ಟೆಕ್ ಕಂಪನಿ ಪೊಕೊ ಬಜೆಟ್ ಶ್ರೇಣಿಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಇಂದು ಅಂದ್ರೆ 6ನೇ ಅಕ್ಟೋಬರ್ 2020 ರಂದು ಆನ್ಲೈನ್ ಮೂಲಕ Poco C3 ಸ್ಮಾರ್ಟ್‌ಫೋನ್ ಅನ್ನು ಕಂಪನಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಮಲೇಷ್ಯಾದಲ್ಲಿ Redmi 9C ಅನ್ನು ಬಿಡುಗಡೆ ಮಾಡಿತು. ಮತ್ತು Poco C3 ಅನ್ನು ಅದರ ಮರುಬ್ರಾಂಡೆಡ್ ಆವೃತ್ತಿ ಎಂದು ಕರೆಯಲಾಗುತ್ತಿದೆ. ಈ Poco C ಸರಣಿಯ ಸ್ಮಾರ್ಟ್‌ಫೋನ್‌ನ ಬೆಲೆ ಕೇವಲ 10,000 ರೂಗಳೊಳಗೆ ಬಿಡುಗಡೆಯಾಗಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ Poco C3 ಸ್ಮಾರ್ಟ್ಫೋನ್ 5,000mAH ಬ್ಯಾಟರಿ ಮತ್ತು MediaTek Helio G35 ಪ್ರೊಸೆಸರ್ ಹೊಂದಿದೆ. ಇದಲ್ಲದೆ Poco C3 ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಕ್ಯಾಮೆರಾಗಳ ಬೆಂಬಲವನ್ನು ಪಡೆದುಕೊಂಡಿದೆ. ಆದ್ದರಿಂದ Poco C3 ನ ನಿರ್ದಿಷ್ಟತೆ ಮತ್ತು ಬೆಲೆಯ ಬಗ್ಗೆ ವಿವರವಾಗಿ ಈ ಕೆಳಗೆ ತಿಳಿದುಕೊಳ್ಳೋಣ.
https://twitter.com/s_anuj/status/1313374739100889089?ref_src=twsrc%5Etfw
ಈ Poco C3 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 6.53 ಇಂಚಿನ FHD+ LCD ಡಿಸ್ಪ್ಲೇ ಹೊಂದಿದ್ದು ಇದು 720×1,600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಅಲ್ಲದೆ ಆಕ್ಟಾ-ಕೋರ್ MediaTek Helio G35 ಬೆಂಬಲವನ್ನು ಪಡೆದುಕೊಂಡಿದೆ. ಈ ಫೋನ್ ಅಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಿದೆ. ಇದರಲ್ಲಿ 13MP ಪ್ರೈಮರಿ ಸೆನ್ಸಾರ್, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಹೊಂದಿದೆ. ಅಲ್ಲದೆ ಈ ಫೋನ್‌ನ ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್, 4G LTE, ವೈ-ಫೈ, ಬ್ಲೂಟೂತ್ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಅದೇ ಸಮಯದಲ್ಲಿ ಈ ಫೋನ್ P2i ರೇಟಿಂಗ್ ಪಡೆದಿದೆ.
ಈ Poco C3 ಸ್ಮಾರ್ಟ್‌ಫೋನ್ 3GB RAM + 32GB ಸ್ಟೋರೇಜ್ ಮತ್ತು 4GB RAM + 64GB ಸ್ಟೋರೇಜ್ ರೂಪಾಂತರಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಫೋನ್‌ನ 3GB RAM ರೂಪಾಂತರದ ಬೆಲೆ 7,499 ರೂಗಳಲ್ಲಿ ಮತ್ತು 4GB RAM ರೂಪಾಂತರದ ಬೆಲೆ 8,999 ರೂಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಅನ್ನು ಆರ್ಕ್ಟಿಕ್ ಬ್ಲೂ, ಲೈಮ್ ಗ್ರೀನ್ ಮತ್ತು ಮ್ಯಾಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದು. ಅದೇ ಸಮಯದಲ್ಲಿ ಈ ಸಾಧನದ ಮಾರಾಟವು ಅಕ್ಟೋಬರ್ 16 ರಂದು ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಪ್ರಾರಂಭವಾಗುತ್ತದೆ.