ಈಗ ಚೀನಾದ ಸ್ಮಾರ್ಟ್‌ಫೋನ್ ತಯಾರಕರಾದ OPPO ತನ್ನ ಹೊಸ ಸ್ಮಾರ್ಟ್‌ಫೋನ್ OPPO Reno 3 Pro ಅನ್ನು ಮಾರ್ಚ್ 2 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ ಮತ್ತು ಈಗ ಅಧಿಕೃತ ಪ್ರಕಟಣೆಗೆ ಮುಂಚೆಯೇ ಈ ಫೋನ್ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ರಿಟೇಲ್ ಸ್ಟೋರ್ಗಳಲ್ಲಿ ಪ್ರೀ ಬುಕಿಂಗ್ ಲಭ್ಯವಿದೆ. HDFC ಬ್ಯಾಂಕ್ ಡೆಬಿಟ್ / ಕ್ರೆಡಿಟ್ ಕಾರ್ಡ್ EMI, ICICI ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್ EMI, RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ಮೇಲೆ ಗ್ರಾಹಕ ಸಾಲಗಳಲ್ಲಿ ಅನ್ವಯವಾಗುವ ಶೇಕಡಾ 10% ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಸ್ಮಾರ್ಟ್ಫೋನ್ ತಯಾರಕ ತನ್ನ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾದ ಪೇಜ್ ಅಲ್ಲಿ ಇದರ ಕ್ಯಾಮೆರಾ ಫೀಚರ್ಗಳನ್ನು ಹಂಚಿಕೊಂಡಿದ್ದಾರೆ.
ಈ ಸ್ಮಾರ್ಟ್ಫೋನ್ 64MP ಅಲ್ಟ್ರಾ ಕ್ಲಿಯರ್ ಪ್ರೈಮರಿ ಕ್ಯಾಮೆರಾದೊಂದಿಗೆ 13MP ಟೆಲಿಫೋಟೋ ಲೆನ್ಸ್ ನಂತರ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಮೊನೊ ಲೆನ್ಸ್ ಸಂಯೋಜನೆಯೊಂದಿಗೆ ಈ ಸ್ಮಾರ್ಟ್ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ನೊಂದಿಗೆ ಬರಲಿದೆ. ಇದರ ಹೆಚ್ಚುವರಿಯಾಗಿ ಫೋನಿನ ಮುಂಭಾಗದಲ್ಲಿ 44MP ಸೆನ್ಸರ್ ಇನ್ನೊಂದು 2MP ಡೆಪ್ತ್ ಸೆನ್ಸರ್ ಹೊಂದಿರುತ್ತದೆ. ಎಲ್ಲಡೆ ಈ ಫೋನ್ 4025mAh ಬ್ಯಾಟರಿಯೊಂದಿಗೆ ಲೋಡ್ ಆಗುತ್ತದೆ ಮತ್ತು 30W VOOC ಫ್ಲ್ಯಾಶ್ ಚಾರ್ಜ್ 4.0 ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.
ಇದು ಚೀನಾದಲ್ಲಿ ಬಿಡುಗಡೆಯಾದಾಗ 6.5 ಇಂಚಿನ OLED ಪ್ಯಾನೆಲ್‌ನೊಂದಿಗೆ 90Hz ರಿಫ್ರೆಶ್ ರೇಟ್ ಮತ್ತು ಸೆಲ್ಫಿ ಕ್ಯಾಮೆರಾಕ್ಕಾಗಿ ಒಂದೇ ಪಂಚ್ ಹೋಲ್ ಹೊಂದಿದೆ. ಇದರ ಉತ್ತಮ ಗೇಮಿಂಗ್‌ಗಾಗಿ 180Hz ಟಚ್ ರೆಸ್ಪೋನ್ಸ್ ಹೊಂದಿದೆ. ಇದು HDR10 ಬೆಂಬಲದೊಂದಿಗೆ ಬರುತ್ತದೆ. ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 765G ಚಿಪ್‌ಸೆಟ್ ಹೊಂದಿದೆ. OPPO Reno 3 Pro ಚೀನೀ ಆವೃತ್ತಿಯು 30W VOOC 4.0 ಬೆಂಬಲದೊಂದಿಗೆ 4025 mAh ಬ್ಯಾಟರಿಗಳೊಂದಿಗೆ ಬಿಡುಗಡೆಯಾಗಿದೆ.
ಈ ಸ್ಮಾರ್ಟ್ಫೋನ್ ಫೋನ್ 20 ನಿಮಿಷಗಳಲ್ಲಿ ಶೇಕಡಾ 0 ರಿಂದ 50% ರವರೆಗೆ ಮತ್ತು ಕೇವಲ ಅರ್ಧ ಘಂಟೆಯಲ್ಲಿ ಶೇ 0 ರಿಂದ 70% ರವರೆಗೆ ಹೋಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 5G ಹೊಂದಿದ್ದರೂ ಸಹ ಬ್ಯಾಟರಿ ಬಾಳಿಕೆ ಯಾವುದೇ 4G ಫೋನ್‌ಗಿಂತ ಕಡಿಮೆಯಾಗುವುದಿಲ್ಲ ಎಂದು ಒಪ್ಪೊ ಹೇಳಿದ್ದಾರೆ. ಭಾರತದಲ್ಲಿ ಒಪ್ಪೋ ಫೋನ್ 4G ಆವೃತ್ತಿಯನ್ನು ಪಡೆಯುವ ನಿರೀಕ್ಷೆಯಿದೆ.