OPPO Reno 13 5G Series India Launch: ಜನಪ್ರಿಯ ಒಪ್ಪೋ (OPPO) ಸ್ಮಾರ್ಟ್ಫೋನ್ ಕಂಪನಿ ತನ್ನ ಮುಂಬರಲಿರುವ OPPO Reno 13 5G Series ಅನ್ನು ಇದೆ 9ನೇ ಜನವರಿ 2025 ರಂದು ಮಧ್ಯಾಹ್ನ 12pm ಗಂಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ. OPPO Reno 13 5G Series ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದಾದರೆ ಇದರಲ್ಲಿ MediaTek Dimensity 8350 ಚಿಪ್‌ನೊಂದಿಗೆ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವುದರೊಂದಿಗೆ ಸುಮಾರು ₹35,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಈ ಮುಂಬರಲಿರುವ OPPO Reno 13 5G Series ಅಡಿಯಲ್ಲಿ ಎರಡು ರೂಪಾಂತರಗಳನ್ನು ನಿರೀಕ್ಷಿಸಲಾಗಿದ್ದು ಮೊದಲಿಗೆ OPPO Reno 13 5G ಸ್ಮಾರ್ಟ್ಫೋನ್ ಭಾರತದಲ್ಲಿನ ಬೆಲೆಯ ಬಗ್ಗೆ ಮಾತನಾಡುವುದಾದರೆ 8GB RAM ಮತ್ತು 128GB ಸ್ಟೋರೇಜ್ 37,999 ರೂಗಳಿಗೆ ಮತ್ತು ಇದರ 8GB RAM ಮತ್ತು 256GB ರೂಪಾಂತರವನ್ನು 39,999 ರೂಗಳಿಗೆ ನಿರೀಕ್ಷಿಸಬಹುದು.
ಅಲ್ಲದೆ ಕಂಪನಿ ಬೀಡುಗಡೆಗೂ ಮುಂಚಿತವಾಗಿ ಇದರ ಅನೇಕ ಫೀಚರ್ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಇದರೊಂದಿಗೆ OPPO Reno 13 Pro 5G ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ 49,999 ರೂಗಳಿಗೆ ಮತ್ತು ಇದರ 12GB RAM ಮತ್ತು 512GB ರೂಪಾಂತರವನ್ನು 54,999 ರೂಗಳಿಗೆ ನಿರೀಕ್ಷಿಸಬಹುದು.
Also Read: 20+ OTT ಪ್ರಯೋಜನಗಳನ್ನು 30 ದಿನಗಳಿಗೆ ನೀಡುವ ಸೂಪರ್ ಕಾಂಬೋ Airtel Recharge ಪ್ಲಾನ್ ಬೆಲೆ ಎಷ್ಟು?
OPPO Reno 13 5G ಮತ್ತು OPPO Reno 13 Pro 5G ಈ ಎರಡೂ MediaTek Dimensity 8350 ಚಿಪ್‌ನೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಆಂತರಿಕ ಸಿಗ್ನಲ್‌ಬೂಸ್ಟ್ X1 ಚಿಪ್‌ಗಳನ್ನು ಅಲ್ಲದೆ ಇದರ ಡಸ್ಟ್ ಮತ್ತು ವಾಟರ್ ಪ್ರೊಫ್ ಪ್ರೊಟೆಕ್ಷನ್ಗಾಗಿ IP68 ಮತ್ತು IP69 ರೇಟಿಂಗ್‌ಗಳನ್ನು ಪೂರೈಸುತ್ತಾರೆ. ಇದರ OPPO Reno 13 5G 5600mAh ಮತ್ತು OPPO Reno 13 Pro 5G ಸ್ಮಾರ್ಟ್ಫೋನ್ 5800mAh ಬ್ಯಾಟರಿಗಳನ್ನು ಪಡೆಯುತ್ತವೆ. ಇದರೊಂದಿಗೆ 80W ವೈರ್ಡ್ SuperVOOC ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
Oppo Reno 13 Pro 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಜೊತೆಗೆ 3.5x ಆಪ್ಟಿಕಲ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಹೊಂದಿದೆ. ಹ್ಯಾಂಡ್‌ಸೆಟ್ ಗ್ರ್ಯಾಫೈಟ್ ಗ್ರೇ ಮತ್ತು ಮಿಸ್ಟ್ ಲ್ಯಾವೆಂಡರ್ ಶೇಡ್‌ಗಳಲ್ಲಿ ಬರಲಿದೆ ಎಂದು ದೃಢಪಡಿಸಲಾಗಿದೆ. ವೆನಿಲ್ಲಾ ಆಯ್ಕೆಯನ್ನು ಐವರಿ ವೈಟ್ ಮತ್ತು ಲುಮಿನಸ್ ಬ್ಲೂ ಬಣ್ಣಗಳಲ್ಲಿ ನೀಡಲಾಗುವುದು. ಅವುಗಳು ಫ್ಲಿಪ್‌ಕಾರ್ಟ್ ಮತ್ತು ಒಪ್ಪೋ ಇಂಡಿಯಾ ಇ-ಸ್ಟೋರ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತವೆ.