OPPO RENO 13 launch in India: ಭಾರತದಲ್ಲಿ ಸ್ಮಾರ್ಟ್ ಫೋನ್ ಬ್ರಾಂಡ್ ಒಪ್ಪೋ (OPPO) ತನ್ನ ಲೇಟೆಸ್ಟ್ OPPO RENO 13 Series ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ OPPO RENO 13 ಮತ್ತು OPPO RENO 13 PRO ಎಂಬ ಎರಡು 5G ಸ್ಮಾರ್ಟ್ ಫೋನ್ಗಳನ್ನು ಪರಿಚಯಿಸಿದೆ. ಈ ಎರಡು ಸ್ಮಾರ್ಟ್ ಫೋನ್ಗಳು MediaTek Dimensity 8350 ಪ್ರೊಸೆಸರ್‌ನೊಂದಿಗೆ 50MP ಸೆಲ್ಫಿ ಕ್ಯಾಮೆರಾವನ್ನು ಸಪೋರ್ಟ್ ಮಾಡುತ್ತವೆ. ಪ್ರಸ್ತುತ ನಾನು ಇಲ್ಲಿ ಕೇವಲ OPPO RENO 13 ಸ್ಮಾರ್ಟ್ ಫೋನ್ ಬಗ್ಗೆ ಮಾತ್ರ ಒಂದಿಷ್ಟು ಆಳವಾದ ಮಾಹಿತಿಯನ್ನು ವಿವರಿಸಿದ್ದೇನೆ.
ಈ OPPO RENO 13 ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹37,999 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹39,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 10% ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯಬಹುದು. OPPO RENO 13 ಸ್ಮಾರ್ಟ್ ಫೋನ್ Ivory White ಮತ್ತು Luminous Blue ಎಂಬ 2 ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು. OPPO RENO 13 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದ್ದು ಇದರ ಮೊದಲ ಮಾರಾಟವನ್ನು 11ನೇ ಜನವರಿ 2024 ಮಧ್ಯಾಹ್ನ 12:00 ಗಂಟೆಯಿಂದ ಫ್ಲಿಪ್ಕಾರ್ಟ್ ಮತ್ತು ಒಪ್ಪೋ ರೆನೋ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಲಭ್ಯವಾಗಲಿದೆ.
OPPO RENO 13 ಸ್ಮಾರ್ಟ್ಫೋನ್ 120Hz Dynamic ರಿಫ್ರೆಶ್ ರೇಟ್ನೊಂದಿಗೆ 6.59 ಇಂಚಿನ 1.5K (1256×2460 ಪಿಕ್ಸೆಲ್) LCD ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 5600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ವಿಶೇಷವಾಗಿ OPPO RENO 13 ಸ್ಮಾರ್ಟ್ ಫೋನ್ ಐಫೋನ್ (iPhone) ಜೊತೆಗೆ ಲೈವ್ ಫೋಟೋಗಳನ್ನು ಶೇರ್ ಮಾಡುವ ಜಬರದಸ್ತ್ ಫೀಚರ್ ಹೊಂದಿರುವ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದಾಗಿದೆ. ಅಂದರೆ ಫೋಟೋಗ್ರಾಫಿಯ ಸೂಪರ್ ಕೂಲ್ ಕ್ಯಾಮೆರಾ ಫೋನ್ ಇದಾಗಿದೆ.
ಫೋಟೋಗಳು ಮತ್ತು ವೀಡಿಯೊಗಳಿಗಾಗಿ OPPO RENO 13 ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿದೆ. ಮೊದಲಿಗೆ 50MP ಪ್ರೈಮರಿ OIS LYT600 ಸೆನ್ಸರ್ f/1.8 ಅಪಾರ್ಚರ್‌ನೊಂದಿಗೆ ಬರುತ್ತದೆ. ಮತ್ತೊಂದು 8MP ಕ್ಯಾಮೆರಾ ಅಲ್ಟ್ರಾ ವೈಡ್ ಅಂಗಲ್ ಕ್ಯಾಮೆರಾ ಮತ್ತು ಕೊನೆಯದಾಗಿ 2MP ಮೊನೋಕ್ರೋಮ್ ಸೆನ್ಸರ್ ಕ್ಯಾಮೆರಾವನ್ನು ಹೊಂದಿದೆ. ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಕೊನೆಯದಾಗಿ OPPO RENO 13 ಸ್ಮಾರ್ಟ್ಫೋನ್ MediaTek Dimensity 8350 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಅಲ್ಲದೆ ಕಂಪನಿ ಗೇಮರ್ಗಳಿಗೆ ಉತ್ತಮ ಅನುಭವ ನೀಡಲು AI Hyper Boost ಫೋನ್ ColorOS 15 based on Android 15 ಜೊತೆಗೆ ಬರುತ್ತದೆ. OPPO RENO 13 ಸ್ಮಾರ್ಟ್ಫೋನ್ 8GB RAM + ವರ್ಚುಯಲ್ 12GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ನೀಡುತ್ತದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ WiFi X1 SignalBoost, Bluetooth 5.4, GPS, WiFi6, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP66, IP68 ಮತ್ತು IP69 ರೇಟಿಂಗ್ ಸಪೋರ್ಟ್ ಮಾಡುತ್ತದೆ.