Poco C51 Vs Nokia C12 Plus: ಫೋನ್ಗಳ ಟಾಪ್ 5 ಫೀಚರ್ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!

Poco C51 Vs Nokia C12 Plus: ಫೋನ್ಗಳ ಟಾಪ್ 5 ಫೀಚರ್ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!
HIGHLIGHTS

Poco ಕಂಪನಿಯ ಸ್ಮಾರ್ಟ್‌ಫೋನ್ ತನ್ನ ಬಜೆಟ್ ಹಾಗೂ ಮಿಡ್ರೇಂಜ್ನಿಂದಲೆ ಸದ್ದು ಮಾಡುತ್ತಿದೆ.

ಕಡಿಮೆ ಬಜೆಟ್ ವಿಭಾಗದಲ್ಲಿ Nokia ತನ್ನ ಸಿ-ಸರಣಿಯ ಸ್ಮಾರ್ಟ್ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 10W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

Poco C51 Vs Nokia C12 Plus: ಇಂದಿನ ಡಿಜಿಟಲ್ ಯುಗದಲ್ಲಿ ಹಲವು ಮಾದರಿಯ ಹೊಸ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇದೆ. ವಿಭಿನ್ನ ಮಾದರಿಯ ಫೀಚರ್ ಗಳೊಟ್ಟಿಗೆ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುವ ಮೂಲಕ ಒಂದು ಫೋನ್ ಗಿಂತ ಇನ್ನೊಂದು ಕಡಿಮೆ ಇಲ್ಲ ಎನ್ನುವ ರೀತಿ ಕಾಂಪಿಟೇಷನ್ ನೀಡುತ್ತಿವೆ. ಇವುಗಳಲ್ಲಿ Poco ಬ್ರ್ಯಾಂಡ್ ಕೂಡ ಒಂದಾಗಿದ್ದು ಈ ಕಂಪನಿ ತನ್ನ ಬಜೆಟ್ ಹಾಗೂ ಮಿಡ್ರೇಂಜ್ನಿಂದಲೆ ಸದ್ದು ಮಾಡುತ್ತಿದೆ. ಇದೀಗ Poco C51 ಎನ್ನುವ ಹೊಸ ಸ್ಮಾರ್ಟ್‌ಫೋನ್ ಮೂಲಕ ಈ ಕಂಪನಿ ಸಂಚಲನ ಸೃಷ್ಟಿಸಿದೆ.

Poco C51 Vs Nokia C12 Plus  ಡಿಸ್ಪ್ಲೇ

Poco C51 ಸ್ಮಾರ್ಟ್‌ಫೋನ್ 6.52 ಇಂಚಿನ HD+ IPS LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ರೆಸಲ್ಯೂಶನ್ ಹಾಗೂ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ 269 PPI ಡೆನ್ಸಿಟಿ ಅನ್ನು ಹೊಂದಿದ್ದು ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ. ನಂತರ Nokia C12 Plus ಸ್ಮಾರ್ಟ್‌ಫೋನ್ 6.3 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1520 × 720 ಪಿಕ್ಸೆಲ್ ರೆಸಲ್ಯೂಶನ್ ಹಾಗೂ 60 Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ 267 PPI ಡೆನ್ಸಿಟಿ ಅನ್ನು ಹೊಂದಿದ್ದು ವಾಟರ್ಡ್ರಾಪ್ ನಾಚ್ನೊಂದಿಗೆ ಕೂಡಿದೆ.

Poco C51 Vs Nokia C12 Plus ಕ್ಯಾಮೆರಾ

Poco C51 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8MP ಸೆನ್ಸಾರ್‌ ಹೊಂದಿದ್ದು, LED ಫ್ಲ್ಯಾಷ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ಸೆಲ್ಫಿಗಾಗಿ 5MP ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ. Nokia C12 Plus ಸ್ಮಾರ್ಟ್ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8MP ಸೆನ್ಸಾರ್ ಹೊಂದಿದ್ದು, ಅಟೋಫೋಕಸ್ ಫೀಚರ್ ಮತ್ತು LED ಫ್ಲ್ಯಾಶ್ ಅನ್ನು ಸಹ ನೀಡಲಾಗಿದೆ.  ಅಲ್ಲದೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 5MP ಮುಂಭಾಗದ ಕ್ಯಾಮೆರಾ ಲಭ್ಯವಿದೆ.  

Poco C51 Vs Nokia C12 Plus ಪ್ರೊಸೆಸರ್

Poco C51 ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಹಿಲಿಯೋ G36 12nm ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 (Go Edition) ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. Nokia C12 Plus ಸ್ಮಾರ್ಟ್‌ಫೋನ್ 1.6 MHz ಆಕ್ಟಾ-ಕೋರ್ ಯುನಿಸೋಕ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 (Go Edition) ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 2GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Poco C51 Vs Nokia C12 Plus ಬ್ಯಾಟರಿ

Poco C51 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 10W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. Nokia C12 Plus ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

Poco C51 Vs Nokia C12 Plus ಬೆಲೆ

Poco C51 ಪವರ್ ಬ್ಲಾಕ್ ಮತ್ತು ರಾಯಲ್ ಬ್ಲೂ ಕಲರ್ಗಳ ಆಯ್ಕೆಯಲ್ಲಿ ರೂ 8,499 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Nokia C12 Plus ಲೈಟ್ ಮಿಂಟ್, ಚಾರ್ಕೋಲ್ ಮತ್ತು ಡಾರ್ಕ್  ಸಯಾನ್  ಕಲರ್ಗಳ ಆಯ್ಕೆಯಲ್ಲಿ ರೂ 7,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo