OPPO Reno 4 SE ಫೋನ್ 65W ಫಾಸ್ಟ್ ಚಾರ್ಜಿಂಗ್ ಮತ್ತು ಹೊಸ ಪ್ರೊಸೆಸರ್ನೊಂದಿಗೆ ಬಿಡುಗಡೆ! ಬೆಲೆ ಎಷ್ಟಿರಬವುದು?

Updated on 23-Sep-2020
HIGHLIGHTS

ಒನ್ ಪ್ಲಸ್ ನಾರ್ಡ್‌ನೊಂದಿಗೆ ಸ್ಪರ್ಧಿಸುವ ಅವಕಾಶ

65W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಒದಗಿಸಿದ ಕಂಪನಿ

ಗೇಮಿಂಗ್ ಪ್ರೊಸೆಸರ್ ಸಹ ಒಳಗೊಂಡಿದೆ

OPPO Reno 4 SE ಚೀನಾದಲ್ಲಿ ಪ್ರಾರಂಭಿಸಿದೆ. ಭಾರತದಲ್ಲಿ ಇದರ OPPO Reno 4, OPPO Reno 4 Pro ಮತ್ತು Oppo Reno 4 Pro Artist Limited Edition ಬಿಡುಗಡೆಯಾದ ನಂತರ ಈ ಹೊಸ ಸ್ಮಾರ್ಟ್ಫೋನ್ ಕಾಲಿಟ್ಟಿದೆ. ಇದು ಒಟ್ಟಾರೆಯಾಗಿ ಎರಡು ಸ್ಟೋರೇಜ್ ರೂಪಾಂತರಗಳು ಮತ್ತು ಮೂರು ಬಣ್ಣ ಆಯ್ಕೆಗಳನ್ನು ಹೊಂದಿದೆ. ಇದು ಫೋನ್‌ನ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟಪ್, ಫಾಸ್ಟ್ ಚಾರ್ಜಿಂಗ್ ಮತ್ತು 5G ಸಪೋರ್ಟ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಈ ಫೋನ್‌ನ ಅಂಚುಗಳು ಸಹ ತುಂಬಾ ತೆಳ್ಳಗಿರುತ್ತವೆ.

OPPO Reno 4 SE ಬೆಲೆ

ಎರಡು ರೂಪಾಂತರಗಳು ಲಭ್ಯವಿದೆ. 8GB RAM + 128GB ಸ್ಟೋರೇಜ್ ರೂಪಾಂತರದ ಆರಂಭಿಕ ರೂಪಾಂತರದ ಬೆಲೆ 2,499 ಯುವಾನ್ (ಅಂದಾಜು 27,100 ರೂಗಳಾಗಿವೆ). 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 2,799 ಯುವಾನ್ (ಅಂದಾಜು 30,400 ರೂಗಳಾಗಿವೆ). ಸೂಪರ್ ಫ್ಲ್ಯಾಶ್ ಬ್ಲ್ಯಾಕ್, ಸೂಪರ್ ಫ್ಲ್ಯಾಶ್ ಬ್ಲೂ ಮತ್ತು ಸೂಪರ್ ಫ್ಲ್ಯಾಶ್ ವೈಟ್‌ನಲ್ಲಿ ಲಭ್ಯವಿದೆ. ಸೆಪ್ಟೆಂಬರ್ 25 ರಿಂದ ಚೀನಾದಲ್ಲಿ ಮಾರಾಟ ಪ್ರಾರಂಭವಾಗಲಿದೆ. ಈ ಫೋನ್ ನಮ್ಮ ಭಾರತದಲ್ಲಿ ಈ ಸ್ಮಾರ್ಟ್ಫೋನ್ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಇನ್ನು ತಿಳಿದಿಲ್ಲ.

OPPO Reno 4 SE ವಿಶೇಷಣಗಳು

ಇದು 6.43 ಇಂಚಿನ ಪೂರ್ಣ ಎಚ್‌ಡಿ + ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದರ ಸ್ಕ್ರೀನ್ ರಿಫ್ರೆಶ್ ರೇಟ್ 60 Hz ಮತ್ತು ಟಚ್ ಸ್ಯಾಂಪ್ಲಿಂಗ್ ದರ 180 Hz ಆಗಿದೆ. ಸ್ಕ್ರೀನ್-ಟು-ಬಾಡಿ ಅನುಪಾತವು 90.8% ಪ್ರತಿಶತ ಫೋನ್ ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಷನ್ 720 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 8GB RAM ಮತ್ತು 256GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ.

ಇದರ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ. ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸಂವೇದಕವಾಗಿದೆ. ಇದು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಸಹ ಹೊಂದಿದೆ. 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ ಒದಗಿಸಲಾಗಿದೆ.

OPPO Reno 4 SE ಆಂಡ್ರಾಯ್ಡ್ 10 ಆಧಾರಿತ ಕಲರ್ಓಎಸ್ 7.2 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. 5G, 4G, ಡ್ಯುಯಲ್ ಬ್ಯಾಂಡ್ ವೈಫೈ, ಬ್ಲೂಟೂತ್ ವಿ 5.1, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳು. ಇದರ ಬ್ಯಾಟರಿ ಸಾಮರ್ಥ್ಯ 4300mAh ಆಗಿದೆ. ಇದು 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :