದಿದೆ. ಫೋನ್‌ನ ಮೆಮೊರಿಯನ್ನು 1TB ವರೆಗೆ ಹೆಚ್ಚಿಸಬಹುದು. ನಾವು ಪ್ರೊಸೆಸರ್ನ ಕಾರ್ಯಕ್ಷಮತೆಯಲ್ಲಿ Android 14 ನಿಮಗೆ ಯಾವುದೇ ಸಮಸ್ಯೆಗಳನ್ನು ಕಾಣಲು ಸಾಧ್ಯವಿರೋದಿಲ್ಲಾ.
POCO C61 ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಫೋನ್ 10W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಫೋನ್ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 2 ಗಂಟೆಗಳು ತೆಗೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ Poco C61 ಸ್ಮಾರ್ಟ್‌ಫೋನ್ ಅನ್ನು ಇಡೀ ದಿನ ಆರಾಮವಾಗಿ ಬಳಸಬಹುದು.
POCO C61ಸ್ಮಾರ್ಟ್ಫೋನ್ ಒಟ್ಟಾರೆಯಾಗಿ 2 ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 7,499 ಮತ್ತು ಕ್ರಮವಾಗಿ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 8,499 ರೂಗಳಾಗಿದೆ. ಆದರೆ ಕಂಪನಿ ಇದರ ಬಿಡುಗಡೆಯ ಭಾಗವಾಗಿ ನಿಮಗೆ ಮಾರಾಟದ ಮೊದಲ ದಿನದಂದು ₹500 ಕೂಪನ್ ರಿಯಾಯಿತಿಯನ್ನು ಸಹ ನೀಡುತ್ತಿದೆ. ಸ್ಮಾರ್ಟ್ಫೋನ್ ಮಿಸ್ಟಿಕಲ್ ಗ್ರೀನ್, ಎಥೆರಿಯಲ್ ಬ್ಲೂ ಮತ್ತು ಡೈಮಂಡ್ ಡಸ್ಟ್ ಬ್ಲ್ಯಾಕ್ ಬಣ್ಣಗಳಲ್ಲಿ ಬಿಡುಗಡೆಯಾಗಿದ್ದು ಈ POCO C61ಸ್ಮಾರ್ಟ್ಫೋನ್ ಮಾರ್ಚ್ 28 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12:00 ಗಂಟೆಗೆ ಮಾರಾಟವಾಗಲಿದೆ.